Thursday, May 9, 2024

ಮಾಲ್ಡೀವ್ಸ್​ ಚುನಾವಣೆ: ಭಾರತ ವಿರೋಧಿ ಮುಯಿಝುಗೆ ಭರ್ಜರಿ ಗೆಲುವು

ಮಾಲ್ಡೀವ್ಸ್‌ನಲ್ಲಿ ನಿನ್ನೆ ನಡೆದ ಸಂಸದೀಯ ಚುನಾವಣೆಯಲ್ಲಿ ಅಧ್ಯಕ್ಷ ಮೊಹಮ್ಮದ್ ಮುಯಿಝು ನೇತೃತ್ವದ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ 60ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಗೆಲುವು ಸಾಧಿಸಿದೆ.

ಮಾಲ್ಡೀವ್ಸ್‌ನ ಒಟ್ಟು 93 ಕ್ಷೇತ್ರಗಳಲ್ಲಿ ಸಂಸದರನ್ನು ಆಯ್ಕೆ ಮಾಡಲು ಮತದಾನ ನಡೆದಿದೆ. ಮಾಲ್ಡೀವ್ಸ್‌ನಲ್ಲಿ ಪ್ರಭಾವವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಭಾರತ ಮತ್ತು ಚೀನಾದ ನೀತಿಗಳ ಮೇಲೆ ನಿಗಾ ಇರಿಸಿರುವ ಮುಯಿಝುಗೆ ಈ ಚುನಾವಣೆಯು ಅತ್ಯಂತ ಮಹತ್ವದ್ದಾಗಿತ್ತು. ಮಾಹಿತಿಯ ಪ್ರಕಾರ, 86 ಸ್ಥಾನಗಳ ಪೈಕಿ PNC 66 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಇದನ್ನೂ ಓದಿ: ರಾಜ್ಯದ ಕೆಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ!

ಪ್ರಮುಖ ವಿರೋಧ ಪಕ್ಷವಾದ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ ಕೇವಲ 12 ಸ್ಥಾನಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು 10 ಸ್ಥಾನಗಳನ್ನು ಗೆದ್ದಿದ್ದಾರೆ. ಉಳಿದ ಸೀಟುಗಳು ಬೇರೆ ಪಕ್ಷಗಳ ಪಾಲಾಗಿದೆ.

RELATED ARTICLES

Related Articles

TRENDING ARTICLES