Saturday, May 11, 2024

ಇತಿಹಾಸ ಸೃಷ್ಟಿಸಿದ ಕಿಂಗ್ ಕೊಹ್ಲಿ : ವಿರಾಟ್ ಸೂಪರ್ ಸೆಂಚುರಿ, ಹಲವು ದಾಖಲೆ ಉಡೀಸ್

ಬೆಂಗಳೂರು : ರನ್ ಮೆಷಿನ್ ಕಿಂಗ್​ ಕೊಹ್ಲಿ ಐಪಿಎಲ್​ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದರು. ಐಪಿಎಲ್​ ಟೂರ್ನಿಯಲ್ಲಿ 7,500 ರನ್​ ಸಿಡಿಸಿದ ಮೊದಲ ಬ್ಯಾಟರ್​ ಎಂಬ ದಾಖಲೆಯನ್ನು ವಿರಾಟ್ ತನ್ನ ಹೆಸರಿಗೆ ಬರೆದುಕೊಂಡರು.

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 72 ಎಸೆತಗಳಲ್ಲಿ 14 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸ್​ಗಳ ಮೂಲಕ ಭರ್ಜರಿ ಶತಕ (113) ಬಾರಿಸಿದರು. ಆ ಮೂಲಕ ಈ ವರ್ಷದ ಐಪಿಎಲ್​ ಟೂರ್ನಿಯಲ್ಲಿ ಮೊದಲ ಶತಕ ದಾಖಲಾಯಿತು. ಇದು ವಿರಾಟ್ ಕೊಹ್ಲಿ ಅವರ 8ನೇ ಐಪಿಎಲ್ ಶತಕವಾಗಿದೆ.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆರ್​ಸಿಬಿಗೆ ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಪ್ ಡುಪ್ಲೆಸಿಸ್ ಉತ್ತಮ ಆರಂಭ ನೀಡಿದರು. ಮ್ಯಾಕ್ಸ್​ವೆಲ್ 1 ಹಾಗೂ ಇಂದು ಪದಾರ್ಪಣೆ ಮಾಡಿದ ಸೌರವ್ ಚೌಹಾನ್ 9 ರನ್​ ಗಳಿಸಿ ನಿರಾಸೆ ಮೂಡಿಸಿದರು.

ವಿರಾಟ್ ಕೊಹ್ಲಿ ಅಜೇಯ 113

ಆರ್​ಸಿಬಿ ಪರ ವಿರಾಟ್ ಕೊಹ್ಲಿ ಅಜೇಯ 113, ಡುಪ್ಲೆಸಿಸ್ 44, ಕ್ಯಾಮರೂನ್ ಗ್ರೀನ್​ ಅಜೇಯ 5 ರನ್ ಗಳಿಸಿದರು. ವಿರಾಟ್ ಕೊಹ್ಲಿ ಶತಕ ಪೂರೈಸುವ ಭರದಲ್ಲಿ ತಂಡದ ಮೊತ್ತ ಕೊಂಚ ಇಳಿಮುಖವಾಯಿತು. 19ನೇ ಓವರ್​ನಲ್ಲಿ ಕೇವಲ 4 ರನ್​ ಗಳಿಸಿದರು. ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಆರ್​ಸಿಬಿ 183 ರನ್​ ಗಳಿಸಿತು. ರಾಜಸ್ಥಾನ್ ರಾಯಲ್ಸ್​ ಪರ ಚಹಾಲ್ 2 ಹಾಗೂ ಬರ್ಗರ್ ಒಂದು ವಿಕೆಟ್ ಪಡೆದರು.

ಐಪಿಎಲ್​ನಲ್ಲಿ ಹೆಚ್ಚು ರನ್​ ಗಳಿಸಿದವರು

  • ವಿರಾಟ್ ಕೊಹ್ಲಿ : 7,500
  • ಶಿಖರ್ ಧವನ್ : 6,755
  • ಡೇವಿಡ್ ವಾರ್ನರ್ : 6,545
  • ರೋಹಿತ್ ಶರ್ಮಾ : 6,280
  • ಸುರೇಶ್ ರೈನಾ : 5,528

RELATED ARTICLES

Related Articles

TRENDING ARTICLES