Sunday, May 5, 2024

ನಾಯಂಡಹಳ್ಳಿ ಫ್ಲೈಓವರ್​ ಮೇಲಿಂದ ಹಾರಿ ನವವಿವಾಹಿತ ಆತ್ಮಹತ್ಯೆ

ಬೆಂಗಳೂರು: ನವವಿವಾಹಿತ ಯುವಕನೊಬ್ಬ ನಾಯಂಡಹಳ್ಳಿ ಫ್ಲೈ ಓವರ್ ಮೇಲಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

ಮೃತನನ್ನು ಯಲಹಂಕ ಮೂಲದ ನವೀನ್ ಎಂದು ಗುರುತಿಸಲಾಗಿದೆ. ನವೀನ್‌ ಬೈಕನ್ನು ಫ್ಲೈಓವರ್ ಮೇಲೆ ಪಾರ್ಕಿಂಗ್ ಮಾಡಿ ಏಕಾಏಕಿ ಕೆಳಗೆ ಜಿಗಿದಿದ್ದಾನೆ. ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ದೌಡಾಯಿಸಿದ್ದು, ಹೆಚ್ಚಿನ ವಿವರ ಕಲೆಹಾಕುತ್ತಿದ್ದಾರೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್​​ ಪ್ರಕರಣ : NIA ಯಿಂದ ಶಂಕಿತರ ಬಂಧನ

ನವೀನ್‌ ಕರ್ನಾಟಕ ವಿದ್ಯುತ್‌ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ನಾಲ್ಕು ತಿಂಗಳ ಹಿಂದೆಯಷ್ಟೆ ಈತ ಮದುವೆಯಾಗಿದ್ದ. ಎರಡು ತಿಂಗಳಿನಿಂದ ಕಾಂಟ್ರಾಕ್ಟ್ ಬೇಸ್ ಮೇಲೆ ಕವಿಕ ದಲ್ಲಿ ಡಿ ಗ್ರೂಪ್ ಕೆಲಸ ಮಾಡುತ್ತಿದ್ದ. ಇಂದು ಬೆಳಗ್ಗೆ ಡ್ಯೂಟಿಗೆ ಹೋಗುತ್ತೇನೆ ಎಂದು ಮನೆಯಿಂದ ಹೊರಟಿದ್ದ ನವೀನ್‌ ನಾಯಂಡಹಳ್ಳಿ ಫ್ಲೈಓವರ್‌ ಮೇಲಿಂದ ಕೆಳಗೆ ಜಿಗಿದಿದ್ದಾನೆ. ಸಾವಿಗೆ ನಿಖರವಾದ ಕಾರಣ ಇನ್ನಷ್ಟೆ ತಿಳಿಯಬೇಕಾಗಿದೆ.

RELATED ARTICLES

Related Articles

TRENDING ARTICLES