Friday, May 3, 2024

ಎಳನೀರು ಕುಡಿದು ಅಸ್ವಸ್ಥಗೊಂಡ ಜನ ಆಸ್ಪತ್ರೆಗೆ ದಾಖಲು!

ಮಂಗಳೂರು : ಬೊಂಡ ಫ್ಯಾಕ್ಟರಿಯಲ್ಲಿನ ಎಳನೀರು ಕುಡಿದ ಸ್ಥಳೀಯರು ತೀವ್ರ ಅಸ್ವಸ್ಥರಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ನಡೆದಿದೆ.

ಎಳನೀರು ಬಳಸಿ ನ್ಯಾಚುರಲ್​ ಐಸ್​ ಕ್ರೀಮ್​ ತಯಾರಿಸುತ್ತಿರುವ ಕಾರ್ಖಾನೆಯಲ್ಲಿ ಸಿಯಾಳದ ನೀರನ್ನು ಲೀಟರ್​ಗೆ 40 ರೂನಂತೆ ಮಾರಟ ಮಾಡುತ್ತಿದ್ದರು, ಬೇಸಿಗೆಯ ಬಿಸಿಲು ಹೆಚ್ಚಿರುವ ಕಾರಣ ಎಳನೀರಿಗೆ ಬಾರಿ ಬೇಡಿಕೆ ಇತ್ತು, ಇದೀಗ ಇಲ್ಲಿನ ಎಳನೀರು ಕೊಂಡು ಕುಡಿದು ಅಸ್ವಸ್ಥಗೊಂಡಿರುವ ಸ್ಥಳೀಯರ ಪೈಕಿ ಮೂವರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾದರೇ. 12 ಮಂದಿ ತುಂಬೆ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದು ಚೇತರಿಕೆ ಕಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬಿಜೆಪಿ ಮುಖಂಡರು ನನ್ನನ್ನು ಉಚ್ಚಾಟನೆ ಮಾಡಲಿ ಎಂದು ಕಾಯುತ್ತಿದ್ದೇನೆ : ಕೆ.ಎಸ್​ ಈಶ್ವರಪ್ಪ

ಎಳನೀರು ಕುಡಿದು ನಗರದ ಆಡ್ಯಾರ್​. ಕಣ್ಣೂರು, ತುಂಬೆ ಆಸುಪಾಸಿನ ನಿವಾಸಿಗಳ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ವಿಚಾರ ತಿಳಿದು ಜಿಲ್ಲಾ ಆರೋಗ್ಯಾಧಿಕಾರಿಗಳು ಬೊಂಡಾ ಫ್ಯಾಕ್ಟರಿಗೆ ಭೇಟಿ ನೀಡಿದ್ದ ಪರಿಶೀಲನೆ ನಡೆಸಿ ಕಾರ್ಖಾನೆಯನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಸೂಚನೆ ನೀಡಿದ್ದಾರೆ.

 

RELATED ARTICLES

Related Articles

TRENDING ARTICLES