Sunday, May 19, 2024

ಬ್ರೆಜಿಲ್‌ನಲ್ಲಿ ಸುರಿದ ಭಾರಿ ಮಳೆಗೆ 78 ಮಂದಿ ಸಾವು, ಮನೆ ತೊರೆದ 1.5 ಲಕ್ಷಕ್ಕೂ ಹೆಚ್ಚು ಸಂತ್ರಸ್ತರು

ಬ್ರೆಜಿಲ್‌ನ ದಕ್ಷಿಣ ಭಾಗದಲ್ಲಿರುವ ‘ರಿಯೊ ಗ್ರಂಡ್ ಡೊ ಸುಲ್’ ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪ್ರವಾಹದಲ್ಲಿ ಈವರೆಗೆ 78 ಜನರು ಮೃತಪಟ್ಟಿದ್ದು, 100ಕ್ಕೂ ಅಧಿಕ ಜನರು ಕಾಣೆಯಾಗಿದ್ದಾರೆ ಎಂದು ರಾಜ್ಯ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ.

ಪ್ರವಾಹದಿಂದಾಗಿ 1,15,000ಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ. ಬಹುತೇಕ ನಗರಗಳೂ ಸಂಪೂರ್ಣವಾಗಿ ಜಲಾವೃತಗೊಂಡಿವೆ. ಕೆಲವು ನಗರಗಳಲ್ಲಿ 150 ವರ್ಷದಲ್ಲೇ ಅತ್ಯಧಿಕ ನೀರಿನ ಮಟ್ಟ ಕಾಣಿಸಿಕೊಂಡಿದೆ.

ಇದನ್ನೂ ಓದಿ: ಇನ್ನು 5 ದಿನಗಳಲ್ಲಿ ರಾಜ್ಯಾದಂತ ಭಾರಿ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

ಕಳೆದ ಒಂದು ವಾರಕ್ಕಿಂತ ಹೆಚ್ಚು ಸಮಯದಿಂದ ನಿರಂತರವಾಗಿ ಮಳೆ ಸುರಿಯುತ್ತಲೇ ಇದೆ.
ಬೆಂಟೊ ಗೊನ್ಮಾಲ್ಟ್ ಮತ್ತು ಕೊಟಿಪೋರಾ ನಗರಗಳ ನಡುವಿನ ಜಲವಿದ್ಯುತ್‌ ಸ್ಥಾವರದಲ್ಲಿನ ಅಣೆಕಟ್ಟು ಭಾಗಶಃ ಕುಸಿದಿದೆ. ರಾಜ್ಯದಲ್ಲಿ ಇಂಟರ್‌ನೆಟ್, ದೂರವಾಣಿ ಸೇವೆ ಮತ್ತು ವಿದ್ಯುತ್ ಸೇವೆ ಸ್ಥಗಿತಗೊಂಡಿದ್ದು, ಜನರು ಪಕ್ಕದ ರಾಜ್ಯಗಳ ತಮ್ಮ ಸಂಬಂಧಿಕರ ಮನೆಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ವರದಿಯಾಗಿದೆ.

RELATED ARTICLES

Related Articles

TRENDING ARTICLES