Friday, January 3, 2025

ಕನ್ನಡಿಗ ನವೀನ್ ಹಾವಣ್ಣನವರ ಅಮೆರಿಕಾ ಕೌನ್ಸಿಲರ್ ಆಗಿ ಆಯ್ಕೆ

ವಿಜಯಪುರ : ವಿಜಯಪುರ ಮೂಲದ ಕನ್ನಡಿಗ ನವೀನ್ ಹಾವಣ್ಣನವರ ಅಮೇರಿಕಾದಲ್ಲಿ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದಾರೆ.

ಅಮೇರಿಕಾದ ನ್ಯೂಯಾರ್ಕ್ ರಾಜ್ಯದ ರೋಚೆಸ್ಟರ್ ಜಿಲ್ಲೆಯ ಪೀಟ್ಸ್ ಫೋರ್ಡ್ ಪ್ರದೇಶದ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದಾರೆ. ನವೀನ್ ಅವರು ಪೀಟ್ಸ್ ಫೋರ್ಡ್ ಪ್ರದೇಶದ ಕೌನ್ಸಿಲರ್ ಆಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಕೌನ್ಸಿಲರ್ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ನವೀನ್ ಸ್ಪರ್ಧೆ ಮಾಡಿದ್ದರು. ನವೀನ್ ಅವರು ರಿಪಬ್ಲಿಕನ್ ಪಾರ್ಟಿ ಅಭ್ಯರ್ಥಿ ಎದುರು 33 ಮತಗಳ ಅಂತರಿಂದ ಗೆಲುವು ಕಂಡಿದ್ದಾರೆ. ನಾಲ್ಕು ವರ್ಷಗಳ ಅವಧಿಗೆ ಅವರು ಆಯ್ಕೆಯಾಗಿದ್ದಾರೆ.

ನವೀನ್ ಹಾವಣ್ಣವರ ಅವರು 2009-10ರಲ್ಲಿ ಅಮೇರಿಕಾಕ್ಕೆ ತೆರಳಿದ್ದರು. ಕಳೆದ 14 ವರ್ಷಗಳಿಂದ ಅಮೇರಿಕಾದಲ್ಲಿಯೇ ವಾಸವಾಗಿದ್ದಾರೆ. ಪತ್ನಿ ಕ್ಯಾಥರಿನ್ ಹಾಗೂ ಇಬ್ಬರು ಮಕ್ಕಳೊಂದಿಗೆ ಅಮೇರಿಕಾದಲ್ಲಿ ನವೀನ್ ವಾಸವಿದ್ದಾರೆ.

ಕಲಬುರಗಿಯಲ್ಲಿ ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಪದವಿ

ಇವರು ವಿಜಯಪುರದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಶಿಕ್ಷಣ ಪಡೆದಿದ್ದರು. ಬಳಿಕ, ಹಾನಸದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪಿಯು ಶಿಕ್ಷಣ ಮುಗಿಸಿ, ಕಲಬುರಗಿಯ ಶರಣ ಬಸವೇಶ್ವರ ಕಾಲೇಜಿನಲ್ಲಿ ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿದ್ದರು.

RELATED ARTICLES

Related Articles

TRENDING ARTICLES