ಲೋಕಸಭಾ ಚುನಾವಣೆ ಹಿನ್ನೆಲೆ ನಿಮ್ಮ ಪವರ್ ಟಿವಿ ರಾಜ್ಯದ 28 ಕ್ಷೇತ್ರಗಳಲ್ಲಿನ ಜನರಿಗಾಗಿ ಅವರ ನೆಚ್ಚಿನ ಪಕ್ಷ ಅಥವ ಅಭ್ಯರ್ಥಿಯ ಪರ ತಮ್ಮ ತಮ್ಮ ಅಭಿಪ್ರಾಯವನ್ನು ತಿಳಿಸಲು ಕಾಲ್ ಮಾಡಿ ಓಟ್ ಮಾಡಿ ಎಂಬ ವಿಶೇಷ ಕಾರ್ಯಕ್ರಮದ ಮೂಲಕ ಸಮೀಕ್ಷೆಯನ್ನು ನಡೆಸುತ್ತಿದ್ದು ಈ ಕಾರ್ಯಕ್ರಮಕ್ಕೆ ಅಭೂತ ಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಹಮ್ಮಿಕೊಳ್ಳಲಾಗಿದ್ದ ‘ಕಾಲ್ ಮಾಡಿ ಓಟ್ ಮಾಡಿ’ ಕಾರ್ಯಕ್ರಮದಲ್ಲಿ ಬೆಳಗ್ಗೆ 9.30 ರಿಂದ ಮಧ್ಯಾಹ್ನ 1.30ರ ವರೆಗೆ ನಡೆದ ಸಮೀಕ್ಷೆಯಲ್ಲಿ ಸಾವಿರಾರು ಕರೆಗಳನ್ನು ಮಾಡುವ ಮೂಲಕ ಮತದಾರರು ಪಾಲ್ಗೊಂಡರು.
ಲೋಕಸಭಾ ಕ್ಷೇತ್ರ: ಬಳ್ಳಾರಿ
ಹಾಲಿ ಸಂಸದ: ದೇವೇಂದ್ರಪ್ಪ
===================================
2024ರಲ್ಲಿ ಬಿಜೆಪಿ ಟಿಕೆಟ್ : ಬಿಜೆಪಿ : ಶ್ರೀರಾಮುಲು (ಮಾಜಿ ಸಚಿವ)
2024ರಲ್ಲಿ ಕಾಂಗ್ರೆಸ್ ಟಿಕೆಟ್ : ಕಾಂಗ್ರೆಸ್ : ಇ. ತುಕಾರಾಂ
==================================
2019ರ ಬಲಾಬಲ :
ದೇವೇಂದ್ರಪ್ಪ : ಬಿಜೆಪಿ : 6,01,388 :ಶೇ. 49.22
ವಿ.ಎಸ್.ಉಗ್ರಪ್ಪ : ಕಾಂಗ್ರೆಸ್ : 5,75,681 : ಶೇ. 47.09
ಕೆ.ಗೂಳಪ್ಪ : ಬಿಎಸ್ಪಿ : 9,961 : ಶೇ. 00.82
ಚಲಾವಣೆಯಾದ ಒಟ್ಟು ಮತಗಳು : 12,21,985 : ಶೇ. 69.76
ಗೆಲುವಿನ ಅಂತರ : 25,707 : ಶೇ. 02.04
=====================================
ಮತದಾರರ ವಿವಿರ :
ಪುರುಷರು : 9,20,129
ಮಹಿಳೆಯರು : 9,45,191
ಒಟ್ಟು ಮತದಾರರು : 18,65,586
( ಇತರೆ 266 )
=================================
ಜಾತಿವಾರು ಲೆಕ್ಕಾಚಾರ :
ಲಿಂಗಾಯತರು : 3,50,000
ಪರಿಶಿಷ್ಟ ಜಾತಿ : 3,00,000
ಪರಿಶಿಷ್ಟ ಪಂಗಡ : 3,50,000
ಕುರುಬರು : 2,85,000
ಮುಸ್ಲಿಂ : 2,05,000
ಇತರೆ : 4,00,000 (ಬಲಿಜ /ಯಾದವ /ಗಂಗಾಮತಸ್ಥ/ ರೆಡ್ಡಿ/ ಕಮ್ಮಾರ/ ವೈಶ್ಯರ/ )
=================================
ಬಿಜೆಪಿ ಪ್ಲಸ್:
ಪ್ರಭಾವಿ ನಾಯಕ ಶ್ರೀರಾಮುಲು ಬಿಜೆಪಿ ಅಭ್ಯರ್ಥಿ ಆಗಿರುವುದು
ಜನಾರ್ದನ ರೆಡ್ಡಿ ಬಿಜೆಪಿ ವಾಪಸ್ ಆಗಿದ್ದು ಶ್ರೀರಾಮುಲುಗೆ ಆನೆಬಲ
ಪ್ರಧಾನಿ ನರೇಂದ್ರ ಮೋದಿ ಹವಾ, ಹಿಂದೂತ್ವದ ಒಗ್ಗಟ್ಟು
ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಆಗಿರುವುದು ಪ್ಲಸ್ ಪಾಯಿಂಟ್
ಕಾಂಗ್ರೆಸ್ ಹೋಲಿಸಿದ್ರೆ ಬಿಜೆಪಿಯಲ್ಲಿ ಗುಂಪುಗಾರಿಕೆ, ಗೊಂದಲ ಇಲ್ಲ
==========================
ಬಿಜೆಪಿ ಮೈನಸ್ :
ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿಯ ಕೇವಲ ಒಬ್ಬ ಶಾಸಕ ಮಾತ್ರ ಜಯ
ಸಂಸದರಿಂದ ಯಾವುದೇ ಹೇಳಿಕೊಳ್ಳುವ ಕೆಲಸ, ಯೋಜನೆ ಇಲ್ಲ
ಅಸೆಂಬ್ಲಿ ಸೋಲಿನಿಂದ ಪಕ್ಷದ ಕಾರ್ಯಕರ್ತರಲ್ಲಿ ಕುಂದಿದ ಹುಮ್ಮಸ್ಸು
=====================================
ಕಾಂಗ್ರೆಸ್ ಪ್ಲಸ್ :
ಸತತ 4 ಬಾರಿ ಗೆದ್ದಿರುವ ಸಂಡೂರು ಶಾಸಕ ಇ.ತುಕಾರಾಂ ಸ್ಪರ್ಧೆ
ವಿಧಾನಸಭೆ ಎಲೆಕ್ಷನ್ ವೇಳೆ ಕಾಂಗ್ರೆಸ್ ಭರ್ಜರಿ ಜಯಭೇರಿ
ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡಿದ್ದು
ಅಲ್ಪಸಂಖ್ಯಾತ, ಅಹಿಂದ ಮತಬ್ಯಾಂಕ್ ಗಟ್ಟಿಯಾಗಿರುವುದು
ಬಿಜೆಪಿ ಸಂಸದರ ನಿಷ್ಕ್ರಿಯತೆ ಬಗ್ಗೆ ಜನರಲ್ಲಿನ ಅಸಮಾಧಾನ
=========================
ಕಾಂಗ್ರೆಸ್ ಮೈನಸ್ :
ಗ್ಯಾರಂಟಿಗಳ ಅಬ್ಬರದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತ
ಬಿಜೆಪಿಯಂತೆ ಕಾರ್ಯಕರ್ತರ ಪಡೆಯ ಸಂಘಟನೆ ಇಲ್ಲ
ಸಂಡೂರಲ್ಲಿ 4 ಬಾರಿ ಗೆದ್ದಿದ್ರೂ ಲೋಕ ಕ್ಷೇತ್ರದೆಲ್ಲೆಡೆ ಪರಿಚಯ ಇಲ್ಲ
ಪವರ್ ಟಿವಿ ಸರ್ವೆ ರಿಸಲ್ಟ್ :
ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಕಾಲ್ ಮಾಡಿ ವೋಟ್ ಮಾಡಿ ಸಮೀಕ್ಷೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಳ್ಳಾರಿಯಲ್ಲಿ ಯಾವ ಪಕ್ಷಕ್ಕೆ ಹೆಚ್ಚು ವೋಟ್ ಬಿದ್ದಿದೆ? ಈ ಬಾರಿ ಕಮಲದ ಓಟಕ್ಕೆ ಬ್ರೇಕ್ ಹಾಕುತ್ತಾ ಕಾಂಗ್ರೆಸ್ ಪಕ್ಷ? ಶ್ರೀರಾಮುಲುಗೆ ಸೋಲುಣಿಸುತ್ತಾರಾ ಇ.ತುಕಾರಾಂ? ಗೆಲುವಿನ ಪತಾಕೆ ಹಾರಿಸುತ್ತಾರಾ ಶ್ರೀರಾಮುಲು? ಇವೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಬಳ್ಳಾರಿ ಅಸೆಂಬ್ಲಿ ಕ್ಷೇತ್ರದಿಂದ ಒಟ್ಟು ಕರೆಗಳು – 7365
ಪುರುಷ ಮತದಾರರಿಂದ 6730, ಮಹಿಳಾ ಮತದಾರರಿಂದ 635 ಕರೆಗಳು
ಬಿಜೆಪಿಗೆ ಅಭ್ಯರ್ಥಿಗೆ ಮತಗಳು – 3916, ಕಾಂಗ್ರೆಸ್ ಅಭ್ಯರ್ಥಿಗೆ ವೋಟ್ಸ್ – 3449
ಬಳ್ಳಾರಿ ಕ್ಷೇತ್ರದಿಂದ ಇತರರಿಗೆ ಬಂದ ಮತಗಳು – 0
ಬಿಜೆಪಿಗೆ ಬಂದ ಶೇಕಡಾವಾರು ಮತಗಳು – 53%
ಕಾಂಗ್ರೆಸ್ ಪಕ್ಷಕ್ಕೆ ಬಂದ ಶೇಕಡಾವಾರು ಮತಗಳು – 47%
ಇತರರಿಗೆ ಬಂದ ಶೇಕಡಾವಾರು ಮತಗಳು – 0
ಕಾಂಗ್ರೆಸ್ ವಿರುದ್ಧ ಬಿಜೆಪಿಗೆ 467 ಮತಗಳ ಮುನ್ನಡೆ
===================================
ಸದ್ಯದ ಟ್ರೆಂಡ್ :
ಬಳ್ಳಾರಿ ಲೋಕಸಭಾ ಫೈಟ್ನಲ್ಲಿ ಬಿಜೆಪಿಯತ್ತ ಜನರ ಒಲವು
ಬಿಜೆಪಿ-ಕಾಂಗ್ರೆಸ್ ನಡುವಿನ ಫೈಟ್ನಲ್ಲಿ ಬಿಜೆಪಿಗೆ ಮುನ್ನಡೆ
ಎರಡನೇ ಬಾರಿ ಸಂಸದರಾಗುವತ್ತ ಶ್ರೀರಾಮುಲು ದಾಪುಗಾಲು
ಬಳ್ಳಾರಿ ಕ್ಷೇತ್ರವನ್ನ ಬಿಜೆಪಿಯೇ ಉಳಿಸಿಕೊಳ್ಳುವ ಮುನ್ಸೂಚನೆ
ಇದು ಪವರ್ ಟಿವಿ ಸರ್ವೆಯಲ್ಲಿ ಮತದಾರರು ನೀಡಿರುವ ಸಂದೇಶ.