ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಕಾಂಗ್ರೆಸ್ನ ನಾಯಕರ ಜೊತೆ ಬೆಂಗಳೂರಿನ ಖಾಸಗಿ ಹೋಟೆಲ್ವೊಂದರಲ್ಲಿ ರಹಸ್ಯ ಸಭೆ ನಡೆಸಿದ್ದಾರೆ. ಈ ವೇಳೆ ಭೋಜನಕೂಟ ಸಹ ನಡೆಸಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಮೈತ್ರಿ ಪಾಳಯದಲ್ಲಿ ಆತಂಕ ಹೆಚ್ಚಿದೆ.
ಮಾಜಿ ಸಚಿವ ಚೆಲುವರಾಯಸ್ವಾಮಿ ಮತ್ತು ಟೀಮ್ ಜೊತೆ ಸುಮಲತಾ ಅಂಬರೀಶ್ ನಡೆಸಿದ ಸಭೆಯ ವಿಡಿಯೋ ರಿಲೀಸ್ ಆಗುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರನ್ನು ಭೇಟಿ ಮಾಡಿದ್ದಾರೆ.
ಮೈತ್ರಿಯ ಎರಡೂ ಪಕ್ಷಗಳಲ್ಲಿ ಸಂಶಯದ ಭೂತ ಮನೆ ಮಾಡಿದ್ದು, ಎರಡೂ ಪಕ್ಷಗಳ ನಡುವಿನ ಅಸಮಧಾನ ಈ ವಿಡಿಯೋ ಮೂಲಕ ಸ್ಫೋಟಗೊಂಡಿತಾ ಅನ್ನೋ ಪ್ರಶ್ನೆ ಎದುರಾಗಿದೆ.
ಕಾಂಗ್ರೆಸ್ ನಾಯಕರ ಜೊತೆ ಸುಮಲತಾ ರಹಸ್ಯ ಸಭೆ..!
TRENDING ARTICLES