Thursday, May 9, 2024

ನಾನು ಫೋನ್ ಟ್ಯಾಪಿಂಗ್ ಮಾಡಿದ್ದಿದ್ರೆ, ನನ್ನ ಸರ್ಕಾರ ಬೀಳಲು ಬಿಡ್ತಿದ್ನಾ? : ಕುಮಾರಸ್ವಾಮಿ

ಹಾಸನ : ಜೆಡಿಎಸ್‌ನವರು ನಿರ್ಮಲಾನಂದನಾಥ ಸ್ವಾಮೀಜಿ ಫೋನ್ ಟ್ಯಾಪಿಂಗ್ ಮಾಡಿದ್ದಾರೆ ಎಂಬ ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದರು.

ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ರಾಮನಾಥಪುರದಲ್ಲಿ ಮಾತನಾಡಿದ ಅವರು, ಅದರ ಬಗ್ಗೆಯೂ ತನಿಖೆ ಮಾಡಲಿಲ್ಲವಾ? ತನಿಖೆ ಎಲ್ಲಿಗೆ ಬಂದಿತ್ತು. ನನಗೆ ಅದು ಸಂಬಂಧ ಇಲ್ಲದೆ ಇರುವ ವಿಚಾರ ಎಂದುಕುಟುಕಿದರು.

ಇನ್ನೊಬ್ಬರ ಟೆಲಿಫೋನ್ ಟ್ಯಾಪಿಂಗ್ ಮಾಡುವ ಅವಶ್ಯಕತೆ ನನಗೇನಿತ್ತು..? ಆ ತರ ಫೋನ್ ಟ್ಯಾಪಿಂಗ್ ಮಾಡಿಕೊಂಡು ಇದ್ದಿದ್ದರೆ ನನ್ನ ಸರ್ಕಾರ ಹೋಗಲು ಬಿಡ್ತಿದ್ನಾ? ನನ್ನ ಸರ್ಕಾರ ಅವತ್ತು ಹೋಗೋದಾ? ರಾಜಕಾರಣದಲ್ಲಿ ಹಲವು ರೀತಿಯ ಅಪಪ್ರಚಾರ ಮಾಡುತ್ತಿದ್ದಾರೆ. ಅದರಲ್ಲಿ ಯಶಸ್ಸು ಕಾಣುತ್ತೇವೆ ಎಂದು ಕೆಲವರು ತಿಳಿದುಕೊಂಡಿದ್ದಾರೆ. ಅದರಲ್ಲಿ ಯಾವುದೇ ಯಶಸ್ಸು ದೊರಕಲ್ಲ ಎಂದು ವಾಗ್ದಾಳಿ ನಡೆಸಿದರು.

ಮಠಗಳಿಗೆ 130 ಕೋಟಿ ಬಿಡುಗಡೆ ಮಾಡಿದ್ದೇನೆ

ಗುರುತೇ ಹಿಡಿಯದಂತಹ ಬೇರೆ ಬೇರೆ ಸಮಾಜದ 140 ಸಣ್ಣ ಸಣ್ಣ ಮಠಾಧೀಶರಿಗೆ ಎರಡನೇ ಬಾರಿ ಮುಖ್ಯಮಂತ್ರಿ ಆದಾಗ 130 ಕೋಟಿ ಹಣ ಬಿಡುಗಡೆ ಮಾಡಿದ್ದೇನೆ. ನನಗೆ ಇದೇನು ಹೊಸದಲ್ಲ, ಇದೆಲ್ಲ ಮಾಮೂಲಿ ನಮಗೆ. ಬೇರೆ ಸಮಾಜದಲ್ಲಿ ಎಷ್ಟೆಷ್ಟು ಮಠಗಳಿಲ್ಲ? ನಮ್ಮಲ್ಲೂ ದೊಡ್ಡದಾಗಿ, ಹೊಸದಾಗಿ ಬೆಳೆಯಲಿ ಅಂತ ಇನ್ನೊಬ್ಬರು ಸ್ವಾಮೀಜಿನಾ ಬೆಳಸಲು ಬಂದರು. ಅವರೆಲ್ಲಾ ಈಗ ಕಾಂಗ್ರೆಸ್‌ನಲ್ಲಿ ಇದ್ದಾರೆ ಎಂದು ಹೇಳಿದರು.

ಪರ್ಯಾಯವಾಗಿ ಮಠ ಬೆಳೆಸಲು ಹೋದ್ರಾ?

ಅವರು ಇನ್ನೊಂದು ಮಠ ಇರಲಿ ಅಂತ ಬೆಳಸಲು ಹೋದರು. ಪರ್ಯಾಯವಾಗಿ ಮಠ ಬೆಳೆಸಲು ಹೋದ್ರಾ? ಇನ್ನೊಬ್ಬ ಸ್ವಾಮೀಜಿ ಇದ್ದರೆ ಅವರ ಆಶೀರ್ವಾದ ಸಿಗಲಿ ಎಂದು ಮಾಡಿದ್ರು. ಪರ್ಯಾಯವಾಗಿ ಮಾಡಿದ್ದಲ್ಲ. ದೊಡ್ಡ ಜನಸಂಖ್ಯೆ ಇದೆ ಇನ್ನೊಂದು ಮಠ ಮಾಡ್ತೀವಿ, ಸ್ವಾಮೀಜಿ ಇರಲಿ ಅಂದರು. ಅದಕ್ಕೆ ಸಹಕಾರ ಕೊಟ್ಟಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

RELATED ARTICLES

Related Articles

TRENDING ARTICLES