Wednesday, October 2, 2024

ಮದುವೆಗೆ ಒಪ್ಪದ ಸೀರಿಯಲ್ ನಟಿ : ಮನನೊಂದ ಯುವಕ ಆತ್ಮಹತ್ಯೆ

ಬೆಂಗಳೂರು : ಸೀರಿಯಲ್ ನಟಿಯೊಬ್ಬಳು ಮದುವೆ ನಿರಾಕರಿಸಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಹುಳಿಮಾವು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕ 25 ವರ್ಷದ ಮದನ್ ಎಂದು ತಿಳಿದು ಬಂದಿದೆ.

ಯುವಕನು ಸೀರಿಯಲ್ ನಟಿ ವೀಣಾ ಜೊತೆ ಲಿವ್ ಇನ್ ಸಂಬಂಧದಲ್ಲಿದ್ದನು. ನೆನ್ನೆ (ಅ.01) ರಾತ್ರಿ ಒಟ್ಟಿಗೆ  ಪಾರ್ಟಿ ಮಾಡಿದ್ದ ಜೋಡಿ. ಈ ಪಾರ್ಟಿಯಲ್ಲಿ ಮದನ್ ವೀಣಾಗೆ ಮದುವೆ ಪ್ರಸ್ತಾಪ ಮಾಡಿದನು ಆದರೆ ನಟಿಯು ಈ ಪ್ರಸ್ತಾಪ ನಿರಾಕರಿಸಿದಕ್ಕೆ ಮನನೊಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.

ಸೀರಿಯಲ್ ನಟಿ ವೀಣಾಳನ್ನು ಹುಳಿಮಾವು ಫೋಲಿಸರು ವಶಕ್ಕೆ ಪಡೆದಿದ್ದು. ಮುಂದಿನ ತನಿಖೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES