Thursday, May 9, 2024

ಎದೆನೋವು.. ಸಚಿವ ಜಮೀರ್ ಆಸ್ಪತ್ರೆಗೆ ದಾಖಲು

ಚಿತ್ರದುರ್ಗ : ಸಚಿವ ಬಿ.ಝಡ್​. ಜಮೀರ್ ಅಹಮ್ಮದ್ ಖಾನ್​ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದೆ. ಎದೆನೋವು ಕಾಣಿಸಿಕೊಂಡ ಹಿನ್ನಲೆ ಕೂಡಲೇ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಚಂದ್ರಪ್ಪ ಅವರ ಪರ ಸಚಿವ ಜಮೀರ್ ಪ್ರಚಾರ ಮಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದೆ.

ಕೂಡಲೇ ಸಚಿವ ಜಮೀರ್​ ಅವರನ್ನು ಚಿತ್ರದುರ್ಗದ ಬಸವೇಶ್ವರ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಯಿತು. ವೈದ್ಯರು ಇಸಿಜಿ, ಎಕೋ ಪರೀಕ್ಷೆ ನಡೆಸಿದ್ದಾರೆ. ಸದ್ಯ ಇಸಿಜಿ ನಾರ್ಮಲ್ ಇದೆ ಎಂದು ವೈದ್ಯರು ಹೇಳಿದ್ದಾರೆ.

ಸದ್ಯ ಹೃದ್ರೋಗ ತಜ್ಞ ಡಾ. ಕಾರ್ತಿಕ್ ಅವರು ಸಚಿವ ಜಮೀರ್​ ಅವರಿಗೆ ಚಿಕಿತ್ಸೆ ಮುಂದುವರಿಸಿದ್ದಾರೆ. ದಿಢೀರ್ ಎದೆನೋವು, ಬೆನ್ನು ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಇನ್ನೂ, ಸಚಿವ ಜಮೀರ್ ಅಹಮ್ಮದ್ ಅವರು ತುಮಕೂರಿನಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡ ಪರ ಪ್ರಚಾರ ಮಾಡಿದ್ದರು. ಬಳಿಕ, ಚಿತ್ರದುರ್ಗ ಕಾಂಗ್ರೆಸ್ ಸಭೆಗೆ ಆಗಮಿಸಿದ್ದರು. ಈ ವೇಳೆ ಆರೋಗ್ಯದಲ್ಲಿ ಏರುಪೇರಾಗಿದೆ.

RELATED ARTICLES

Related Articles

TRENDING ARTICLES