Wednesday, October 2, 2024

ಮುಂದೆ ಹೋಗಿ ಎಂದಿದ್ದಕ್ಕೆ ಕಂಡೆಕ್ಟರ್​ಗೆ ಚಾಕು ಇರಿದ ಪ್ರಯಾಣಿಕ

ಬೆಂಗಳೂರು : ಅಪರಿಚಿತ ವ್ಯಕ್ತಿಯೊಬ್ಬ ಚಾಕು ಹಿರಿದ ಘಟನೆ ಬೆಂಗಳೂರಿನ ವೈಟ್​ಫೀಲ್ಡ್​ನ ಐಟಿಪಿಎಲ್ ಬಸ್​ಸ್ಟಾಪಿನಲ್ಲಿ ನಡೆದಿದೆ. ಚಾಕು ಇರಿತದಿಂದ ಬಸ್ ಕಂಡೆಕ್ಟರ್ ಯೋಗಿಶ್ ತೀವ್ರವಾಗಿ ಗಾಯಗೊಂಡಿದ್ದು , ವೈದೇಹಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನಿಡಲಾಗುತ್ತಿದೆ.

ಡಿಪೋ-13ರ ವೋಲ್ವೊ ಬಸ್​ನಲ್ಲಿ ಘಟನೆ ನಡೆದಿದ್ದು. ಬಸ್ ಸಂಖ್ಯೆ KA- 57-F0015ನಲ್ಲಿ ಘಟನೆ ನಡೆದಿದೆ. ಬಸ್ ಹತ್ತಿದ ಪ್ರಯಾಣಿಕ ಹುಚ್ಚನಂತೆ ವರ್ತಿಸಿದ್ದು. ಕಂಡೆಕ್ಟರ್​ಗೆ ಚಾಕುವಿನಿಂದ ಎರಡ್ಮೂರು ಬಾರಿ ಇರಿದಿದ್ದಾನೆ. ನಂತರ ಬಸ್ ನಲ್ಲಿದ್ದ ಸುತ್ತಿಗೆಯಿಂದ ಬಸ್ ಗಾಜುಗಳನ್ನು ಪುಡಿ ಮಾಡಿ, ಬಸ್ ಡೋರನ್ನು ಕಾಲಿನಿಂದ ಗುದ್ದಿ ಹುಚ್ಚನಂತೆ ವರ್ತಿಸಿದ್ದಾನೆ. ಸದ್ಯ ಆರೋಪಿಯನ್ನು ವೈಟ್ ಫೀಲ್ಡ್ ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಯಾಣಿಕರು ತುಂಬಿದ್ದ ಬಸ್​ನಲ್ಲಿ ಘಟನೆ ಘಟಿಸಿದ್ದು. ಪ್ರಯಾಣಿಕ ಚಾಕು ಇರಿಯುತ್ತಿದ್ದಂತೆ ಗಾಬರಿಯಾದ ಇತರ ಪ್ರಯಾಣಿಕರು ಕಿರುಚಿಕೊಂಡು ಬಸ್​ನಿಂದ ಕೆಳಗೆ ಇಳಿದು ಓಡಿ ಹೋಗಿದ್ದಾರೆ.

ಚಾಕು ಇರಿದ ವ್ಯಕ್ತಿಯು ಇಂದು (ಅ.01) ಬೆಳಿಗ್ಗೆ ವೈಟ್​ಫಿಲ್ಡ್​ನ ಖಾಸಗಿ ಕಂಪನಿಯಲ್ಲಿ ಇಂರ್ಟವ್ಯೂಗೆ ಹೋಗಿದ್ದನು ಆದರೆ ಆತನಿಗೆ ಕೆಲಸ ಸಿಗದೆ ಇರುವ ಕಾರಣ ಸ್ಥಿಮಿತ ಕಳೆದುಕೊಂಡು ಈ ರೀತಿ ಮಾಡಿದ್ದಾನೆ. ಪೋಲಿಸರು ಬಳಿಯು ಕೂಡ ನಾನು ಹೊರಗೆ ಇರುವುದಿಲ್ಲ ನನ್ನನ್ನು ಜೈಲಿಗೆ ಕಳುಹಿಸಿ ಎಂದು ಗೋಗರಿದಿದ್ದಾನೆ ಎಂಬ ಮಾಹಿತಿ ದೊರೆತಿದೆ.

 

RELATED ARTICLES

Related Articles

TRENDING ARTICLES