Thursday, May 9, 2024

ಮಂಡ್ಯ ಲೋಕಸಭಾ ಚುನಾವಣೆಯಿಂದ ಹಿಂದೆ ಸರಿದ ಸಂಸದೆ ಸುಮಲತಾ ಅಂಬರೀಶ್​

ಮಂಡ್ಯ : ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ಮೈತ್ರಿ ಅಭ್ಯರ್ಥಿ ಹೆಚ್​,ಡಿ ಕುಮಾರಸ್ವಾಮಿಯವರ ಸ್ಪರ್ಧೆಗೆ ಅವರ ಹೆಸರನ್ನು ಹೇಳದೆಯೇ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರು ಬೆಂಬಲ ಸೂಚಿಸಿದ್ದಾರೆ.

ಮಂಡ್ಯದಲ್ಲಿ ತಮ್ಮ ಮಂದಿನ ನಿರ್ಧಾರವನ್ನು ಏ.3 ಕ್ಕೆ ಪ್ರಕಟಿಸುವುದಾಗಿ ಹೇಳಿ ರಾಜಕೀಯ ಸಂಚಲವನ್ನು ಸೃಷ್ಟಿಸಿದ್ದಾ ಸುಮಲತಾ ಅವರು,  ಇಂದು ಮಂಡ್ಯದ ಕಾಳಿಕಾಂಬ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು. ಬಿಜೆಪಿ ಪಕ್ಷದಿಂದ ನನಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅವಕಾಶಗಳನ್ನು ನೀಡಿದ್ದವು, ಆದರೇ, ನಾನು ನಿಂತ್ರು, ಗದ್ರು, ಸೋತ್ರು ಅದು ಮಂಡ್ಯದಿಂದ ಮಾತ್ರ ಎನ್ನುವ ನಿರ್ಧಾರವನ್ನು ಸ್ಪಷ್ಟಪಡಿಸಿದರು..

ಇದನ್ನೂ ಓದಿ: ಮಂಡ್ಯ ಲೋಕಸಭಾ ಚುನಾವಣೆ : ಸುಮಲತಾ ನಿರ್ಧಾರ ಪ್ರಕಟಣೆಗೆ ಕ್ಷಣಗಣನೆ

ನಾನು ಸ್ವಾರ್ಥ ರಾಜಕಾರಣ ಮಾಡಲು ಬಂದಿಲ್ಲ, ನನಗೆ ಗೌರವವಿಲ್ಲದ ಕಡೆ ನಾನು ಹೋಗೋದಿಲ್ಲ ಆದರೇ, ಒಬ್ಬ ದೇಶದ ಪ್ರಧಾನಿ ನನ್ನನ್ನು ಕರೆದು ದುಡಿಕಿನ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಎಂದು ಹೇಳಿದ್ದಾರೆ ಅಲ್ಲಿ ನನಗೆ ಗೌರವ ಸಿಕ್ಕಿದೆ, ನನ್ನ ಜಿಲ್ಲೆಗಾಗಿ ಕೇಂದ್ರ ಸರ್ಕಾರ ಇದುವರೆಗೆ ಸುಮಾರು ನಾಲ್ಕು ಸಾವಿರ ಕೋಟಿಗಳಷ್ಟು ಅನುದಾನವನ್ನು ನೀಡಿದೆ. ಇದರಿಂದಾಗಿ ಅಭಿವೃದ್ದಿ ಮಾಡಲು ಸಾಧ್ಯವಾಗಿದೆ.

ಇದೀಗ ಮತ್ತೊಂದು ಸವಾಲು ನನ್ನ ಮುಂದಿದೆ, ಕಳೆದ 2019 ರ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ ಆಗ ಜನತೆಯ  ಅಭೂತಪೂರ್ವ ಬೆಂಬಲದಿಂದ ಜಯಶಾಲಿಯಾದೆ, ಆದರೇ, ಇದೀಗ ನನ್ನ ಮುಂದೆ ದೊಡ್ಡ ಸವಾಲಿದೆ. ಜಿಲ್ಲೆಯ ಅಭಿವೃದ್ದಿಗಾಗಿ ನಾನು ಈಗಾಗಲೇ ಸಾಕಷ್ಟು ಕೆಲಸ ಮಾಡಿದ್ದೇನೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ದಿಗಾಗಿ ನಾನು ಬಿಜೆಪಿ ಬೆಂಬಲ ನೀಡುತ್ತಿದ್ದೇನೆ ಎಂದರು.

ಇದೇ ಶನಿವಾರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ ಎಂದು ಅವರು ವೇದಿಕೆಯಲ್ಲಿ ಸ್ಪಷ್ಟಪಡಿಸಿದ್ದೇನೆ ಎಮದು ಹೇಳಿದರು.

 

RELATED ARTICLES

Related Articles

TRENDING ARTICLES