Thursday, May 9, 2024

ಜಿಟಿಡಿ 80% ಕಮಿಷನ್ ದಂಧೆ ಮಾಡ್ತಿದ್ದಾರೆ : ಜಿಟಿಡಿ ವಿರುದ್ಧ ಯತೀಂದ್ರ ವಾಗ್ಯುದ್ಧ

ಮೈಸೂರು : ಸಿಎಂ ಸಿದ್ದರಾಮಯ್ಯಗೆ ಸವಾಲು ಹಾಕಿದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡಗೆ ಸಿಎಂ‌ ಪುತ್ರ ಡಾ. ಯತೀಂದ್ರ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ನಿಂತು ತಿರುಗೇಟು ಕೊಟ್ಟಿದ್ದಾರೆ.

ಲೋಕಸಭಾ ಸಮರದ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯಗೆ ರಾಜಕೀಯ ಪುನರ್ಜನ್ಮ ನೀಡಿದ್ದ, ಚಾಮುಂಡೇಶ್ವರಿ ಕ್ಷೇತ್ರದ ಗೆಲುವು, ಸೋಲಿನ ವಿಚಾರ ಇದೀಗ ಮುನ್ನೆಲೆಗೆ ಬಂದಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಶಾಸಕರಾಗಿ ಜಿ.ಟಿ.ದೇವೇಗೌಡ ಏನ್ ಕಡಿದು ಕಟ್ಟೆ ಹಾಕಿದ್ದಾನೆ ಎಂದಿದ್ದ ಸಿಎಂಗೆ, ಜಿಟಿಡಿ ಚುನಾವಣೆಗೆ ಬನ್ನಿ ನಾನಾ ನೀವಾ ನೋಡೋಣ ಎಂದು ಸವಾಲು ಹಾಕಿದ್ರು. ಜೊತೆಗೆ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಮೇಲೆ 60% ಕಮಿಷನ್ ದಂಧೆ ಬಗ್ಗೆ ಆರೋಪ ಮಾಡಿದ್ರು.

ಇದೀಗ ಜಿಟಿಡಿ ಆರೋಪಕ್ಕೆ ತಿರುಗೇಟು ನೀಡಿದ ಯತೀಂದ್ರ ಸಿದ್ದರಾಮಯ್ಯ, ಜಿಟಿಡಿ ಕ್ಷೇತ್ರದಲ್ಲಿ 80% ಕಮಿಷನ್ ದಂಧೆ ಮಾಡ್ತಿದ್ದಾರೆ ಅಂತ ನಾನು ಆರೋಪ ಮಾಡ್ತೀನಿ. ಕ್ಷೇತ್ರದಲ್ಲಿ ಅವ್ಯವಹಾರ ಮಾಡಿದ್ದಾರೆ ಅಂತಿದ್ದಾರೆ, ಅದನ್ನೆಲ್ಲಾ ಸಾಕ್ಷಿ ಸಮೇತ ಸಾಬೀತು ಮಾಡ್ಲಿ ಅಂತ ಸವಾಲ್ ಹಾಕಿದ್ರು.

ಮಾವೀನಹಳ್ಳಿ ಸಿದ್ದೇಗೌಡಗೆ ಟಾಸ್ಕ್

ಇನ್ನೂ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನೂ ಗೆಲ್ಲೋದಕ್ಕೆ ಹಠಕ್ಕೆ ಬಿದ್ದಿರೋ ಸಿಎಂ. ಕ್ಷೇತ್ರದಲ್ಲಿ ಅತಿ ಹೆಚ್ಚಿನ ಲೀಡ್ ಪಡೆಯಲು ಪುತ್ರ ಯತೀಂದ್ರ, ಪರಾಜಿತ ಅಭ್ಯರ್ಥಿ ಮಾವೀನಹಳ್ಳಿ ಸಿದ್ದೇಗೌಡಗೆ ಟಾಸ್ಕ್ ನೀಡಿದ್ದಾರೆ. ಹೀಗಾಗಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯತೀಂದ್ರ ಮತ ಬೇಟೆಗಿಳಿದಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದ ಟಾಕ್ ವಾರ್

ಒಟ್ಟಿನಲ್ಲಿ, ಚಾಮುಂಡೇಶ್ವರಿ ಕ್ಷೇತ್ರದ ವಿಚಾರದಲ್ಲಿ ಶುರುವಾಗಿರೋ ಟಾಕ್ ವಾರ್, ಇದೀಗ ನಿಲ್ಲೋ ಲಕ್ಷಣ ಕಾಣುತ್ತಿಲ್ಲ. ಪ್ರತಿಷ್ಟೆಯ ಕಣವಾಗಿ ಪರಿಣಮಿಸಿರೋ ಕ್ಷೇತ್ರ ಇದೀಗ ಯಾರ ಕೈವಶವಾಗುತ್ತೆ ಅನ್ನೋದು ಕುತೂಹಲ ಮೂಡಿಸಿದೆ.

RELATED ARTICLES

Related Articles

TRENDING ARTICLES