Sunday, May 5, 2024

ವಿಜಯೇಂದ್ರ ನೇತ್ರತ್ವದಲ್ಲಿ 28ಕ್ಕೆ 28 ಕ್ಷೇತ್ರ ಗೆಲ್ಲುತ್ತೇವೆ : ಉಲ್ಟಾ ಹೊಡೆದ ರೇಣುಕಾಚಾರ್ಯ

ದಾವಣಗೆರೆ : ಯಡಿಯೂರಪ್ಪ ಫ್ಯಾಮಿಲಿ ವಿರುದ್ಧ ರೆಬೆಲ್ ಆಗಿದ್ದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಇದೀಗ ಯೂಟರ್ನ್ ಹೊಡೆದಿದ್ದಾರೆ. ವಿಜಯೇಂದ್ರ ನೇತ್ರತ್ವದಲ್ಲಿ 28 ಕ್ಷೇತ್ರ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.

ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಸಭೆ ಬಳಿಕ ಮಾತನಾಡಿ, ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ. ರಾಧಾ ಮೋಹನ್ ದಾಸ್ ಅವರ ಜೊತೆ ಚರ್ಚೆ ಮಾಡಿದ್ದೇವೆ. ವಿಜಯೇಂದ್ರ ನೇತ್ರತ್ವದಲ್ಲಿ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವುದು ನಮ್ಮ ಗುರಿ ಎಂದು ತಿಳಿಸಿದ್ದಾರೆ.

ದೇಶದ ಪ್ರಧಾನಿಯಾಗಿ ಮೋದಿ ಮತ್ತೋಮ್ಮೆ ಆಯ್ಕೆ ಆಗಬೇಕು. ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ ಎಂದರು. ಆದರೆ, ಗಾಯತ್ರಿ ಸಿದ್ದೇಶ್ವರ್ ಹೆಸರು ಹೇಳಲು ಹಿಂದೇಟು ಹಾಕಿದರು. ಮಾಧ್ಯಮದವರ ಒತ್ತಾಯ ನಂತರ ಗಾಯತ್ರಿ ಸಿದ್ದೇಶ್ವರ್ ಹೆಸರು ಹೇಳಿದರು. ನಮ್ಮಲ್ಲಿ ಎಲ್ಲ ಸರಿ ಹೋಗಿದೆ ಎಂದು ತಿಳಿಸಿದ್ದಾರೆ.

ಕಾರಜೋಳ ನನಗೆ ಎಲ್ಲಾ ಹೇಳಿದ್ದಾರೆ

ಎಸ್ಸಿ ಮೀಸಲು ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸಹೋದರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ದ್ವಾರಕೇಶ್ವರಯ್ಯ ನಾಮಪತ್ರ ಹಿಂಪಡೆಯುತ್ತೇವೆ. ನಾಮಪತ್ರ ವಾಪಸ್ ಪಡೆಯುವಂತೆ ಅವರಿಗೆ ನಾನೇ ಹೇಳುತ್ತೇನೆ. ಅದರ ಅವಶ್ಯಕತೆ ನಮಗೆ ಇಲ್ಲ, ಅದನ್ನು ನಾನು ಒಪ್ಪುವುದಿಲ್ಲ. ಗೋವಿಂದ ಕಾರಜೋಳ ನನಗೆ ಹೇಳಿದ್ದಾರೆ. ಸಹೋದರನಿಗೆ ನಾಮಪತ್ರ ವಾಪಸ್ ಪಡೆಯಲು ಹೇಳುತ್ತೇನೆ ಎಂದು ಹೇಳಿದ್ದಾರೆ.

ಜಾತಿ ಪ್ರಮಾಣ ಪತ್ರ ನಮಗೆ ಬೇಡ

ಈ ಹಿಂದೆ ನನ್ನ ಮಗಳ ಮೇಲೆ ಆಪಾದನೆ ಬಂದಿತ್ತು. ನಮಗೆ ಆ ಎಸ್ಸಿ ಸರ್ಟಿಫಿಕೇಟ್ ಬೇಡ. ನಾನು ಅದನ್ನು ಹಿಂದೆ ತೆಗೆಸುತ್ತೇನೆ , ಆ ಪ್ರಮಾಣ ಪತ್ರ ನಮಗೆ ಬೇಡ. ಸಾಮಾಜಿಕವಾಗಿ ಅವರಿಗೆ ನ್ಯಾಯ ಕೊಡಿಸಬೇಕು, ಆ ಜಾತಿ ಪ್ರಮಾಣ ಪತ್ರದ ಅವಶ್ಯಕತೆ ನಮಗೆ ಇಲ್ಲ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES