Tuesday, May 7, 2024

ಇಂದು ಸೋತರೆ RCB ಮನೆಗೆ? : ತವರಿನಲ್ಲಿ ಇಂದಾದರೂ ಗೆಲ್ಲುತ್ತಾ RCB? ಕಾಮೆಂಟ್ ಮಾಡಿ

ಬೆಂಗಳೂರು : ಐಪಿಎಲ್​ನಲ್ಲಿ ಇಂದು ರೋಚಕ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ಮುಖಾಮುಖಿಯಾಗಲಿದೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಟೂರ್ನಿಯ 30ನೇ ಪಂದ್ಯಕ್ಕೆ ಸಜ್ಜಾಗಿದೆ. ಈವರೆಗೆ RCB 6 ಪಂದ್ಯಗಳನ್ನು ಆಡಿದ್ದು, 5 ಪಂದ್ಯ ಸೋತು ಒಂದು ಪಂದ್ಯ ಗೆದ್ದಿದೆ. ಅಲ್ಲದೆ, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಹೈದರಾಬಾದ್ ಆಡಿರುವ 5 ಪಂದ್ಯಗಳಲ್ಲಿ 3 ರಲ್ಲಿ ಗೆಲುವು ಹಾಗೂ 2 ಪಂದ್ಯ ಸೋತಿದೆ. 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. RCBಗೆ ಇಂದಿನ ಪಂದ್ಯ ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ.

ಪ್ಲೇಆಪ್​ಗೆ ಪ್ರವೇಶಿಸಬೇಕಾದರೆ ಇಂದಿನ ಪಂದ್ಯ ಸೇರಿದಂತೆ ಎಂಟೂ ಪಂದ್ಯಗಳನ್ನು RCB ಗೆಲ್ಲಲೇಬೇಕು. ಸೋತರೆ ಬಹುತೇಕ ಮನೆಯ ಹಾದಿ ಫಿಕ್ಸ್​ ಆಗಬಹುದು ಖಚಿತ. ಇನ್ನೂ, ವಿರಾಟ್ ಕೊಹ್ಲಿ ಹೊರತುಪಡಿಸಿ ಉಳಿದ RCB ಬ್ಯಾಟರ್​ಗಳು ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಬೌಲಿಂಗ್​ ಅಂತೂ ಸಂಪೂರ್ಣ ವಿಫಲವಾಗಿದೆ. ಇದೇ RCB ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

RCB Vs SHR ಬಲಾಬಲ

  • ಒಟ್ಟು ಪಂದ್ಯ : 23
  • ರಾಯಲ್ ಚಾಲೆಂಜರ್ಸ್‌ ಬೆಂಗಳೂರು : 10 ಗೆಲುವು
  • ಸನ್‌ ರೈಸರ್ಸ್‌ ಹೈದ್ರಾಬಾದ್ : 12 ಗೆಲುವು

ಚಿನ್ನಸ್ವಾಮಿ ಸ್ಟೇಡಿಯಂ (ಬೆಂಗಳೂರು )

  • ಒಟ್ಟು ಪಂದ್ಯ : 8
  • ರಾಯಲ್ ಚಾಲೆಂಜರ್ಸ್‌ ಬೆಂಗಳೂರು 5 ಗೆಲುವು
  • ಸನ್‌ ರೈಸರ್ಸ್‌ ಹೈದ್ರಾಬಾದ್ 2 ಗೆಲುವು

ರಾಜೀವ್‌ ಗಾಂಧಿ ಸ್ಟೇಡಿಯಂ (ಹೈದ್ರಾಬಾದ್)

  • ಒಟ್ಟು ಪಂದ್ಯ : 8
  • ರಾಯಲ್ ಚಾಲೆಂಜರ್ಸ್‌ ಬೆಂಗಳೂರು 2 ಗೆಲುವು
  • ಸನ್‌ ರೈಸರ್ಸ್‌ ಹೈದ್ರಾಬಾದ್ 6 ಗೆಲುವು

ಚಿನ್ನಸ್ವಾಮಿ ಪಿಚ್ ಹೇಗಿದೆ?

  • ಚಿನ್ನಸ್ವಾಮಿ ಸ್ಟೇಡಿಯಂ ಬ್ಯಾಟ್ಸ್‌ಮನ್‌ಗಳ ಸ್ವರ್ಗ
  • ಚಿಕ್ಕದಾದ ಮೈದಾನದಲ್ಲಿ ಸಿಕ್ಸರ್‌, ಬೌಂಡರಿಗಳ ಸುರಿಮಳೆ
  • ಸರಾಸರಿ 200ಕ್ಕಿಂತ ಹೆಚ್ಚುಗಳಿಸಿದ್ರೆ ಗೆಲುವು ಸಾಧ್ಯತೆ
  • ವಿಕೆಟ್‌ ಪಡೆಯಲು ಬೌಲರ್‌ಗಳು ಹರಸಾಹಸಪಡಬೇಕು

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 

ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ವಿಲ್ ಜ್ಯಾಕ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ಮಯಾಂಕ್ ಡಾಗರ್, ಮೊಹಮ್ಮದ್ ಸಿರಾಜ್, ರೀಸ್​ ಟೋಪ್ಲಿ, ವೈಶಾಕ್ ವಿಜಯ್​ಕುಮಾರ್

ಸನ್‌ರೈಸರ್ಸ್ ಹೈದರಾಬಾದ್

ಪ್ಯಾಟ್ ಕಮಿನ್ಸ್ (ನಾಯಕ), ಟ್ರಾವಿಸ್​ ಹೆಡ್, ಅಭಿಷೇಕ್ ಶರ್ಮಾ, ಏಡೆನ್ ಮಾರ್ಕ್ರಮ್, ಹೆನ್ರಿಚ್ ಕ್ಲಾಸೆನ್, ಅಬ್ದುಲ್ ಸಮದ್, ನಿತೀಶ್​ ರೆಡ್ಡಿ, ಶಹಬಾಜ್​ ಅಹ್ಮದ್​, ಭುವನೇಶ್ವರ್ ಕುಮಾರ್, ಟಿ. ನಟರಾಜನ್, ಜಯದೇವ್​ ಉನಾದ್ಕಟ್

RELATED ARTICLES

Related Articles

TRENDING ARTICLES