Sunday, May 5, 2024

ಚುನಾವಣೆ ಬಳಿಕ ಡಿಕೆಶಿ, ಸಿದ್ದರಾಮಯ್ಯ ಸಿಎಂ ಆಗಿರೋದನ್ನ ನೋಡಿಕೊಂಡು ಕೂರಲ್ಲ : ಬಿ.ವೈ. ವಿಜಯೇಂದ್ರ

ಹಾವೇರಿ : ಲೋಕಸಭಾ ಚುನಾವಣೆ ಬಳಿಕ ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರೋದನ್ನ ನೋಡಿಕೊಂಡು ಕೂರ್ತಾರೆ ಅಂತ ನನಗಂತೂ ವಿಶ್ವಾಸ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕುಟುಕಿದರು.

ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಮತ್ತೆ ವಿಧಾನಸಭೆ ಚುನಾವಣೆ ನಡೆಯುವ ವಿಚಾರವಾಗಿ ಮಾತನಾಡಿದ ಅವರು, ನಾನು ಭವಿಷ್ಯ ನುಡಿಯಲು ಇಚ್ಛೆ ಪಡುವುದಿಲ್ಲ ಎಂದರು.

ರಾಜ್ಯಾದ್ಯಂತ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೆ ಪ್ರವಾಸ ಮಾಡ್ತಾ ಇದ್ದೀನಿ. ನರೇಂದ್ರ ಮೋದಿಯವರ ಪರ ಅಲೆ ಇದೆ. ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿ ಮಾಡುವ ಹಂಬಲ ಜನರಲ್ಲಿದೆ. ನನಗಂತೂ ವಿಶ್ವಾಸ  ಇದೆ. ಮೋದಿ ಸಾಧನೆ, ರಾಜ್ಯ ಸರ್ಕಾರದ ವೈಫಲ್ಯದ ಪರಿಣಾಮ, ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಹೊಸ ದಾಖಲೆ ಸೃಷ್ಟಿ ಮಾಡಲಿದೆ. ನನಗಿಂತ ನಮ್ಮ ಕಾರ್ಯಕರ್ತರು ವಿಶ್ವಾಸದಲ್ಲಿದ್ದಾರೆ ಎಂದು ಹೇಳಿದರು.

ಫಲಿತಾಂಶದ ಬಳಿಕ ಡಿಕೆಶಿ ಉತ್ಸಾಹ ಅರಗುತ್ತೆ

ಕುಮಾರಸ್ವಾಮಿ ತೋಟದ ಮನೆಯಲ್ಲಿ ಔತಣಕೂಟ ರದ್ದಾದ ವಿಚಾರವಾಗಿ ಮಾತನಾಡಿ, ಡಿ.ಕೆ. ಶಿವಕುಮಾರ್ ಬಹಳ ಉತ್ಸಾಹದಲ್ಲಿದ್ದಾರೆ. ಆ ಉತ್ಸಾಹ ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಅರಗುತ್ತೆ. ಇವರು ಒಂದು ಕೈಲಿ ಕೊಟ್ಟು, ಇನ್ನೊಂದು ಕೈಲಿ ಕಿತ್ಕೊತಿದ್ದಾರೆ. ಇದನ್ನ ನಾವು ಜನರ ಮುಂದೆ ಇಡ್ತೀವಿ. ಮೋದಿಯವರ ಗ್ಯಾರಂಟಿ ಮುಂದೆ ತಾತ್ಕಾಲಿಕವಾದ ಗ್ಯಾರಂಟಿ ಬಗ್ಗೆ ಜನ ವಿಶ್ವಾಸ ಕಳೆದುಕೊಳ್ತಿದ್ದಾರೆ ಎಂದು ಚಾಟಿ ಬೀಸಿದರು.

ನಾನೇ ಸ್ವತಃ ಅವರ ಬಳಿ ಮಾತನಾಡಿದ್ದೇನೆ

ದಿಂಗಾಲೇಶ್ವರ ಸ್ವಾಮೀಜಿ ಮನವೊಲಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನೇ ಸ್ವತಃ ಅವರ ಬಳಿ ಮಾತನಾಡಿದ್ದೇನೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರೂ ದಿಂಗಾಲೇಶ್ವರ ಸ್ವಾಮೀಜಿ ಬಳಿ ಮಾತನಾಡಿದ್ದಾರೆ. ಇನ್ನೂ ಸಮಯ ಇದೆ ಮಾತಾಡ್ತೀನಿ ಎಂದು ಬಿ.ವೈ. ವಿಜಯೇಂದ್ರ ತಿಳಿಸಿದರು.

RELATED ARTICLES

Related Articles

TRENDING ARTICLES