Tuesday, May 7, 2024

ಒಂದೇ ಮರಕ್ಕೆ ನೇಣುಬಿಗಿದುಕೊಂಡು ಪ್ರೇಮಿಗಳು ಆತ್ಮಹತ್ಯೆ!

ಗದಗ : ಪ್ರೇಮಿಗಳಿಬ್ಬರು ಒಂದೇ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿಮ ನರೇಗಲ್​ ಪಟ್ಟಣದಲ್ಲಿ ನಡೆದಿದೆ.

ನರೇಗಲ್ ಪಟ್ಟಣದ ಅಪ್ಪಣ್ಣ ಗೊರಕಿ(28), ಲಲಿತಾ ಹಲಗೇರಿ (21) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಒಂದೇ ಊರಿನವರಾದ ಅಪ್ಪಣ್ಣ ಗೊರಕಿ ಹಾಗೂ ಲಲಿತಾ ನಡುವೆ ಪ್ರೀತಿ ಚಿಗುರೊಡೆದಿತ್ತು. ಗಾಢವಾಗಿದ್ದ ಅವರ ಪ್ರೀತಿಗೆ ಮನೆಯವರ ಒಪ್ಪಿಗೆ ಇರಲಿಲ್ಲ ಎಂದು ತಿಳಿದು ಬಂದಿದೆ. ಈ ಮಧ್ಯೆ ಮನೆಯವರ ಬಲವಂತಕ್ಕೆ ಲಲಿತಾ ಇದೇ ಏಪ್ರಿಲ್ 4 ರಂದು ಬೇರೆ ಯುವಕನೊಂದಿಗೆ ಮದುವೆಯಾಗಿದ್ದಳು.

ಇದನ್ನೂ ಓದಿ: ಶಂಕಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA

ಈ ಮದುವೆಯಿಂದ ಅಪ್ಪಣ್ಣ-ಲಲಿತಾ ಇಬ್ಬರು ಮನ ನೊಂದಿದ್ದರು. ಅಪ್ಪಣ್ಣ‌ನೊಂದಿಗೆ ನೂರಾರು ಕನಸು ಕಂಡಿದ್ದ ಲಲಿತಾ ಆತನನ್ನು ಮರೆಯಲು ಆಗಿರಲಿಲ್ಲ. ಬೇರೊಬ್ಬನ ಜತೆಗೆ ಮದುವೆ ಆಗಿದ್ದರೂ, ಅಣ್ಣಪ್ಪನ ಗುಂಗಿನಲ್ಲೇ ಇದ್ದ ಲಲಿತಾ ಒಬ್ಬರನ್ನೊಬ್ಬರು ಬಿಟ್ಟು ಇರಲು ಆಗದೆ ಊರಿನ ಹೊರವಲಯದ ಖಾಲಿ ಜಾಗದಲ್ಲಿದ್ದ ಮರವೊಂದಕ್ಕೆ ನೇಣು ಬಿಗಿದುಕೊಂಡಿದ್ದಾರೆ.

ಮುಂಜಾನೆ ಗ್ರಾಮದ ಜನರು ಗದ್ದೆ ಕೆಲಸಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ನರೇಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.

RELATED ARTICLES

Related Articles

TRENDING ARTICLES