Wednesday, May 22, 2024

ಇಂದಿರಾ ಗಾಂಧಿ ಹತ್ಯೆಯಾದಾಗ ನನಗೆ ಬಹಳ ನೋವಾಯಿತು : ಡಿ.ಕೆ. ಶಿವಕುಮಾರ್

ತುಮಕೂರು : ಇಂದಿರಾ ಗಾಂಧಿ ಹತ್ಯೆಯಾದಾಗ ನನಗೆ ಬಹಳ ನೋವಾಯಿತು. ಮಧ್ಯರಾತ್ರಿ ಟಿವಿ ನೊಡಿದಾಗ ತುಂಬಾ ದುಃಖವಾಯಿತು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ತುಮಕೂರಿನಲ್ಲಿ ಕಾಂಗ್ರೆಸ್​ ಪ್ರಚಾರ ಸಭೆಯಲ್ಲಿ ಮಾತನಾಡಿ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ನಮ್ಮ  ತಾಯಂದಿರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಇಡೀ ರಾಜ್ಯದಗಲಕ್ಕೂ ಹೊತ್ತಿ ಉರಿಯುತ್ತಿದೆ ಎಂದು ತಿಳಿಸಿದರು.

ನಾವು ಮೋದಿಯವರಿಗೆ ಕೆಳುತ್ತಿದ್ದೇನೆ. ನಾವು ಗ್ಯಾರಂಟಿಯನ್ನ ಕೊಟ್ಟಿರುವುದು ವಿದ್ಯಾಭ್ಯಾಸಕ್ಕಾಗಿ, ಮಹಿಳೆಯರ ಬದುಕಿಗಾಗಿ ಅಂತ. ಮೊನ್ನೆ ಮಹಿಳೆಯೊಬ್ಬರು ಗ್ಯಾರಂಟಿ ಹಣದಿಂದ ಒಂದು ಫ್ರೀಡ್ಜ್ ಖರಿದಿಸಿದ್ದೇನೆ ಅಂದ್ರು. ಒಂದು ಹುಡುಗ ನನ್ನ ವಿದ್ಯಾಭ್ಯಾಸಕ್ಕೆ ಅನುಕೂಲ ಆಯ್ತು ಎಂದಿದ್ದಾನೆ. ನೀವು ಏನು ಮಾಡಿದ್ರಿ? ಎಂದು ಪ್ರಶ್ನೆ ಮಾಡಿದರು.

ಕುಮಾರಣ್ಣ, ನೀನು ತಾಯಿ ಹೊಟ್ಟೆಯಲ್ಲಿ‌ ಹುಟ್ಟಿಲ್ವಾ?

15 ಲಕ್ಷ ತಂದು ನಿಮ್ಮ ಬ್ಯಾಂಕಿಗೆ ಹಣ ಹಾಕುತ್ತೇವೆ ಎಂದರು. ಯಾರಿಗಾದರೂ ಹಣ ಬಂತಾ. ಅವರಿಂದ ಯಾರಿಗಾದರೂ ಸಹಾಯ ಆಯ್ತಾ? ಮಹಿಳೆಯರು ಧರ್ಮಸ್ಥಳಕ್ಕೆ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗ್ತಿದ್ದರೆ. ನಮ್ಮ ಹೆಣ್ಮಕ್ಳು ದಾರಿ ತಪ್ಪಿದ್ದಾರೆ ಎಂದು ‌ಹೇಳ್ತಿಯಲ್ಲ ಕುಮಾರಣ್ಣ. ನೀನು ತಾಯಿ ಹೊಟ್ಟೆಯಲ್ಲಿ‌ ಹುಟ್ಟಿಲ್ವಾ..? ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ವ್ಯಕ್ತಿಯನ್ನ ಯಾಕೆ ಪಕ್ಷದಿಂದ ಉಚ್ಛಾಟನೆ ಮಾಡಿಲ್ಲ

ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡ್ತಿವಿ ಅಂತಿದ್ದಾರೆ. ಬಿಜೆಪಿಯವರಿಗೆ ನಾನು ಕೇಳ್ತಿನಿ. ಇದುವರೆಗೂ ಯಾಕೆ ಆ ವ್ಯಕ್ತಿಯನ್ನ ಪಕ್ಷದಿಂದ ಉಚ್ಛಾಟನೆ ಮಾಡಿಲ್ಲ. ಇಡೀ ದೇಶದ ಉದ್ದಲಗಕ್ಕೂ ಬಾಬಾ ಸಾಹೇಬರ ಪುತ್ಥಳಿ ನೋಡ್ತಿದ್ದೇವೆ. ಎಲ್ಲಾ ಕಡೆ ಆಂಜನೇಯನ ದೇವಸ್ಥಾನ ಹೇಗಿದೆಯೋ ಹಾಗೆಯೇ ಅಂಬೇಡ್ಕರ್ ಪುತ್ಥಳಿ ಇದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗ ಅಧಿಕಾರಕ್ಕೆ ಬಂದ ಹಾಗೆ. ಜನರ ಬದುಕಿನಲ್ಲಿ ನಾವು ಭಾಗಿಯಾಗಬೇಕು ಎಂದು ನಾವು ಗ್ಯಾರಂಟಿ ಕೊಟ್ವಿ. ಎಲ್ಲವನ್ನೂ ಈಡೇರಿಸಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

RELATED ARTICLES

Related Articles

TRENDING ARTICLES