Thursday, May 9, 2024

ಪ್ರಧಾನಿ, ಸಿಎಂ ಆಗಿದ್ದಾಗ ರಾಮನಗರ ಜಿಲ್ಲೆಗೆ ಏನು ಮಾಡಿದ್ರು? : ಡಿ.ಕೆ. ಸುರೇಶ್

ರಾಮನಗರ : ಗೆದ್ದ ಮೇಲೆ ನಾನು ದೆಹಲಿಯಲ್ಲಿ ಕುಳಿತುಕೊಂಡಿರಲಿಲ್ಲ ಎಂದು ಸಂಸದ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಹೇಳಿದರು.

ರಾಮನಗರದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಜನರ ನಡುವೆ ಇದ್ದು ಕೆಲಸ ಮಾಡಿದ್ದೇನೆ. ಪ್ರತಿ ಜನರ ಕಷ್ಟ ಕೇಳಿದ್ದೇನೆ ಎಂದು ತಿಳಿಸಿದರು.

ಕಸಬಾ ಹೋಬಳಿಯ 60 ಕೆರೆಗಳು, ಕೈಲಾಂಚ ಹೋಬಳಿಯ ಎಲ್ಲಾ ಕೆರೆಗಳನ್ನು ತುಂಬಿಸುವ ಯೋಜನೆ ರೂಪಿಸಲಾಗುತ್ತಿದೆ. ಸುಮಾರು 10 ಸಾವಿರಕ್ಕೂ ಹೆಚ್ಚು ಟ್ರಾನ್ಸ್ ಫಾಮರ್ಸ್ ಗಳನ್ನು ರೈತರ ಉಪಯೋಗಕ್ಕೆ ಹಾಕಿಕೊಟ್ಟಿದ್ದೇನೆ. ಇಷ್ಟೆಲ್ಲಾ ಕೆಲಸ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ಮತ ಕೇಳಲು ಹಿಂಜರಿಯಬೇಡಿ ಎಂದರು.

ಕನಕಪುರ ಒಂದರಲ್ಲೇ 1,500 ಚೆಕ್ ಡ್ಯಾಂಗಳು ಜಿಲ್ಲೆಯಾದ್ಯಂತ 3 ಸಾವಿರಕ್ಕೂ ಚೆಕ್ ಡ್ಯಾಂಗಳನ್ನು ಕಟ್ಟಿದ್ದೇನೆ. ನಾನು ಸ್ವಾಭಿಮಾನದ ಮತ, ಕೂಲಿಯನ್ನು ನಿಮ್ಮ ಬಳಿ ಕೇಳುತ್ತಿದ್ದೇನೆ. ನನ್ನ ಜಿಲ್ಲೆ ನಂಬರ್ 1 ಜಿಲ್ಲೆಯಾಗಬೇಕು ಎನ್ನುವ ಕಾಳಜಿ ನನಗೆ ಇದ್ದ ಕಾರಣ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

ಈಗ ನಿಂತಿರುವವರು ನಮ್ಮ ಜಿಲ್ಲೆಯವರಾ?

ಈಗ ನಿಂತಿರುವವರು ರಾಮನಗರ ಜಿಲ್ಲೆಯವರಾ? ಈಗ ನಿಂತಿರುವವರ ತಮ್ಮ ಚನ್ನರಾಯಪಟ್ಟಣದ ಶಾಸಕರು. ಅವರ ಮಾವ ಈ ದೇಶದ ಪ್ರಧಾನಿಗಳಾಗಿದ್ದವರು. ಹಾಸನ ಜಿಲ್ಲೆಯವರು ಸೋಲಿಸಿ ಕಳುಹಿಸಿದಾಗ ಇಲ್ಲಿಗೆ ಬಂದರು. ಇಲ್ಲಿನ ಜನತೆ ಅವರನ್ನು ಮತ್ತೆ ಗೆಲ್ಲಿಸಿದರು. ಅವರು ಪ್ರಧಾನಿ, ಮುಖ್ಯಮಂತ್ರಿಗಳಾಗಿದ್ದಾಗ ಜಿಲ್ಲೆಗೆ ಏನು ಮಾಡಿದರು? ಎಂದು ಸಂಸದ ಡಿ.ಕೆ. ಸುರೇಶ್ ಪ್ರಶ್ನೆ ಮಾಡಿದರು.

RELATED ARTICLES

Related Articles

TRENDING ARTICLES