Sunday, May 5, 2024

ನಾವೆಲ್ಲ ಭಾರತ ಮಾತೆಯ ಮಕ್ಕಳು, ಕಾಂಗ್ರೆಸ್ ನವರು ಸೋನಿಯಾ ಗಾಂಧಿ ಮಕ್ಕಳು : ಬೊಮ್ಮಾಯಿ

ಗದಗ : ನಾವೆಲ್ಲ ಭಾರತ ಮಾತೆಯ ಮಕ್ಕಳು. ಕಾಂಗ್ರೆಸ್ ನವರು ಸೋನಿಯಾ ಗಾಂಧಿ ಮಕ್ಕಳು. ನಾವು ಭಾರತ ಮಾತೆಯ ಸೇವೆ ಮಾಡೋಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅವರು ಇಂದು ಗದಗ ಜಿಲ್ಲೆಯ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಿಗ್ಲಿ,ದೊಡ್ಡೂರು, ಕುರುಡಗಿ, ಸೂರಣಗಿ, ಬಾಲೆಹೊಸೂರು ಗ್ರಾಮಗಳಲ್ಲಿ ರೋಡ್ ಶೋ ಮಾಡಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಳೆದ ಹತ್ತು ವರ್ಷದಲ್ಲಿ ಭಯೋತ್ಪಾದಕರನ್ನು ಅವರ ನೆಲದಲ್ಲಿ ಹೋಗಿ ಧ್ವಂಸ ಮಾಡಿದ್ದಾರೆ. ಭಾರತವನ್ನು ಭಯೊತ್ಪಾದನೆ ಮುಕ್ತ ಮಾಡಿದ್ದಾರೆ.

ನಾನು ಸಿಎಂ ಆಗಿದ್ದಾಗ ಪ್ರವಾಹ ಬಂದಾಗ ಕೇಂದ್ರ ಸರ್ಕಾರ ನೀಡುವ ಎರಡು ಪಟ್ಟು ಪ್ರವಾಹ ಪರಿಹಾರ ನೀಡಿದ್ದೇನೆ. 4500 ಕೋಟಿ ರೂ. ಪರಿಹಾರ ನೀಡಿದ್ದೇವು. ಇವರು ತಾವು ಪರಿಹಾರ ನೀಡದೇ ಕೇಂದ್ರದ ಕಡೆಗೆ ಕೈತೋರಿಸುತ್ತಿದ್ದಾರೆ. ಇವರು ರೈತರ ವಿರೋಧಿ ಸರ್ಕಾರ. ರೈತರ, ನೇಕಾರರ ಹಿಂದುಳಿದವರ ಯೋಜನೆಗಳು ಸ್ಥಗಿತವಾಗಿವೆ ಎಂದು ಹೇಳಿದರು.

ಇದನ್ನೂ ಓದಿ: ಸ್ಕೈ ಡೈವಿಂಗ್ ಮೂಲಕ ಮೋದಿ ಅಭಿಮಾನ ಪ್ರದರ್ಶನ

ಕಾಂಗ್ರೆಸ್ ಸ್ಪರ್ಧೆ ಮಾಡಿರುವುದೇ 200 ಕ್ಷೇತ್ರದಲ್ಲಿ ಅವರು ಅಧಿಕಾರಕ್ಕೆ ಹೇಗೆ ಬರಲು ಸಾಧ್ಯ. ಮುಂದಿನ ಎರಡು ಮೂರು ವರ್ಷದಲ್ಲಿ ರಾಜ್ಯ ಸರ್ಕಾರ ಇನ್ನೂ ಸಾಲ ಮಾಡುತ್ತಿದೆ.

ಎಲ್ಲ ಜಾತಿ ಮತ ವರ್ಗದವರು ಮುಂದೆ ಬರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ನಿರಂತರ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ 15 ಕೋಟಿ ಜನರನ್ನು ಬಡತನ ರೇಖೆಗಿಂತ ಮೇಲೆ ತರುವ ಕೆಲಸ ಮಾಡಿದ್ದಾರೆ. ಇನ್ನು ಐದು ವರ್ಷದಲ್ಲಿ ಇನ್ನೂ 15 ಕೋಟಿ ಜನರನ್ನು ಬಡತನ ರೇಖೆಗಿಂತ ಮೇಲೆ ತರುವ ಕೆಲಸ ಮಾಡಲಿದ್ದಾರೆ ಎಂದರು.

ಪಾಕಿಸ್ತಾನದ ಜನರು ನರೇಂದ್ರ ಮೋದಿಯವರು ಆ ದೇಶದ ಪ್ರಧಾನಿಯಾಗಿ ಅವರ ದೇಶ ಅಭಿವೃದ್ಧಿ ಮಾಡಿಕೊಡಬೇಕು ಎಂದು ಮನವಿ ಮಾಡುತ್ತಿದ್ದಾರೆ. ಒಬ್ಬ ಚಾಯ್ ಮಾರುವ ಹುಡುಗ ಹಂತ ಹಂತವಾಗಿ ಮೇಲೆ ಬಂದವರು ನರೇಂದ್ರ ಮೋದಿಯವರು. ಅವರ ಕರ್ತವ್ಯ ಪ್ರಜ್ಞೆ ಎಷ್ಟಿದೆ ಎಂದರೆ ಅವರ ತಾಯಿ ನಿಧನ ಹೊಂದಿದಾಗ ಮೂರು ಗಂಟೆಯಲ್ಲಿ ಅಂತ್ಯ ಸಂಸ್ಕಾರ ಮಾಡಿ, ಮತ್ತೆ ದೇಶದ ಕೆಲಸ ಆರಂಭಿಸಿದರು ಹೇಳಿದರು.

RELATED ARTICLES

Related Articles

TRENDING ARTICLES