Wednesday, October 2, 2024

ಮಧ್ಯ ಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ; ಇಸ್ರೇಲ್ ಮೇಲೆ ಇರಾನ್ ಮಿಸೈಲ್ ದಾಳಿ

ಹಿಜ್ಬುಲ್ಲಾದ ಮುಖ್ಯಸ್ಥ ಹಸನ್ ನಸ್ರಲ್ಲಾನ ಹತ್ಯೆಯ ಬಳಿಕ ಮೊದಲ ಬಾರಿಗೆ ಇರಾನ್ ಇಸ್ರೇಲ್ ಮೇಲೆ ವಾಯು ದಾಳಿ ನಡೆಸಿದ್ದು. ಸಾವಿರಾರು ಮಿಸೈಲ್ ಮೂಲಕ ಇಸ್ರೇಲ್ ರಾಜಧಾನಿ ಟೆಲ್ ಅವೀವ್ ಮೇಲೆ ದಾಳಿ ನಡೆಸಿದ್ದಾರೆ.

ಇರಾನ್ ಮಿಸೈಲ್ ದಾಳಿಯನ್ನು ಐರನ್ ಡೋಮ್ ಮೂಲಕ ತಡೆದಿರುವ ಇಸ್ರೇಲ್ ತನ್ನೆಲ್ಲಾ ಪ್ರಜೆಗಳನ್ನು ಬಂಕರ್​ಗಳಿಗೆ ತೆರಳಲು ಸೂಚನೆ ನೀಡಿದೆ. ಇಸ್ರೇಲ್​ನಲ್ಲಿ ವಿಮಾನ ಹಾರಾಟವನ್ನ ರದ್ದುಗೊಳಿಸಲಾಗಿದ್ದು. ರಾಜಧಾನಿ ಟೆಲ್ ಅವೀವ್​ನ 10 ಲಕ್ಷ ಜನರು ಈ ದಾಳಿಯಿಂದ ಕಂಗಾಲಾಗಿದ್ದಾರೆ.

ಇರಾನ್ ದಾಳಿಗೆ ಪ್ರತಿಕ್ರಿಯೆ ನೀಡಿರುವ ಅಮೇರಿಕ ಅಧ್ಯಕ್ಷ ಜೋ ಬೈಡನ್ ಇಸ್ರೇಲ್ ಪರ ನಾವಿದ್ದೇವೆ ಎಂದು ಪುನರುಚ್ಚರಿಸಿದ್ದಾರೆ . ಇಡೀ ಜಗತ್ತು ಇಸ್ರೇಲ್​ನ ಮುಂದಿನ ಹೆಜ್ಜೆಯ ಬಗ್ಗೆ ಗಾಬರಿಯಾಗಿವೆ.

ಇರಾನ್​ಗೆ ಸ್ವಾತಂತ್ರ್ಯ ಕೊಡಿಸುತ್ತೇವೆ ಎಂದ ನೆತನ್ಯಾಹು

ಇರಾನ್ ಜನರು ಖಮೇನಿಗಳ ಆಡಳಿತದಿಂದ ಸ್ವಾತಂತ್ರ್ಯ ಕಳೆದುಕೊಂಡಿದ್ದಾರೆ. ಖಮೇನಿಗಳು ಹಣವನ್ನು ಉಗ್ರರನ್ನು ಪೋಷಿಸಲು ವ್ಯಯಿಸುತ್ತಿದ್ದಾರೆ. ಇದರಿಂದಾಗಿ ಇರಾನ್ ಜನರು ಶಿಕ್ಷಣ, ಉದ್ಯೊಗದಂತಹ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ನಾವು ಅವರಿಗೆ ಆದಷ್ಟು ಬೇಗ ಸ್ವಾತಂತ್ರ್ಯ ಕೊಡಿಸುತ್ತೇವೆ ಎಂದು ಪರೋಕ್ಷವಾಗಿ ಇರಾನ್ ಸುಪ್ರೀಂ ಲೀಡರ್ ಅಲಿ ಖಮೇನಿಯನ್ನು ಹತ್ಯೆ ಮಾಡಿತ್ತೇವೆ ಎಂದು ಹೇಳೀದ್ದಾರೆ.

 

RELATED ARTICLES

Related Articles

TRENDING ARTICLES