Sunday, May 5, 2024

Belagavi Election Survey by Powertv : ಬೆಳಗಾವಿ ಕ್ಷೇತ್ರದ ಮೆಗಾ ಸಮೀಕ್ಷೆ..!

ಲೋಕಸಭಾ ಚುನಾವಣೆ ಹಿನ್ನೆಲೆ ನಿಮ್ಮ ಪವರ್ ಟಿವಿ ರಾಜ್ಯದ 28 ಕ್ಷೇತ್ರಗಳಲ್ಲಿನ ಜನರಿಗಾಗಿ ಅವರ ನೆಚ್ಚಿನ ಪಕ್ಷ ಅಥವ ಅಭ್ಯರ್ಥಿಯ ಪರ ತಮ್ಮ ತಮ್ಮ ಅಭಿಪ್ರಾಯವನ್ನು ತಿಳಿಸಲು ಕಾಲ್ ಮಾಡಿ ಓಟ್​ ಮಾಡಿ ಎಂಬ ವಿಶೇಷ ಕಾರ್ಯಕ್ರಮದ ಮೂಲಕ ಸಮೀಕ್ಷೆಯನ್ನು ನಡೆಸುತ್ತಿದ್ದು ಈ ಕಾರ್ಯಕ್ರಮಕ್ಕೆ ಅಭೂತ ಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಹಮ್ಮಿಕೊಳ್ಳಲಾಗಿದ್ದ ‘ಕಾಲ್​ ಮಾಡಿ ಓಟ್ ಮಾಡಿ’ ಕಾರ್ಯಕ್ರಮದಲ್ಲಿ  ಮಧ್ಯಾಹ್ನ 1.30 ರಿಂದ ಸಂಜೆ 5.30ರ ವರೆಗೆ ನಡೆದ ಸಮೀಕ್ಷೆಯಲ್ಲಿ ಸಾವಿರಾರು ಕರೆಗಳನ್ನು ಮಾಡುವ ಮೂಲಕ ಮತದಾರರು ಪಾಲ್ಗೊಂಡರು.

ಬೆಳಗಾವಿ ಲೋಕಸಭಾ ಕ್ಷೇತ್ರದ ಪರಿಚಯ :

 ಬೆಳಗಾವಿ ಲೋಕಸಭಾ ಕ್ಷೇತ್ರ

ಹಾಲಿ ಸಂಸದೆ: ಮಂಗಳಾ ಅಂಗಡಿ

ಬಿಜೆಪಿ ಅಭ್ಯರ್ಥಿ : ಬಿಜೆಪಿ :  ಜಗದೀಶ್ ಶೆಟ್ಟರ್ (2024)

ಕಾಂಗ್ರೆಸ್ ಅಭ್ಯರ್ಥಿ :  ಕಾಂಗ್ರೆಸ್ :  ಮೃಣಾಲ್ ಹೆಬ್ಬಾಳ್ಕರ್ (ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ) (2024)

============================

2019 ಬಲಾಬಲ :

ಸುರೇಶ್ ಅಂಗಡಿ         ಬಿಜೆಪಿ          7,61,991          ಶೇ. 63.22

ವಿ.ಎಸ್.ಸಾಧುನವರ     ಕಾಂಗ್ರೆಸ್         3,70,687          ಶೇ. 30.76

ಗಣೇಶ್ ದಿಡ್ಡೀಕರ್         ಪಕ್ಷೇತರ         8,151   ಶೇ. 0.68

============================

2021 ಉಪ ಸಮರ ಬಲಾಬಲ :

ಮಂಗಳಾ ಅಂಗಡಿ :   ಬಿಜೆಪಿ : 4,40,327 : ಶೇ. 43.07

ಸತೀಶ್ ಜಾರಕಿಹೊಳಿ : ಕಾಂಗ್ರೆಸ್  : 3,70,687 : ಶೇ. 42.56

ಶುಭಂ ವಿಕ್ರಾಂತ್ ಶೆಲ್ಕೆ : ಎಂಇಎಸ್ : 1,17,174 : ಶೇ. 11.46

ಮತದಾರರು :

ಪುರುಷರು      : 9,48,282

ಮಹಿಳೆಯರು : 9,55,725

ಒಟ್ಟು ಮತದಾರರು :19,04,099

( ಇತರೆ 92 )

===============================

ಜಾತಿ ಲೆಕ್ಕಾಚಾರ :

ಲಿಂಗಾಯತ :  5.5 ಲಕ್ಷ

ಎಸ್ಸಿ- ಎಸ್ಟಿ : 2.83 ಲಕ್ಷ

ಮರಾಠ :         2.66 ಲಕ್ಷ

ಮುಸ್ಲಿಂ :         2.20 ಲಕ್ಷ

ಕುರುಬ :          1.90 ಲಕ್ಷ

ಉಪ್ಪಾರ :       80 ಸಾವಿರ

ಬ್ರಾಹ್ಮಣ :       60 ಸಾವಿರ

ಲಂಬಾಣಿ :      45 ಸಾವಿರ

ಜೈನ್   :          44 ಸಾವಿರ

ಒಟ್ಟು ಮತದಾರರು   19,04,099

==============================

ಬಿಜೆಪಿ  ಪ್ಲಸ್ :

ಬಿಜೆಪಿ ಭದ್ರಕೋಟೆ ಗಡಿನಾಡಲ್ಲಿ ಬಿಜೆಪಿ ಪರ ಮರಾಠಾ ಮತ​ ಬ್ಯಾಂಕ್​

ಮೋದಿ ಹವಾ, ಬಿಎಸ್​ವೈ ವರ್ಚಸ್ಸು, ಸ್ಥಳೀಯ ಪ್ರಬಲ ನಾಯಕತ್ವ

ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಸ್ಪರ್ಧೆಯಿಂದ ಅಖಾಡಕ್ಕೆ ಹೊಸ ರಂಗು

ಲಿಂಗಾಯತರ ಜೊತೆ ಮರಾಠ ಮತಗಳು, ಹಿಂದುತ್ವದ ನೆಲೆಗಟ್ಟು

ವಂಟಮೂರಿ ಪ್ರಕರಣದಲ್ಲಿ ಸರ್ಕಾರದ ವೈಫಲ್ಯ, ಗ್ಯಾರಂಟಿ ಸಮಸ್ಯೆ

==========================

ಬಿಜೆಪಿ ಮೈನಸ್ :

ಜಗದೀಶ್​ ಶೆಟ್ಟರ್​ಗೆ ಟಿಕೆಟ್​ ಹಿನ್ನೆಲೆ ಸ್ಥಳೀಯ ನಾಯಕರ ಅಸಮಾಧಾನ

ಬಿಜೆಪಿ ಮುಖಂಡರಲ್ಲಿ ಹೆಚ್ಚಾಗಿರುವ ಬಣ ರಾಜಕೀಯ ಗೊಂದಲ

ಲಿಂಗಾಯತ, ಮರಾಠ ಮತಗಳ ವಿಭಜನೆಯ ಆತಂಕ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಣಾಮ

===========================

ಕಾಂಗ್ರೆಸ್ ಪ್ಲಸ್  :

ಲಿಂಗಾಯತರ ಓಲೈಕೆಯಲ್ಲಿ ಬಹುತೇಕ ಯಶಸ್ವಿ ಆಗಿದ್ದು

ಬಿಜೆಪಿ ಭದ್ರ ಕೋಟೆ ಬೇಧಿಸಿ ವಿಧಾನಸಭೆ ಗೆಲುವಿನ ವಿಶ್ವಾಸ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಸಮರ್ಪಕ ಜಾರಿ

ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ, ಲಕ್ಷ್ಮಣ ಸವದಿ ಬಲ

=========================

ಕಾಂಗ್ರೆಸ್ ಮೈನಸ್  :

ಮೃಣಾಲ್​ ಹೆಬ್ಬಾಳ್ಕರ್​ ವೈಯಕ್ತಿಕವಾಗಿ ರಾಜಕೀಯ ವರ್ಚಸ್ಸು ಇಲ್ಲ

ಮೃಣಾಲ್​ಗೆ ಟಿಕೆಟ್​ ಹಿನ್ನೆಲೆ ಸ್ಥಳೀಯ ಹಿರಿಯ ನಾಯಕ ಬೇಸರ

ಗ್ಯಾರಂಟಿ ನೆಪದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಇಲ್ಲ

ಮೋದಿ ಅಲೆ, 20 ವರ್ಷಗಳಿಂದ ಲೋಕ ಸಮರದಲ್ಲಿ ಹಿನ್ನಡೆ

ಪವರ್ ಟಿವಿ ಸರ್ವೆ ರಿಸಲ್ಟ್​ :

ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಾಲ್ ಮಾಡಿ ವೋಟ್ ಮಾಡಿ ಸಮೀಕ್ಷೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬೆಳಗಾವಿಯಲ್ಲಿ ಯಾವ ಪಕ್ಷಕ್ಕೆ ಹೆಚ್ಚು ವೋಟ್ ಬಿದ್ದಿದೆ?   ಕಮಲದ ನಾಗಾಲೋಟಕ್ಕೆ ಬ್ರೇಕ್ ಹಾಕುತ್ತಾ ಕಾಂಗ್ರೆಸ್​ ಪಕ್ಷ? ಮಾಜಿ ಸಿಎಂ ರನ್ನು ಮಣಿಸುತ್ತಾರಾ ಯುವ ಮುಖಂಡ ಮೃಣಾಲ್​​? ಅನುಭವಿ ಜಗದೀಶ್ ಶೆಟ್ಟರ್​​ಗೆ ಮಣೆ ಹಾಕ್ತಾರಾ ಬೆಳಗಾವಿ ಜನತೆ? ಎಲ್ಲದಕ್ಕೂ ಇಲ್ಲಿದೆ ಉತ್ತರ.

ಬೆಳಗಾವಿ ಅಸೆಂಬ್ಲಿ ಕ್ಷೇತ್ರದಿಂದ ಒಟ್ಟು ಕರೆಗಳು – 7455

ಪುರುಷ ಮತದಾರರಿಂದ 6803, ಮಹಿಳಾ ಮತದಾರರಿಂದ 652 ಕರೆಗಳು

ಬಿಜೆಪಿಗೆ ಅಭ್ಯರ್ಥಿಗೆ ಮತಗಳು – 3733, ಕಾಂಗ್ರೆಸ್ ಅಭ್ಯರ್ಥಿಗೆ ವೋಟ್ಸ್​ – 3722

ಬೆಳಗಾವಿ ಕ್ಷೇತ್ರದಿಂದ ಇತರರಿಗೆ ಬಂದ ಮತಗಳು – 0

ಬಿಜೆಪಿಗೆ ಬಂದ ಶೇಕಡಾವಾರು ಮತಗಳು – 50%

ಕಾಂಗ್ರೆಸ್ ಪಕ್ಷಕ್ಕೆ ಬಂದ ಶೇಕಡಾವಾರು ಮತಗಳು – 50%

ಇತರರಿಗೆ ಬಂದ ಶೇಕಡಾವಾರು ಮತಗಳು – 0

ಕಾಂಗ್ರೆಸ್ ವಿರುದ್ಧ ಬಿಜೆಪಿ​​ಗೆ 11 ಮತಗಳ ಮುನ್ನಡೆ

ಸದ್ಯದ ಟ್ರೆಂಡ್​ :

​​ಬೆಳಗಾವಿ ಲೋಕಸಭಾ ಫೈಟ್​ನಲ್ಲಿ ಬಿಜೆಪಿಯತ್ತ ಜನರ ಒಲವು

ಬಿಜೆಪಿ-ಕಾಂಗ್ರೆಸ್​ ನಡುವಿನ ಫೈಟ್​​​ನಲ್ಲಿ ಬಿಜೆಪಿಗೆ ಮುನ್ನಡೆ

ಮೊದಲ ಬಾರಿ ಸಂಸದರಾಗುವತ್ತ ಜಗದೀಶ್ ಶೆಟ್ಟರ್​​ ದಾಪುಗಾಲು

ಬೆಳಗಾವಿ ಕ್ಷೇತ್ರವನ್ನ ಬಿಜೆಪಿಯೇ ಉಳಿಸಿಕೊಳ್ಳುವ ಮುನ್ಸೂಚನೆ

ಇದು ಪವರ್ ಸರ್ವೆಯಲ್ಲಿ ಬೆಳಗಾವಿ ಮತದಾರರು ನೀಡಿರುವ ಸಂದೇಶ

RELATED ARTICLES

Related Articles

TRENDING ARTICLES