Tuesday, May 7, 2024

ಸಿಎಂ ಸಿದ್ದರಾಮಯ್ಯ, ಡಿಕೆ ಸುರೇಶ್ ಸೇರಿದಂತೆ ಕಾಂಗ್ರೆಸ್​​ ಮುಖಂಡರ ವಿರುದ್ದ ಬಿಜೆಪಿ ದೂರು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಕೆ ಸುರೇಶ್​ ಸೇರಿದಂತೆ ಹಲವು ಕಾಂಗ್ರೆಸ್​ ನಾಯಕರ ವಿರುದ್ದ  ವಿಧಾನ ಪರಿಷತ್​ ಸದಸ್ಯ ಚಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ದೂರಿನಲ್ಲಿ ಹಲವು ಲೋಪಗಳು ಹಾಗು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗಳನ್ನು ಉಲ್ಲೇಖಿಸಿದ್ದಾರೆ.

1. ಇಂದು ವರುಣಾದಲ್ಲಿ ಮತದಾನ ಮಾಡುವಾಗ ಸಿಎಂ ಸಿದ್ದರಾಮಯ್ಯ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ, ಸಿಎಂ ಆಗಿದ್ದರೂ ಬೆಂಬಲಿಗರ ಸಹಿತ ವೊಟಿಂಗ್ ಮಾಡಿದ್ದಾರೆ.

2. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗ್ಯಾರೆಂಟಿ ಕಾರ್ಡ್ ಗಳ ಹಂಚಿಕೆ, ನಿನ್ನೆ ಬಹಿರಂಗವಾಗಿ ಗ್ಯಾರಂಟಿ ಕಾರ್ಡ್‌ಗಳ ಹಂಚಿಕೆ ಆರೋಪ.

3. ಖಾಸಗಿ ಮಾಲ್ ಹೆಸರಿನ ಗಿಫ್ಟ್​ ಕೂಪನ್ ಹಂಚಿಕೆ ಆರೋಪ, ಕಾಂಗ್ರೆಸ್ ಗಿಫ್ಟ್ ಕೂಪನ್ ವಿತರಣೆ ಆರೋಪ.

ಇದನ್ನೂ ಓದಿ: ದೇವೇಗೌಡರಿಗೆ ಮಾಹಿತಿ ಕೊರತೆ ಇದೆ: ಕ್ಷೇತ್ರ ತ್ಯಾಗ ಮಾಡಿದ್ದು ತಪ್ಪಾ?- ಸಂಸದೆ ಸುಮಲತಾ

4. ಬಂಗಾರಪೇಟೆಯಲ್ಲಿ ಕಾಂಗ್ರೆಸ್ ಮುಖಂಡನಿಂದ ಹಣ ಹಂಚಿಕೆ, ಬಹಿರಂಗವಾಗಿ ಮತಗಟ್ಟೆ ಎದುರೇ ಮತದಾರರಿಗೆ ಹಣ ಹಂಚಿಕೆ ಆರೋಪ

5.ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ನಿಂದ ನೀತಿ ಸಂಹಿತೆ ಉಲ್ಲಂಘನೆ, ಬಿ ವಿ ಶ್ರೀನಿವಾಸ್ ಪ್ರತಿಭಟನೆ ಮಾಡಿ ಉಲ್ಲಂಘನೆ ಆರೋಪ, ಮತದಾನ ದಿನ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಪ್ರತಿಭಟಿಸಿದ ಆರೋಪ
ಐದು ಅಂಶಗಳ ಉಲ್ಲೇಖಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

RELATED ARTICLES

Related Articles

TRENDING ARTICLES