Sunday, May 5, 2024

ಬೇಸಿಗೆಗೆ ಇರಲಿ ಆರೋಗ್ಯದ ಕಾಳಜಿ

ಬೆಂಗಳೂರು: ಬೇಸಿಗೆ ಕಾಲ ಪ್ರಾರಂಭವಾಗುತ್ತಿದ್ದಂತೆ ಮಕ್ಕಳಿಂದ ಇಡಿದ್ದು,ಎಲ್ಲಾ ವಯೋಮಾನದವರಿಗೂ ಬಾಧಿಸುವ ಸಾಂಕ್ರಾಮಿಕ ರೋಗಗಳು  ಅತಿ ಹೆಚ್ಚಾಗಿ ಕಾಡುತ್ತಲೇ ಇವೆ.ನಮ್ಮ ದೇಹದ ಬಗ್ಗೆ  ಸೂಕ್ತ ಕಾಳಜಿ ವಹಿಸುವುದು ಮುಖ್ಯವಾಹುತ್ತದೆ.

ವಾತಾವರಣ ಅತಿ ಶುಷ್ಕತೆಯಿಂದ ಕೂಡಿರುವುದರಿಂದ ಬ್ಯಾಕ್ಟಿರಿಯಾ, ವೈರಸ್‌ಗಳು ತೀವ್ರವಾಗಿ ಹರಡುತ್ತವೆ. ಕಾಲರಾ, ಟೈಫಾಯ್ಡ್ ಜ್ವರಗಳು, ಸಮಸ್ಯೆಗಳು ಹೆಚ್ಚಾಗಿ ಬೇಸಿಗೆ ಕಾಲದಲ್ಲಿ ಕಾಡುತ್ತದೆ ಇದರಿಂದ ನಾವು ಬಜಾವ್ ಆಗಲು ಈ ಟಿಪ್ಸ್​ನ್ನು ಅನುಸರಿಸಿ.

ಬೇಸಿಗೆಯಲ್ಲಿ ನಿಮ್ಮ ಆರೋಗ್ಯದ ಕಾಳಜಿ ಹೀಗಿರಲಿ

  • ಬೇಸಿಗೆಯಲ್ಲಿ ದಿನಕ್ಕೆ ಕನಿಷ್ಠ 2 ಲೀಟರ್ ನೀರು ಸೇವಿಸಿದರೆ ಉತ್ತಮ.
  • ತರಕಾರಿ, ಹಣ್ಣಿನ ರಸ, ಪಾನೀಯ ಸೇವನೆಯನ್ನು ಮಾಡಿ.
  • ನಿಂಬೆಹಣ್ಣಿನ ಜ್ಯೂಸ್, ಎಳನೀರು, ಬೆಲ್ಲ ಮಿಶ್ರಿತ ನೀರು ಸೇವನೆ ಸೂಕ್ತ.
  • ಆರೆಂಜ್, ಕಲ್ಲಂಗಡಿ, ಸೌತೆಕಾಯಿ ಸೇವನೆ ಉತ್ತಮ.
  • ದಿನಕ್ಕೆ 2 ಬಾರಿ ಸ್ನಾನ ಮಾಡುವುದರಿಂದ ದೂಳಿನಿಂದ ಬರುವ ಚರ್ಮದ ಸಮಸ್ಯೆಗಳನ್ನು ತಡೆಯಬಹುದು
  • ಉರಿಬಿಸಿಲಲ್ಲಿ ಮನಸ್ಸು ಮತ್ತು ದೇಹಕ್ಕೆ ಹಿತ ನೀಡುವಂತಹ ಹಗುರವಾದ ಕಾಟನ್ ಉಡುಪು ಧರಿಸಬಹುದು ಉತ್ತಮ.
  • ಸಕ್ಕರೆ ಕಾಯಿಲೆ ಪೀಡಿತರು ಮಜ್ಜಿಗೆ, ನೀರು, ಗಂಜಿ ಕುಡಿಯುವುದು ಒಳ್ಳೆಯದು.
  • ಸಮತೋಲಿತ ಪೌಷ್ಟಿಕ ಆಹಾರ ಸೇವಿಸಿ. ಕಾಯಿಸಿ, ಆರಿಸಿದ ನೀರನ್ನೇ ಸೇವಿಸಿ. ಬೇಸಿಗೆಯಲ್ಲಿ ಹೊರಗಡೆಯ ಜಂಕ್ ಫುಡ್ ತಿಂದರೆ ಫುಡ್ ಪಾಯಿಸನ್ ಆಗಬಹುದು.
  • ಮಸಾಲೆ ಪದಾರ್ಥಗಳು, ಮಾಂಸಾಹಾರ ಹಾಗೂ ಎಣ್ಣೆ ಪದಾರ್ಥಗಳಿಂದ ದೂರವಿರಿ.

 

RELATED ARTICLES

Related Articles

TRENDING ARTICLES