Monday, May 6, 2024

6, 6, 6.. ಧೋನಿ ಆರ್ಭಟಕ್ಕೆ ಪಾಂಡ್ಯ ಬರ್ನ್ : 4 ಎಸೆತಗಳಲ್ಲಿ 20 ರನ್ ಚಚ್ಚಿದ ಮಹಿ

ಬೆಂಗಳೂರು : ಚೆನ್ನೈ ಸೂಪರ್​ ಕಿಂಗ್ಸ್ ಬ್ಯಾಟರ್ ಮಹೇಂದ್ರ ಸಿಂಗ್​ ಧೋನಿ ಮುಂಬೈ ಇಂಡಿಯನ್ಸ್​ ವಿರುದ್ಧ ಆರ್ಭಟಿಸಿದರು. ಮಹಿ ಅಬ್ಬರಕ್ಕೆ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಸ್ಟನ್​ ಆದರು.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 42 ವರ್ಷದ ಧೋನಿ ಕೇವಲ 4 ಎಸೆತಗಳಲ್ಲಿ ಅಜೇಯ 20 ರನ್​ ಚಚ್ಚಿದರು.

ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಎಸೆದ 20ನೇ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸ್​ ಬಾರಿಸುವ ಮೂಲಕ ನೆರೆದಿದ್ದ ಅಭಿಮಾನಿಗಳಿಗೆ ಧೋನಿ ಭರ್ಜರಿ ಮನರಂಜನೆ ನೀಡಿದರು. ಈ ಓವರ್​ನ 2ನೇ ಎಸೆತದಲ್ಲಿ ಚೆನ್ನೈ ಬ್ಯಾಟರ್ ಮಿಚೆಲ್ ಔಟಾದರು. ಆಗ ಧೋನಿ ಬ್ಯಾಟ್​ ಹಿಡಿದು ಮೈದಾನಕ್ಕೆ ಎಂಟ್ರಿ ಕೊಟ್ಟರು.

ಧೋನಿ ಕ್ರೀಡಾಂಗಣಕ್ಕೆ ಬಂದ ಕೂಡಲೇ ನೆರೆದಿದ್ದ ಅಭಿಮಾನಿಗಳು ‘ಧೋನಿ.. ಧೋನಿ..’ ಎಂದು ಜೈಕಾರ ಮೊಳಗಿಸಿದರು. ಧೋನಿ ಮೊದಲ ಎಸೆತದಲ್ಲೇ ಸಿಕ್ಸ್​ ಬಾರಿಸಿದರು. 2ನೇ ಎಸೆತವನ್ನು ಸ್ಲಾಟ್​ನಲ್ಲಿ ಮತ್ತೆ ಸಿಕ್ಸರ್​ಗಟ್ಟಿದರು. ಫುಲ್ ಟಾಸ್ ಬಂದ 3ನೇ ಎಸೆತದಲ್ಲೂ ಮಹಿ ಸಿಕ್ಸ್​ ಬಾರಿಸಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಧೋನಿ 20ನೇ ಓವರ್‌ನಲ್ಲಿ 64 ಸಿಕ್ಸರ್‌ಗಳನ್ನು ಬಾರಿಸಿದ ಸಾಧನೆ ಮಾಡಿದರು. ಈ ಓವರ್​ನಲ್ಲಿ 26 ರನ್​ ಹರಿದುಬಂದವು.​

ಋತುರಾಜ್, ದುಬೆ ಆರ್ಭಟ

ಇನ್ನೂ, ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಚೆನ್ನೈಗೆ ಉತ್ತಮ ಆರಂಭ ಸಿಗಲಿಲ್ಲ. ಅಜಿಂಕ್ಯಾ ರಹಾನೆ 5 ರನ್​ಗೆ ಔಟಾದರು. ರಚಿನ್ ರವೀಂದ್ರ 21 ರನ್​ಗೆ ಆಟ ಮುಗಿಸಿದರು. ಬಳಿಕ ಜೊತೆಯಾದ ನಾಯಕ ಋತುರಾಜ್ ಗಾಯಕ್ವಾಡ್ (69) ಹಾಗೂ ಶಿವಂ ದುಬೆ (ಅಜೇಯ 66) ಮುಂಬೈ ಬೌಲರ್​ಗಳನ್ನು ಮನಬಂದಂತೆ ಚಚ್ಚಿದರು. ಅಂತಿಮವಾಗಿ ಚೆನ್ನೈ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 206 ರನ್​ ಕಲೆಹಾಕಿತು. ಮೂಮಬೈ ಗೆಲ್ಲಲು 207 ರನ್​ ಗಳಿಸಬೇಕಿದೆ.

20ನೇ ಓವರ್‌ನಲ್ಲಿ ಧೋನಿ ಬ್ಯಾಟಿಂಗ್

  • ರನ್​ಗಳು : 756
  • ಬಾಲ್​ಗಳು : 309
  • ಸ್ಟ್ರೈಟ್​ ರೇಟ್ (SR) : 244.66
  • ಬೌಂಡರಿ : 51
  • ಸಿಕ್ಸ್​ಗಳು : 64

RELATED ARTICLES

Related Articles

TRENDING ARTICLES