Monday, May 6, 2024

ಗಗನಕ್ಕೇರಿದ ತರಕಾರಿ ಬೆಲೆ : ಗ್ರಾಹಕರ ಜೇಬಿಗೆ ಕತ್ತರಿ!

ಬೆಂಗಳೂರು: ರಾಜ್ಯದಲ್ಲಿ ಬರಗಾಲದ ಹಿನ್ನೆಲೆ ಬಹುತೇಕ ತರಕಾರಿಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದ್ದು ಗ್ರಾಮಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ತರಕಾರಿ ಬೆಳೆಯಲು ನೀರಿನ ಕೊರತೆ ಉಂಟಾಗಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.

ಇನ್ನು ಇಂದಿನ ತರಕಾರಿಗಳ ಬೆಲೆ ನೋಡೋದಾದರೇ, ಒಂದೇ ದಿನದಲ್ಲಿ ಬೀನ್ಸ್ 140ರೂಪಾಯಿಗೆ ಏರಿಕೆಯಾಗಿದ್ದೆ. ನಿನ್ನೆ 100 ರೂಪಾಯಿ ಇದ್ದ ಬಿನ್ಸ್​ ಇಂದು 140 ರೂಪಾಯಿಗೆ ಏರಿಕೆ ಕಂಡಿದೆ. ಮೆಣಸಿಕಾಯಿ ಕೆಜಿಗೆ 70 ರೂ. ಆಗಿದೆ. ಅಲ್ಲದೇ ಟಮೋಟ ಕೆಜಿಗೆ 25ರಿಂದ 40 ರೂಪಾಯಿ ಇದೆ. ಇನ್ನು
ಗೆಡ್ಡೆಕೋಸ್ ಕೆಜಿಗೆ 50 ಆದ್ರೆ, ಬಟಾಣಿ 140 ಇದೆ.

ಇದನ್ನೂ ಓದಿ: ರಾಜ್ಯದಲ್ಲಿ ಇಂದು ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ!

ಅಲ್ಲದೇ ಕ್ಯಾರೆಟ್ 40 ರೂಪಾಯಿ ಇದ್ದರೆ, ಸೌತೆಕಾಯಿ 30 ರೂಪಾಯಿಗೆ ಮಾರಟವಾಗಿದೆ. ಇನ್ನು ಬೆಂಡೆಕಾಯಿ ಕೆಜಿಗೆ 30ರೂ. ಇದ್ದರೆ. ತೊಂಡೆಕಾಯಿ ಸಹ 30ಗೆ ಮಾರಟವಾಗುತ್ತಿದೆ. ಆಲೂಗಡ್ಡೆ 50 ರೂಪಾಯಿ ಇದ್ದರೆ, ಕೊತ್ತಂಬರಿ ಒಂದು ಕಟ್​​ಗೆ 20ರಿಂದ 30ಗೆ ಮಾರಟವಾಗುತ್ತಿದೆ.

RELATED ARTICLES

Related Articles

TRENDING ARTICLES