Tuesday, April 30, 2024

ಇಂದು ಡೆಲ್ಲಿ Vs ಗುಜರಾತ್ ಫೈಟ್ : ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ರಿಷಭ್‌ ಪಂತ್

ಬೆಂಗಳೂರು : ಐಪಿಎಲ್​ನ 32ನೇ ಪಂದ್ಯದಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಗುಜರಾತ್‌ ಟೈಟಾನ್ಸ್‌ ತಂಡಗಳು ಮುಖಾಮುಖಿಯಾಗಲಿವೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಈ ಹೈವೋಲ್ಟೇಜ್‌ ಪಂದ್ಯಕ್ಕೆ ಸಜ್ಜಾಗಿದೆ. ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದೆ. ರಿಷಭ್‌ ಪಂತ್ ಬಳಕ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ.

ಉಭಯ ತಂಡಗಳ ನಡುವೆ ಈವರೆಗೆ 3 ಪಂದ್ಯಗಳು ನಡೆದಿವೆ. ಈ ಪೈಕಿ ಗುಜರಾತ್ ಎರಡು ಗೆಲುವು ಹಾಗೂ ಡೆಲ್ಲಿ ಒಂದು ಪಂದ್ಯ ಗೆದ್ದಿದೆ. ಈ ಆವೃತ್ತಿಯಲ್ಲಿ ಗುಜರಾತ್ 6 ಪಂದ್ಯ ಆಡಿದ್ದು 3 ಗೆಲುವು ಹಾಗೂ 3 ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ 6 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಡೆಲ್ಲಿ 6 ಪಂದ್ಯಗಳಲ್ಲಿ 2 ಗೆಲುವು ಹಾಗೂ 4 ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.

ಡೆಲ್ಲಿ Vs ಗುಜರಾತ್ ಬಲಾಬಲ

  • ಒಟ್ಟು ಪಂದ್ಯ : 3
  • ಗುಜರಾತ್‌ ಟೈಟಾನ್ಸ್‌ : 2 ಗೆಲುವು
  • ಡೆಲ್ಲಿ ಕ್ಯಾಪಿಟಲ್ಸ್‌ : 1 ಗೆಲುವು

ಮೋದಿ ಸ್ಟೇಡಿಯಂ (ಅಹಮದಾಬಾದ್)

  • ಒಟ್ಟು ಪಂದ್ಯ : 1
  • ಗುಜರಾತ್‌ ಟೈಟಾನ್ಸ್‌ : 0
  • ಡೆಲ್ಲಿ ಕ್ಯಾಪಿಟಲ್ಸ್‌ : 1 ಗೆಲುವು

ಅರುಣ್ ಜೇಟ್ಲಿ ಸ್ಟೇಡಿಯಂ (ದೆಹಲಿ)

  • ಒಟ್ಟು ಪಂದ್ಯ : 1
  • ಗುಜರಾತ್‌ ಟೈಟಾನ್ಸ್‌ : 1 ಗೆಲುವು
  • ಡೆಲ್ಲಿ ಕ್ಯಾಪಿಟಲ್ಸ್‌ : 0

ಮೋದಿ ಪಿಚ್​ ಹೇಗಿದೆ?

  • ವೇಗಿಗಳು, ಸ್ಪಿನ್ನರ್‌ಗಳಿಗೆ ಪಿಚ್‌ ಅನುಕೂಲವಾಗಲಿದೆ
  • ದೊಡ್ಡ ಸ್ಟೇಡಿಯಂ ಆಗಿರೋದ್ರಿಂದ ಬ್ಯಾಟರ್‌ಗಳಿಗೆ ಅನುಕೂಲ
  • ಬ್ಯಾಟರ್‌ಗಳು ಎಚ್ಚರಿಕೆಯಿಂದ ಆಡಿದ್ರೆ ಬಿಗ್‌ ಸ್ಕೋರ್
  • ಚೇಸ್‌ ಮಾಡಿರುವ ತಂಡವೇ ಹೆಚ್ಚು ಬಾರಿ ಗೆದ್ದಿದೆ

ಡೆಲ್ಲಿ ಕ್ಯಾಪಿಟಲ್ಸ್‌

ರಿಷಭ್‌ ಪಂತ್(ನಾಯಕ), ಪೃಥ್ವಿ ಶಾ, ಡೇವಿಡ್ ವಾರ್ನರ್‌, ಶಾಯ್ ಹೋಪ್‌, ಟ್ರಿಸ್ಟಿನ್ ಸ್ಟಬ್ಸ್‌, ಜೇಕ್‌ ಫ್ರೇಸರ್‌, ಅಕ್ಸರ್‌ ಪಟೇಲ್, ಕುಲ್​ದೀಪ್‌ ಯಾದವ್, ಮುಕೇಶ್‌ ಕುಮಾರ್, ಇಶಾಂತ್‌ ಶರ್ಮಾ, ಖಲೀಲ್‌ ಅಹಮದ್

ಗುಜರಾತ್‌ ಟೈಟಾನ್ಸ್‌

ಶುಭ್‌ಮನ್ ಗಿಲ್‌(ನಾಯಕ), ಸಾಯಿ ಸುದರ್ಶನ್‌, ವಿಜಯ್ ಶಂಕರ್‌, ಅಭಿನವ್‌ ಮನೋಹರ್, ಮ್ಯಾಥ್ಯೂ ವೇಡ್‌, ರಾಹುಲ್ ತೆವಾಟಿಯಾ, ರಶೀದ್‌ ಖಾನ್, ಉಮೇಶ್‌ ಯಾದವ್, ಸ್ಪೆನ್ಸರ್‌ ಜಾನ್ಸನ್, ನೂರ್‌ ಅಹಮ್ಮದ್, ಮೋಹಿತ್‌ ಶರ್ಮಾ

RELATED ARTICLES

Related Articles

TRENDING ARTICLES