Tuesday, April 30, 2024

ದ್ವಾರಕೀಶ್​ ಅಂತಿಮ ದರ್ಶನ ಪಡೆದ ಸಿಎಂ: ಸಕಲ ಸರ್ಕಾರಿ ಪೊಲೀಸ್​ ಗೌರವಗಳೊಂದಿಗೆ ಅಂತ್ಯಕ್ರಿಯೆ!

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್​ ಏ.16 ರಂದು ಮಂಗಳವಾರ ವಯೋಸಹಜ ಕಾಯಿಲೆಗಳಿಂದ ತಮ್ಮ ನಿವಾಸದಲ್ಲಿ ನಿದ್ದೆ ಮಾಡುವಾಗಲೇ ಕೊಲೆ ಉಸಿರೆಳೆದಿದ್ದಾರೆ. ಇಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿ ಅಂತಿಮ ದರ್ಶನ ಪಡೆದಿದ್ದಾರೆ.

ದ್ವಾರಕೀಶ್​ ಪಾರ್ಥೀವ ಶರೀರ ಅಂತಿಮ ದರ್ಶನ ಪಡೆದ ಬಳಿಕ ಮಾದ್ಯಮದವರೊಂದಿಗೆ  ಅವರು ಮಾತನಾಡಿದರು. ದ್ವಾರಕೀಶ್ ನಿಧನ ಇಡೀ ಕನ್ನಡಿಗರಿಗೆ ಮತ್ತು ನನಗೂ ನೋವು ನೀಡಿದೆ. ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ, ನಟರಾಗಿ, ನಿರ್ಮಾಪಕರಾಗಿ, ನಿರ್ಪದೇಶಕರಾಗಿ, ಹಾಸ್ಯ ನಟರಾಗಿ ಅಲ್ಲದೇ ನಾಯಕ ನಟನಾಗಿಯೂ ನಟಿಸಿದ್ದಾರೆ. ಅವರ ಸೇವೆಯನ್ನು ಮರೆಯಲು ಸಾಧ್ಯವಿಲ್ಲ, ಡಾ. ರಾಜ್ ಕುಮಾರ್ ಮತ್ತು ದ್ವಾರಕೀಶ್​ ಜೋಡಿ ಬಹಳ ಚನ್ನಾಗಿತ್ತು.

ಇದನ್ನೂ ಓದಿ: ಇಂದು ಹಿರಿಯ ನಟ ದ್ವಾರಕೀಶ್‌ ಅಂತ್ಯಕ್ರಿಯೆ

ಡಾ.ವಿಷ್ಣುವರ್ಧನ್​ ಮತ್ತು ದ್ವಾರಕೀಶ್​ ಇಬ್ಬರದ್ದು ಭಲೆ ಜೋಡಿಯಗಿ ಗುರ್ತಿಸಿಕೊಂಡಿದ್ದರು, ಚಿತ್ರರಂಗದಲ್ಲಿ ಹಲವು ಕಷ್ಟಗಳನ್ನು ಸಹಿಸಿಕೊಂಡು ಕನ್ನಡ ಚಿತ್ರರಂಗ ಏಳಿಗೆಗೆ ಶ್ರಮಿಸಿದವರು, ಎಷ್ಟೇ ಆದರೂ ಅವರು ನಮ್ಮೂರು ಮೈಸೂರಿನವರು, ನಾನು ಮತ್ತು ದ್ವಾರಕೀಶ್​ ಹಿಂದೊಮ್ಮೆ ಹೆಲಿಕಾಪ್ಟರ್​ನಲ್ಲಿ ಮೈಸೂರಿನ ರೇಸ್​ ಕೋರ್ಸ್​ಗೆ ಹೋಗಿ ಇಳಿದಿದ್ದೆವು, ದಾರಿ ಉದ್ದಕ್ಕೂ ರಾಜಕೀಯ, ಸಿನಿಮಾ ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸಿದ್ದೆವು ಎಂದು ಅವರೊಂದಿಗೆ ಕಳೆದ ಕ್ಷಣಗಳನ್ನು ಸ್ಮರಿಸಿದರು.

ಇನ್ನು, ದ್ವಾರಕೀಶ್ ಅವರು ನಿಧನದ ನಂತರವು ಅವರ ಕಣ್ಣುಗಳನ್ನು ದಾನ ಮಾಡಿರುವುದು ಶ್ಲಾಘನೀಯ, ಮೂರು ವರ್ಷಗಳ ಹಿಂದೆ ಇದೇ ದಿನ ಅವರ ಧರ್ಮ ಪತ್ನಿ ಕಾಲವಾದ ದಿನವೇ ಅವರೂ ಕಾಲವಾಗಿದ್ದಾರೆ ಇಬ್ಬರ ಆತ್ಮಕ್ಕೂ ಶಾಂತಿ ದೊರೆಯಲಿ ಎಂದು ಈ ಸಂದರ್ಭದಲ್ಲಿ ಕೋರಿಕೊಳ್ಳುತ್ತೇನೆ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES