Sunday, May 5, 2024

ಮಗ ಸಿಎಂ ಆಗಬೇಕು ಅಂತ ಜೀವ ಇಟ್ಟುಕೊಂಡಿದ್ದಾರೆ : ಶಾಸಕ ಯತ್ನಾಳ್

ಬೆಳಗಾವಿ : ಅಪ್ಪ ಮಕ್ಕಳು ನನ್ನ ಮುಖ್ಯಮಂತ್ರಿ ಆಗಲು ಬಿಡಲ್ಲ. ಮಗ ಸಿಎಂ ಆಗಬೇಕು ಎಂದು ಜೀವ ಇಟ್ಟುಕೊಂಡಿದ್ದಾರೆ. ಮುಂದಿನ‌ ಸಲ ಸಿಎಂ ಮಾಡಲಿಲ್ಲ ಅಂದ್ರೆ, ನಾನೇ ಅಪ್ಪ ಮಗನ ವಿರುದ್ಧ ಪ್ರಚಾರ ಮಾಡುತ್ತೇನೆ ಎಂದು ಯಡಿಯೂರಪ್ಪ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಸ್ವ ಪಕ್ಷದವರೇ ವಿರುಧ್ಧವೇ ಯತ್ನಾಳ ವಾಗ್ದಾಳಿ ನಡೆಸಿದರು.

ಬೊಮ್ಮಾಯಿ ಹೆಸರೇ ಇರಲಿಲ್ಲ. ಯತ್ನಾಳ ಮಂತ್ರಿ ಆದ್ರ ನನ್ನ ಮಗ ಕೂಡ ಮಂತ್ರಿ ಆಗಬೇಕು ಎಂದರು. ಹೀಗಾಗಿ ಎರಡೂ ಆಗಲಿಲ್ಲ. ಪಾರ್ಟಿಯಿಂದ ಹೊರಗೆ ಹಾಕಿದರು. ನನ್ನ ಮಗನ‌ ಮುಖ್ಯಮಂತ್ರಿ ತಪ್ಪು ತ್ತೆ ಎಂದು ನನ್ನ ಹೊರಗೆ ಹಾಕಿದರು. ಇದು ದೇಶದ ಭವಿಷ್ಯ ತೀರ್ಮಾನ ಮಾಡುವ ಚುನಾವಣೆ. ಕುಟುಂಬ ರಾಜಕಾರಣ ಮುಂದುವರೆದರೆ ಪ್ರಜೆಗಳು ಹೀಗೆ ಸುಮ್ಮನಿರಬೇಕಾಗುತ್ತೆ ಎಂದು ಹರಿಹಾಯ್ದರು.

ಡಿಕೆಶಿ ಆಸ್ತಿ ಹರಾಜು ಮಾಡಿದ್ರೆ 15 ಲಕ್ಷ ಬರುತ್ತೆ

ಪ್ರಧಾನಿ ನರೇಂದ್ರ ಮೋದಿ 15 ಲಕ್ಷ ಖಾತೆಗೆ ಹಾಕಲಿಲ್ಲ ಎಂದು ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷದವರು ಕೇಳುತ್ತಾರೆ. ಆದರೆ, ಡಿ.ಕೆ. ಶಿವಕುಮಾರ್ ಆಸ್ತಿ ಹರಾಜು ಮಾಡಿದ್ರೆ ಕರ್ನಾಟಕದ ಪ್ರತಿಯೊಬ್ಬರಿಗೂ 15 ಲಕ್ಷ ಬರುತ್ತೆ. ಹಣ ಲೂಟಿ ಮಾಡಿ ಇವರು, ಮೋದಿ ಏನೂ ಮಾಡಿದ್ದಾರೆ ಎಂದು ಪ್ರಶ್ನೆ ಮಾಡುತ್ತಾರೆ. ನಾವು ಸುರಕ್ಷಿತವಾಗಿ ಇರಲು ಮೋದಿ ಅವರು ಕಾರಣ ಎಂದು ಹೇಳಿದರು.

ದಲಿತ ಸಮುದಾಯಗಳಲ್ಲಿ ಬಡವರು ಇಲ್ಲವಾ?

ಗ್ಯಾರಂಟಿ ಯೋಜನೆಗಳೇ ಬೋಗಸ್. ಕಾಂಗ್ರೆಸ್ ಶಾಸಕರೇ ಗ್ಯಾರಂಟಿ ಯೋಜನೆಗಳನ್ನ ವಿರೋಧಿಸುತ್ತಿದ್ದಾರೆ. ಸಿಎಂ ಸಿದ್ರಾಮಯ್ಯನವರೇ, 10 ಸಾವಿರ ಕೋಟಿ ಏಕೆ ಮುಸ್ಲಿಂರಿಗೆ ಕೊಡುತ್ತೀರಿ. ಹಾಲುಮತ, ದಲಿತ ಸಮುದಾಯಗಳಲ್ಲಿ ಬಡವರು ಇಲ್ಲವಾ? ಎಂದು ಸಿದ್ದರಾಮಯ್ಯ ವಿರುದ್ಧವೂ ಶಾಸಕ ಯತ್ನಾಳ್ ಕಿಡಿಕಾರಿದರು.

RELATED ARTICLES

Related Articles

TRENDING ARTICLES