Friday, May 17, 2024

ಒಳ ಉಡುಪಿನಲ್ಲಿ 717 ಗ್ರಾಂ ಚಿನ್ನವನ್ನಿಟ್ಟು ಅಕ್ರಮ ಸಾಗಾಟ: ಇಬ್ಬರು ಮಹಿಳೆಯರ ಬಂಧನ

ಬೆಂಗಳೂರು : ಒಳ ಉಡುಪಿನಲ್ಲಿ ಚಿನ್ನವನ್ನಿಟ್ಟುಕೊಂಡು ಅಕ್ರಮ ಸಾಗಾಟ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್​ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಕೋವಿಶೀಲ್ಡ್​ ಲಸಿಕೆಯಿಂದ ಅಡ್ಡಪರಿಣಾಮ: ಒಪ್ಪಿಕೊಂಡ ಔಷಧಿ ತಯಾರಿಕಾ ಕಂಪೆನಿ

ಸೋಮವಾರ ರಾತ್ರಿ ದುಬೈನಿಂದ ಇಂಡಿಗೋ 6E1486 ವಿಮಾನದ ಮೂಲಕ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಈ ಮಹಿಳೆಯರು ತಮ್ಮ ಒಳಉಡುಪಿನಲ್ಲಿ ಅಕ್ರಮವಾಗಿ ಚಿನ್ನವನ್ನು ಸಾಗಿಸಲು ಯತ್ನ ನಡೆಸಿದ್ದರು. ಚಿನ್ನ ಸಾಗಾಟಕ್ಕೆಂದು ಹಲವು ಲೇಯರ್​ಗಳ ಒಳಉಡುಪನ್ನು ಮಾಡಿಸಿಟ್ಟುಕೊಂಡಿದ್ದ.

ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದು ಕಸ್ಟಮ್ಸ್​ ಅಧಿಕಾರಿಗಳು ಮಹಿಳೆಯರನ್ನು ತನಿಖೆಗೆ ಒಳಪಡಿಸಿ ಸುಮಾರು 49 ಲಕ್ಷ 52 ಸಾವಿರ ಮೌಲ್ಯದ 717 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ಮುಂದುವರೆಸಿದ್ದಾರೆ.

RELATED ARTICLES

Related Articles

TRENDING ARTICLES