Saturday, May 4, 2024

ಬಿಜೆಪಿ ಮುಖಂಡರು ನನ್ನನ್ನು ಉಚ್ಚಾಟನೆ ಮಾಡಲಿ ಎಂದು ಕಾಯುತ್ತಿದ್ದೇನೆ : ಕೆ.ಎಸ್​ ಈಶ್ವರಪ್ಪ

ಶಿವಮೊಗ್ಗ : ಬಿಜೆಪಿ ಮುಖಂಡರು ನನ್ನನ್ನು ಇನ್ನೂ ಯಾಕೆ ಉಚ್ಚಾಟನೆ ಮಾಡಲಿಲ್ಲ ಎಂದು ಗೊತ್ತಿಲ್ಲ, ನಾನು ಕೂಡ ಉಚ್ಚಾಟನೆ ಮಾಡಲಿ ಎಂದು ಕಾಯುತ್ತಿದ್ದೇನೆ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್​ ಈಶ್ವರಪ್ಪ ಅವರು ಬಿಜೆಪಿ ಪಕ್ಷದ ಮುಖಂಡರ ವಿರುದ್ದ ಗುಡುಗಿದರು.

ಲೋಕಸಭಾ ಚುನಾವಣೆ ಹಿನ್ನೆಲೆ ಪ್ರಚಾರದ ವೇಳೆ ಮಾದ್ಯಮವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮುಖಂಡರು ನನ್ನನ್ನು ಉಚ್ಚಾಟನೆ ಮಾಡಲಿ ಎಂದು ಕಾಯುತ್ತಿದ್ದೇನೆ , ಮಾಡಿದ ಬಳಿಕ ಮತ್ತಷ್ಟು ಉತ್ತಮವಾದ ಭಾಷೆಯನ್ನು ಅಪ್ಪ ಮಕ್ಕಳ ವಿರುದ್ದ ಮಾತನಾಡಬಹುದು ಎಂದು ಮಾಜಿ ಸಿಎಂ ಯಡಿಯೂರಪ್ಪ ಹಾಗು ಬಿವೈ ವಿಜಯೇಂದ್ರ ವಿರುದ್ದ ಪ್ರತ್ಯೆಕ್ಷವಾಗಿ ಕಿಡಿಕಾರಿದರು.

ಇನ್ನು ಜಿಲ್ಲೆಯಾದ್ಯಾಂತ ಶೇ. 60 ರಷ್ಟು ಜನ ನನ್ನ ಪರವಾಗಿ ಒಲವು ತೋರುತ್ತಿದ್ದಾರೆ. ಹಿಂಧುತ್ವವನ್ನು ಮೆಚ್ಚಿ ನನಗೆ ಪ್ರೋತ್ಸಾಹಿಸುತ್ತಿದ್ದಾರೆ. ಕಾಂಗ್ರೆಸ್​ ಮತ್ತು ಜೆಡಿಎಸ್​​ನ ಕಾರ್ಯಕರ್ತರು ಹಾಗು ಮುಖಂಡರು ಕೂಡ ನಮ್ಮ ಪರವಾಗಿದ್ದಾರೆ.

ಇದನ್ನೂ ಓದಿ : ಚುನಾವಣೆ ನಂತರ ಕಾಂಗ್ರೆಸ್​ ಧೂಳಿಪಟ: ಬಿ.ವೈ ವಿಜಯೇಂದ್ರ

ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ತುಂಬಾ ವೀಕ್ ಇದ್ದಾರೆಂದು ಕಾಂಗ್ರೆಸ್​ ಹಾಗು ಜೆಡಿಎಸ್​ ಕಾರ್ಯಕರ್ತರು ನನಗೆ ಕರೆ ಮಾಡಿ ತಿಳಿಸಿದ್ದಾರೆ, ಈ ಚುನಾವಣೆಯಲ್ಲಿ ನಿಮಗೆ ಸಪೋರ್ಟ್​ ಮಾಡ್ತೀವಿ ಎಂದು ಜನ ಹೇಳುತ್ತಿದ್ದಾರೆ. ಜಿಲ್ಲೆಯಲ್ಲಿ ಎಷ್ಟೋ ಜನರ ಮುಖವನ್ನು ನಾನು ನೋಡಿಲ್ಲ ಆದರೂ ಅವರೆಲ್ಲಾ ನನ್ನ ಪರ ಒಲವು ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಚುನಾವಣಾ ಕಣದಿಂದ ನಾನು ಹಿಂದೆ ಸರಿಯುತ್ತೇನೆ ಎಂದು ಕೆಲವರು ನನ್ನ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆ. ದಯಮಾಡಿ ಅಪಪ್ರಚಾರ ಮಾಡಬೇಡಿ ಎಂದು ಮನವಿ ಮಾಡುತ್ತೇನೆ. ನಾನು ಚುನಾವಣೆಯಲ್ಲಿ ನಿಲ್ಲುತ್ತೇನೆ, ನಾನು ವಾಪಾಸ್​ ಬರುವ ಪ್ರಶ್ನೆಯೇ ಇಲ್ಲ, ಇದನ್ನು ಇನ್ನು ಯಾವ ಭಾಷೆಯಲ್ಲಿ ಹೇಳಲಿ, ಬಿಜೆಪಿ ಶುದ್ಧಿಕರಣವಾಗಬೇಕೆಂದು ಬಯಸಿ ಹೊರಬಂದು ಧೈರ್ಯ ಮಾಡಿ ಹೋರಾಡುತ್ತಿದ್ದೆನೆ. ಸಿಟಿ ರವಿ, ಒಳಗಿದ್ದು ಹೋರಾಡುತ್ತಿದ್ದಾರೆ, ಸಿ.ಟಿ. ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ನಾನು ಹೇಳಿಲ್ಲ.
ಅವರಿಗೆ ಅವಕಾಶ ಕೊಟ್ಟಿಲ್ಲ ಎಂದು ನಾನು ಹೇಳಿದ್ದೇನೆ. ಸಿ.ಟಿ. ರವಿ ಪ್ರತಾಪ್ ಸಿಂಹ ಹಾಗೂ ಸದಾನಂದಗೌಡ, ಕಟೀಲಿಗೆ ಅವಕಾಶ ತಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದೇನೆ ಎಂದರು.

ಈಶ್ವರಪ್ಪಗೆ ಚುನಾವಣಾ ಠೇವಣಿ ಹಣ ನೀಡಿದ ಮಹಿಳೆಯರು :

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕೆ.ಎಸ್. ಈಶ್ವರಪ್ಪ ಬಂಡಾಯ ಸ್ಫರ್ಧೆ ಮಾಡುತ್ತಿದ್ದು ನಾಳೆ ನಾಮಪತ್ರ ಸಲ್ಲಿಕೆ ಮಾರಡಲಿದ್ದಾರೆ. ಈ ಹಿನ್ನೆಲೆ ಈಶ್ವರಪ್ಪ ಅವರನ್ನು ಬೆಂಬಲಿಸಿ ಮಾಜಿ ಮೇಯರ್ ಸುವರ್ಣ ಶಂಕರ್ ನೇತೃತ್ವದಲ್ಲಿ ಠೇವಣಿಗೆ ಬೇಕಾದ 24 ಸಾವಿರ ರೂ ಹಣವನ್ನು ಮಹಿಳೆಯರು ನೀಡಿ ಹರಸಿದ್ದಾರೆ.

RELATED ARTICLES

Related Articles

TRENDING ARTICLES