Friday, May 17, 2024

Prajwal Revanna Pendrive Case: ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕನಿಂದ ಸ್ಪೋಟಕ ಹೇಳಿಕೆ

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋಗಳ ಪೆನ್​ಡ್ರೈವ್​ ಪ್ರಕರಣ ಇದೀಗ ದೇಶದಾದ್ಯಂತ ಬಾರಿ ಸದ್ದು ಮಾಡುತ್ತಿದೆ. ಸದ್ಯ ಈ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​ ಸಿಕ್ಕಿದ್ದು ವೀಡಿಯೋ ಬಿಡುಗಡೆಯ ಬಗ್ಗೆ ಪ್ರಜ್ವಲ್​ ರೇವಣ್ಣ ಅವರ ಮಾಜಿ ಕಾರು ಚಾಲಕ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ.

ಈ ಕುರಿತು ವೀಡಿಯೋ ಮಾಡಿ ತಿಳಿಸಿರುವ ಅವರು, ಪ್ರಜ್ವಲ್ ರೇವಣ್ಣ ಅವರ ವೀಡಿಯೋಗಳಿರುವ ಪೆನ್​ಡ್ರೈವ್​ ಅನ್ನು ವಕೀಲರಾದ ದೇವರಾಜೇಗೌಡ ಅವರಿಗೆ ನೀಡಿದ್ದು ನಾನೇ. ಆದರೇ, ಅದನ್ನು ಅವರು ಅವರ ಸ್ವಾರ್ಥಕ್ಕೆ ಬಳಕೆ ಮಾಡಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Prajwal Revanna Pendrive Case: ಇದನ್ನು ಸಹಿಸುವುದಿಲ್ಲ, ಮಾತೃಶಕ್ತಿ ಜೊತೆ ನಿಲ್ಲುತ್ತೇವೆ: ಅಮಿತ್​ ಶಾ

ನಾನು ಪ್ರಜ್ವಲ್ ರೇವಣ್ಣ ಅವರ ಕುಟುಂಬಕ್ಕೆ ಹಾಗು ಪ್ರಜ್ವಲ್​ ರೇವಣ್ಣ ಅವರಿಗೆ ಕಳೆದ 15 ವರ್ಷಗಳಿಂದ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೆ. ಆದರೇ, ಕಳೆದ ಒಂದು ವರ್ಷದ ಹಿಂದೆ ಅವರ ಮನೆಯಿಂದ ಹೊರಬಂದಿದ್ದೇನೆ. ಕಾರಣ, ನನ್ನ ಜಮೀನನ್ನು ಕಸಿದುಕೊಂಡು ನನ್ನ ಪತ್ನಿಗೆ ಥಳಿಸಿ ಹಿಂಸೆ ನೀಡಿದ್ದರು. ಇದೇ ಕಾರಣಕ್ಕೆ ನಾನು ಮನೆಯಿಂದ ಹೊರಬಂದಿದ್ದೆ. ಇವರ ವಿರುದ್ದ ಕಾನೂನು ಹೋರಾಟ ಮಾಡಲು ಮುಂದಾಗಿದ್ದೆ ಈ ವೇಳೆ ನನಗೆ ಯಾವುದೇ ನ್ಯಾಯ ಸಿಗುವುದಿಲ್ಲ.

ಆಗ ರೇವಣ್ಣ ಕುಟುಂಬದ ವಿರುದ್ದ ದೇವರಾಜೇ ಗೌಡ ಅವರು ಹೋರಾಟ ಮಾಡುತ್ತಿದ್ದರು ಇವರನ್ನು ಭೇಟಿಯಾಗಿ ನನ್ನ ಅಳಲನ್ನು ತೋಡಿಕೊಂಡಿದ್ದೆ, ಪ್ರಜ್ವಲ್ ರೇವಣ್ಣ ಅವರ ವಿಡಿಯೋಗಳು ಸಾಕ್ಷಿ ಆಧಾರಗಳು ನನ್ನ ಬಳಿ ಇದೆ ಎಂದು ತಿಳಿಸಿದ್ದೇ, ನಿನಗೆ ನ್ಯಾಯ ಕೊಡಿಸುತ್ತೇನೆ ಎಂದು ಹೇಳಿದ್ದಕ್ಕೆ ನಂಬಿ ನಾನು ಇದರ ಒಂದು ಕಾಪಿಯನ್ನು ಅವರಿಗೆ ನೀಡಿದ್ದೆ ಎಂದರು.

ನಾನು ಯಾವುದೇ ಕಾಂಗ್ರೆಸ್​ ನಾಯಕರನ್ನು ಭೇಟಿ ಮಾಡಿಲ್ಲ, ಬಿಜೆಪಿ ಮುಖಂಡ ದೇವರಾಜೇಗೌಡ ಅವರಿಗೆ ಬಿಟ್ಟರೇ ಬೇರೆ ಯಾರಿಗೂ ಈ ವೀಡಿಯೋಗಳನ್ನು ಹಂಚಿಲ್ಲ,  ಇದೇ ವಿಚಾರಕ್ಕೆ ಸಂಬಂಧಿಸಿ ನಾನು ಎಸ್​ಐಟಿ ತಂಡವನ್ನು ಬೇಟಿಯಾಗುತ್ತಿದ್ದು ನನ್ನ ಬಳಿ ಇರುವ ಎಲ್ಲಾ ದಾಖಲೆಗಳನ್ನು ಅವರಿಗೆ ಸಲ್ಲಿಸಿ ನನ್ನ ಮಾಹಿತಿ ನೀಡಲಿದ್ದೇನೆ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES