Thursday, May 9, 2024

Congress Manifesto: ‘ನ್ಯಾಯಪಾತ್ರ’ ಎಂಬ ಹೆಸರಿನಲ್ಲಿ ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆ ರಿಲೀಸ್​: ಇಲ್ಲಿದೆ ಕೈ ಗ್ಯಾರಂಟಿ ಹೈಲೈಟ್ಸ್

ನವದೆಹಲಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್​ ಪಕ್ಷವು ಪ್ರಣಾಳಿಕೆಯನ್ನು ರಿಲೀಸ್​ ಮಾಡಿದೆ.

48 ಪುಟಗಳ ಪ್ರಣಾಳಿಕೆಯಲ್ಲಿ ಒಟ್ಟು 25 ಗ್ಯಾರಂಟಿಗಳನ್ನ ‘ಕೈ’ ನಾಯಕರು ಘೋಸಿದ್ದಾರೆ. ಪ್ರಣಾಳಿಕೆಗೆ ‘ನ್ಯಾಯಪಾತ್ರ’ ಎಂದು ಹೆಸರಿಟ್ಟಿರುವ ಎಐಸಿಸಿ ಘರ್​​ ಘರ್​ ಗ್ಯಾರಂಟಿ ಘೋಷದೊಂದಿಗೆ ಪ್ರಣಾಳಿಕೆ ರಿಲೀಸ್​ ಮಾಡಲಾಗಿದೆ.

AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ,ರಾಹುಲ್​ ಗಾಂಧಿ ಸೇರಿದಂತೆ ಹಲವರಿಂದ ಕಾಂಗ್ರೆಸ್​ ಪಕ್ಷವು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಲೋಕಸಭೆ ಚುನಾವಣೆಯ ರಣಕಹಳೆ ಮೊಳಗುತ್ತಿದ್ದಂತೆಯೇ ಎಲ್ಲ ಪಕ್ಷಗಳು ಜನತೆಗೆ ಭರವಸೆಗಳ ಸರಮಾಲೆಯನ್ನೇ ನೀಡಲಾರಂಭಿಸಿವೆ. ಕಾಂಗ್ರೆಸ್ ಕೂಡ ಚುನಾವಣಾ ರ್ಯಾಲಿಗಳಲ್ಲಿ ಜನರಿಗೆ ಹಲವು ಭರವಸೆಗಳನ್ನು ನೀಡಿದೆ.

ಪ್ರಣಾಳಿಕೆಯಲ್ಲಿ ಏನಿದೆ?

  • ಉದ್ಯೋಗ ಖಾತ್ರಿಯಡಿ ಯುವಕ-ಯುವತಿಗೆ 1 ಲಕ್ಷ ಶಿಷ್ಯ ವೇತನ
  • ನೇಮಕಾತಿ ಖಾತ್ರಿಯಡಿ 30 ಲಕ್ಷ ಸರ್ಕಾರಿ ಉದ್ಯೋಗಗಳ ಭರ್ತಿ
  • ಮಹಾಲಕ್ಷ್ಮೀ ಹೆಸರಲ್ಲಿ ಮಹಿಳೆಯರಿಗೆ ವಾರ್ಷಿಕ 1ಲಕ್ಷ ಧನಸಹಾಯ
  • ಉದ್ಯೋಗದಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ
  • ರೈತರ ಬೆಳೆಗೆ ಬೆಂಬಲ ಬೆಲೆ, ಸಾಲಮನ್ನಾಗೆ ಖಾಯಂ ಆಯೋಗ
  • ಬೆಳೆ ನಷ್ಟವಾದ 30 ದಿನಗಳೊಳಗೆ ರೈತರ ಖಾತೆಗೆ ಪರಿಹಾರ
  • ಮನ್​ರೇಗಾ ಯೋಜನೆ ಕಾರ್ಮಿಕರಿಗೆ ₹400 ದಿನಗೂಲಿ ಗ್ಯಾರಂಟಿ
  • ₹25 ಲಕ್ಷ ಆರೋಗ್ಯ ವಿಮೆ ಜೊತೆ ಉಚಿತ ಚಿಕಿತ್ಸೆ ಗ್ಯಾರಂಟಿ
  • ಮನ್​ರೇಗಾ ಯೋಜನೆಗಳು ನಗರಗಳಿಗೂ ವಿಸ್ತರಣೆ

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ‘ಯುವ ನ್ಯಾಯ’, ‘ನಾರಿ ನ್ಯಾಯ’, ‘ಕಿಸಾನ್ ನ್ಯಾಯ’, ‘ಶ್ರಮಿಕ್ ನ್ಯಾಯ’ ಮತ್ತು ‘ಹಿಸ್ಸೆದಾರಿ ನ್ಯಾಯ’ ಹಾಗೂ ಖಾತರಿಗಳು ಸೇರಿದಂತೆ ಪಂಚ ನ್ಯಾಯ ಅಥವಾ ನ್ಯಾಯದ ಐದು ಸ್ತಂಭಗಳಿಗೆ ಒತ್ತು ನೀಡಿದೆ.

RELATED ARTICLES

Related Articles

TRENDING ARTICLES