Thursday, May 9, 2024

ಕ್ರೂರ ಹಾಗೂ ಕಲ್ಲು ಬಂಡೆಯ ಸರ್ಕಾರ ಇದು : ಯಡಿಯೂರಪ್ಪ

ಚಾಮರಾಜನಗರ : ಕ್ರೂರ ಹಾಗೂ ಕಲ್ಲುಬಂಡೆಯ ಸರ್ಕಾರ ಇದು. ಕಾಂಗ್ರೆಸ್ ಪಕ್ಷದ ಖಜಾನೆ ಖಾಲಿಯಾಗಿದೆ. ಈ ಸರ್ಕಾರ ದಿವಾಳಿಯಾಗಿದೆ ಎಂದು ಕಾಂಗ್ರೆಸ್​ ಸರ್ಕಾರದ ವಿರುದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುಡುಗಿದ್ದಾರೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ ಅಧಿಕಾರಕ್ಕೆ ಬಂದಮೇಲೆ ಯಾವುದೇ ಅಭಿವೃದ್ಧಿಗೆ ಹಣ ಇಲ್ಲ ಎಂದು ದೂರಿದ್ದಾರೆ.

ಒಂದು ಕಿಲೋ ಮೀಟರ್ ರಸ್ತೆ ಕೂಡ ಮಾಡಿಲ್ಲ. ನೀರಾವರಿ ಯೋಜನೆ ಸ್ಥಗಿತವಾಗಿದೆ. ತುಘಲಕ್‌ದರ್ಬಾರ್ ನ ಸರ್ಕಾರ. ರಾಜ್ಯದ ಜನ ಛೀಮಾರಿ ಹಾಕ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರವನ್ನೂ ಎನ್​ಡಿಎ ಗೆಲ್ಲಲಿದೆ. ಕಾಂಗ್ರೆಸ್ ಯಾವುದಾದರು ಮೂರು ಅಥವಾಗ ನಾಲ್ಕು ಕ್ಷೇತ್ರ ಗೆಲ್ತೇವೆ ಅಂತ ಹೇಳಲಿ ನೋಡೋಣ ಎಂದು ಸವಾಲ್ ಹಾಕಿದ್ದಾರೆ.

ಗ್ಯಾರಂಟಿಗಳ ಸುಳ್ಳು ಭರವಸೆ ನೀಡ್ತಿದ್ದಾರೆ

ಕಾಂಗ್ರೆಸ್​​​ನವರು ಬಹಳ ಹಗುರವಾಗಿ ಮಾತನಾಡುತ್ತಾರೆ. ಆದರೆ, ಮೋದಿಯವರು ಬೆಂಗಳೂರಿಗೆ ಬಂದಾಗ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಆ ಮೂಲಕ ಮೋದಿಯವರಿಗೆ ಬೆಂಬಲ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಉಚಿತವಾಗಿ ಕೊಡುವ ಅಕ್ಕಿಯನ್ನು ಕಾಂಗ್ರೆಸ್​​ನವರು ತಾವು ಕೊಟ್ಟಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ನಾಡಿನೆಲ್ಲೆಡೆ ಜನರ ಬೆಂಬಲ ಮೋದಿಯವರ ಪರ ಹೆಚ್ಚಾಗುತ್ತಿದೆ. ಗ್ಯಾರಂಟಿಗಳ ಸುಳ್ಳು ಭರವಸೆ ನೀಡ್ತಿದ್ದಾರೆ ಎಂದು ಕುಟುಕಿದ್ದಾರೆ.

ಪ್ರಧಾನಿ ಅಭ್ಯರ್ಥಿ ಯಾರು ಎಂದು ಹೇಳಲಿ

ಲೋಕಸಭೆಯಲ್ಲಿ 50 ಸೀಟ್ ಗೆಲ್ಲಲಾಗದವರು ಗ್ಯಾರಂಟಿ ಯೋಜನೆ ಕೊಡ್ತಾರಂತೆ. ಮೊದಲು ಅವರ ಪ್ರಧಾನಿ ಅಭ್ಯರ್ಥಿ ಯಾರು ಎಂದು ಹೇಳಲಿ. ಕೇಂದ್ರ ಸರ್ಕಾರ ಉಚಿತವಾಗಿ ಕೊಡುವ ಅಕ್ಕಿಯನ್ನು ಕಾಂಗ್ರೆಸ್​​ನವರು ತಾವು ಕೊಟ್ಟಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ನರೇಂದ್ರ ಮೋದಿಯವರು ಒಂದು ದಿನ ವಿಶ್ರಾಂತಿ ಪಡೆಯದೆ ಶ್ರಮಿಸುತ್ತಿದ್ದಾರೆ. ಸೂರ್ಯ ಚಂದ್ರ ಇರುವಷ್ಟೇ ಸತ್ಯವಾಗಿ ಮೂರನೇ ಬಾರಿಗೆ ಮೋದಿಯವರು ಪ್ರಧಾನಿ ಆಗುತ್ತಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

RELATED ARTICLES

Related Articles

TRENDING ARTICLES