Tuesday, May 7, 2024

ಟಾಸ್ ಸೋತ ಚೆನ್ನೈ : ಮುಂಬೈ ತವರು ಅಂಗಳದಲ್ಲಿ CSKಗೆ ಸೋಲಿನ ಭೀತಿ?

ಬೆಂಗಳೂರು : ಹಾಲಿ ಚಾಂಪಿಯನ್ ಚೆನ್ನೈ ಸೂಪರ್​ ಕಿಂಗ್ಸ್ ವಿರುದ್ಧ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್​ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಮುಂಬೈನ ವಾಂಖೆಡೆ ಕ್ರೀಡಾಂಗಣ ಐಪಿಎಲ್​ನ 29ನೇ ಹೈವೋಲ್ಟೇಜ್​ ಪಂದ್ಯಕ್ಕೆ ಸಾಕ್ಷಿಯಾಗಿದೆ. ಈ ಪಂದ್ಯಕ್ಕಾಗಿ ಧೋನಿ ಹಾಗೂ ರೋಹಿತ್ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಮುಂಬೈ ತವರು ಅಂಗಳದಲ್ಲಿ ಚೆನ್ನೈಗೆ ಸೋಲಿನ ಭೀತಿಯೂ ಇದೆ.

ಐಪಿಎಲ್​ ಇತಿಹಾಸದಲ್ಲಿ ಉಭಯ ತಂಡಗಳು ಈವರೆಗೆ 36 ಬಾರಿ ಮುಖಾಮುಖಿಯಾಗಿವೆ. ಮುಂಬೈ ಇಂಡಿಯನ್ಸ್​ 20 ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ 16 ಪಂದ್ಯಗಳನ್ನು ಗೆದ್ದಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ 7 ಗೆಲುವು ಹಾಗೂ ಚೆನೈ 4 ಗೆಲುವು ಸಾಧಿಸಿದೆ. ಚಿದಂಬರಂ ಸ್ಟೇಡಿಂನಲ್ಲಿ ಮುಂಬೈ 5 ಹಾಗೂ ಚೆನೈ 3 ಗೆಲುವು ಕಂಡಿದೆ. ಅಂಕಿಅಂಶಗಳ ಪ್ರಕಾರ ಮುಂಬೈ ಮೇಲುಗೈ ಸಾಧಿಸಿದೆ.

ಪ್ರಸಕ್ತ ಟೂರ್ನಿಯಲ್ಲಿ ಚೆನ್ನೈ 5 ಪಂದ್ಯಗಳನ್ನು ಆಡಿದ್ದು, 3 ಗೆಲುವು ಹಾಗೂ 2 ಸೋಲು ಅನುಭವಿಸಿದೆ. ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಮುಂಬೈ 5 ಪಂದ್ಯ ಆಡಿದ್ದು, ಹ್ಯಾಟ್ರಿಕ್ ಸೋಲಿನ ಬಳಿಕ 2 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

ಚೆನ್ನೈ ಸೂಪರ್ ಕಿಂಗ್ಸ್

ಋತುರಾಜ್ ಗಾಯಕ್ವಾಡ್ (ನಾಯಕ ), ರಚಿನ್ ರವೀಂದ್ರ, ಡೆರೆಲ್ ಮಿಚೆಲ್, ಮಹೇಂದ್ರ ಸಿಂಗ್ ಧೋನಿ (ವಿಕೆಟ್ ಕೀಪರ್), ಸಮೀರ್ ರಿಜ್ವಿ, ಅಂಜಿಕ್ಯ ರಹಾನೆ, ಶಿವಂ ದುಬೆ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ತುಷಾರ್ ದೇಶಪಾಂಡೆ, ಮುಸ್ತಾಫಿಜುರ್ ರೆಹಮಾನ್

ಮುಂಬೈ ಇಂಡಿಯನ್ಸ್

ಹಾರ್ದಿಕ್ ಪಾಂಡ್ಯ (ನಾಯಕ), ರೋಹಿತ್ ಶರ್ಮಾ, ಇಶನ್ ಕಿಶನ್, ತಿಲಕ್ ವರ್ಮಾ, ಟಿಮ್ ಡೇವಿಡ್, ಮೊಹಮ್ಮದ್ ನಬಿ, ರೊಮಾರಿಯೋ ಶೆಫರ್ಡ್, ಜೆರಾಲ್ಡ್ ಕೋಟ್ಜಿ, ಜಸ್ಪ್ರೀತ್ ಬುಮ್ರಾ, ಆಕಾಶ್ ಮಧ್ವಲ್

RELATED ARTICLES

Related Articles

TRENDING ARTICLES