Sunday, May 5, 2024

ನಾನು ಜೋಶಿ ಎದುರು ನಿಂತು ಸೋತಿರಬಹುದು, ಸತ್ತಿಲ್ಲ : ವಿನಯ್ ಕುಲಕರ್ಣಿ

ಹಾವೇರಿ : ನಾನು ಪ್ರಲ್ಹಾದ್ ಜೋಶಿ ಎದುರು ನಿಂತು ಸೋತಿರಬಹುದು. ಆದರೆ, ನಾನು ಸತ್ತಿಲ್ಲ. ಜೋಶಿ ನನ್ನ ಮೇಲೆ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಶಾಸಕ ವಿನಯ್ ಕುಲಕರ್ಣಿ ವಾಗ್ದಾಳಿ ನಡೆಸಿದ್ದಾರೆ.

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, ಪ್ರಲ್ಹಾದ್ ಜೋಶಿಗೆ ನಾಚಿಕೆ ಬರಬೇಕು, ಮಹದಾಯಿ ಏನು ಆಯಿತು? ಎಂದು ಪ್ರಶ್ನೆ ಮಾಡಿದ್ದಾರೆ.

ಮನುಷ್ಯರನ್ನ ತುಳಿಯುವುದು, ಐಟಿ ದಾಳಿ, ಸಿಬಿಐ ಇದನ್ನ ಬಿಟ್ಟು ಪ್ರಲ್ಹಾದ್ ಜೋಶಿಯವರು ಏನೂ ಮಾಡಿಲ್ಲ‌. ಜೋಶಿಯವರು ನಿಮ್ಮ ಊರಿಗೆ ಬಂದಾಗ ಕೆಲಸ ಏನು ಆಗಿದೆ ಎಂದು ಅವರನ್ನೇ ಪ್ರಶ್ನೆ ಮಾಡಿ. ನಾನೇನು ಆತಂಕವಾದಿ ಏನೂ..? ನಮ್ಮ ಜಿಲ್ಲೆಗೆ ನನ್ನನ್ನ ಕಾಲಿಡಲು ಇವತ್ತು ಜೋಶಿ ಬಿಟ್ಟಿಲ್ಲ ಎಂದು ಕಿಡಿಕಾರಿದ್ದಾರೆ.

ಸುಳ್ಳು ಭರವಸೆಗಳಿಗೆ ತಲೆ ಕೆಡಿಸಿಕೊಳ್ಳಬೇಡಿ

ಲಿಂಗಾಯತ ಸಮಾಜಕ್ಕೆ ಮಾನ ಮರ್ಯಾದೆ ಇದ್ದರೆ ಪ್ರಲ್ಹಾದ್ ಜೋಶಿ ಅಂತವನಿಗೆ ಮತ ಹಾಕಬೇಡಿ. ಪ್ರಲ್ಹಾದ್ ಜೋಶಿ ಅವರನ್ನು ಮನೆಗೆ ಕಳುಹಿಸಲು ವಿನೋದ ಅಸೂಟಿ‌ಗೆ ಮತ ಹಾಕಿ‌. ನನ್ನ ಮೇಲೆ ನಿಮಗೆ ಪ್ರೀತಿ ಇದ್ದರೆ ಕಾಂಗ್ರೆಸ್ ಮತ ಹಾಕಿ. ಸತ್ತವರ ಮನೆಯಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಹೇಳಿದ್ದಾರೆ.

ಸುಳ್ಳು ಭರವಸೆಗಳಿಗೆ ತಲೆ ಕೆಡಿಸಿಕೊಳ್ಳಬೇಡಿ

10 ವರ್ಷಗಳಿಂದ ಬಿಜೆಪಿಯವರು ಏನೂ ಮಾಡಿಲ್ಲ. ಸುಳ್ಳು ಭರವಸೆಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ಜನರ ಕಷ್ಟಕ್ಕೆ ಸ್ಪಂದಿಸಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ. ಬರ ಪರಿಹಾರ ಕೊಡಲು ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾಯಿತು. ಕಳೆದ 20 ವರ್ಷಗಳಿಂದ ಈ ಭಾಗದಲ್ಲಿ ಜೋಶಿಗೆ ಮತ ನೀಡಿ ಸಂಸದರನ್ನಾಗಿ ಮಾಡಿದ್ರಿ. ಆದ್ರೆ, ಅವರು ಇಷ್ಟು ದಿನ ಎಲ್ಲಿ ಹೋಗಿದ್ದರು? ಯುವಕರ ಮತ ಸೆಳೆಯಲು ಕಬಡ್ಡಿ ಆಡಿಸಿದ್ರು. ಇದರಿಂದ ಬಡ ಜನರ ಹೊಟ್ಟೆ ತುಂಬುತ್ತಾ‌? ಎಂದು ವಿನಯ್ ಕುಲಕರ್ಣಿ ಆಕ್ರೋಶ ಹೊರಹಾಕಿದ್ದಾರೆ.

RELATED ARTICLES

Related Articles

TRENDING ARTICLES