Sunday, May 5, 2024

ಸಿಎಂ ಭೇಟಿಗೆ ಬಂದ ಪಾರ್ಲಿಮೆಂಟ್ ಸ್ಮೋಕ್ ಬಾಂಬ್ ಪ್ರಕರಣದ ಆರೋಪಿ ತಂದೆ: ಭೇಟಿಗೆ ಸಿಎಂ ನಕಾರ!

ಬೆಂಗಳೂರು : ಸಂಸತ್​ನಲ್ಲಿ ಸ್ಮೋಕ್​ ಬಾಂಬ್ ಸ್ಪೋಟಿಸಿದ್ದ ಪ್ರಕರದ ಪ್ರಮುಖ ಆರೋಪಿ ಮನೋರಂಜ್​ ತಂದೆ ಇಂದು ಸಿಎಂ ಸಿದ್ದರಾಮಯ್ಯ ಅವರು ಭೇಟಿ ಮಾಡಲು ಅವರ ನಿವಾಸದ ಬಳಿ ಆಗಮಿಸಿದ್ದರು, ಸಿಎಂ ಭೇಟಿಗೂ ಮುನ್ನವೆ ಅವರನ್ನು ಸಿಎಂ ಅಂಗರಕ್ಷಕರು ವಾಪಾಸ್​ ಕಳಿಸಿದ್ದಾರೆ.

ಸ್ಮೋಕ್​ ಬಾಂಬ್​ ನ ಪ್ರಮುಖ ಆರೋಪಿಯಾಗಿರುವ ಮನೋರಂಜ್​ ಅವರ ತಂದೆ ದೇವರಾಜಯ್ಯ ಅವರು ಇಂದು ತಮ್ಮ ಪುತ್ರನ ಪರವಾಗಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮಾತುಕತೆನಡೆಸಲು ಇಂದು ಬೆಂಗಳೂರಿನ ಸಿಎಂ ನಿವಾಸದ ಬಳಿ ಆಗಮಿಸಿದ್ದರು, ಸಿಎಂ ಭೆಟಿಗಾಗಿ ಸುಮಾರು ಅರ್ಧಗಂಟೆ ಕಾಂದು ನಿಂತಿದ್ದರು, ಬಳಿಕ ಸಿಎಂ ಅಂಗರಕ್ಷಕರು ಸಿಎಂ ಆಗಮಿಸುವುದಕ್ಕು ಮುನ್ನವೇ ದೇವರಾಜಯ್ಯ ಅವರನ್ನು ವಾಪಾಸ್​ ಕಳಿಸಿದ್ದಾರೆ.

ಇದನ್ನು ಓದಿ: ಅಮಿತ್​ ಶಾ ವಿರುದ್ದ ವಾಗ್ದಾಳಿ: ಸಿಎಂ ಪುತ್ರ ಯತೀಂದ್ರಗೆ ಚುನಾವಣಾಧಿಕಾರಿಳಿಂದ ನೋಟೀಸ್​

ಸಂಸತ್ತಿನಲ್ಲಿ ಅಂದು ನಡೆದದ್ದು ಏನು ?

2023ರ ಡಿ.13 ರಂದು ಬುಧವಾರ ಸಂಸತ್ ಕಲಾಪ ನಡೆಯುತ್ತಿರುವಾಗ ಮಧ್ಯಾಹ್ನ 1.15ರ ಸುಮಾರಿಗೆ ಲೋಕಸಭೆಯ ಪ್ರೇಕ್ಷಕರ ಗ್ಯಾಲರಿಯಿಂದ ವ್ಯಕ್ತಿಯೊಬ್ಬ ಜಿಗಿದಿದ್ದಾನೆ. ಸಭಾಧ್ಯಕ್ಷರತ್ತ ತೆರಳುತ್ತಿದ್ದ ಈ ವ್ಯಕ್ತಿ ಸಂಸದರ ಆಸನದ ಮೇಲಿಂದ ಜಿಗಿಯುತ್ತ ಹಾದು ಹೋಗುತ್ತಿದ್ದಂತೆಯೇ ಅಲ್ಲಿದ್ದ ಸಂಸದರು ಈ ವ್ಯಕ್ತಿಯನ್ನು ಹಿಡಿದಿದ್ದಾರೆ. ಬಳಿಕ ಸ್ಮೋಕ್​ ಬಾಂಬ್​ ಸಿಡಿಸಿದ್ದಾರೆ.

ಈ ದಾಳಿಗೆ ಯತ್ನಿಸಿದ ಪ್ರಮುಖ ಆರೋಪಿ ಮನೋರಂಜನ್​ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಹೆಸರಿನಲ್ಲಿ ಪಾಸ್​ ಪಡೆದು ಸಂಸತ್​ನ ಚಳಿಗಾಲದ ಅಧಿವೇಶನದ ಸಭಾಗಂಣದಲ್ಲಿನ ವೀಕ್ಷಕ ಗ್ಯಾಲರಿಯಲ್ಲಿ ಕೂತಿದ್ದರು, ಘಟನೆಯ ಹಿನ್ನೆಲೆ ಆರೋಪಿಗಳಾದ ವಿಕಾಸ್ ಶರ್ಮಾ, ನೀಲಂ ಹಾಗೂ ಅನಮೋಲ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ ) ಕಾಯ್ದೆಯಡಿ ಬರುವ ಭಯೋತ್ಪಾದನೆ ವಿರೋಧಿ ಕಾನೂನುಗಳಡಿ ಪ್ರಕರಣ ದಾಖಲಿಸಕಾಗಿದೆ.

ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 153 ( ಗಲಭೆಗೆ ಪ್ರಚೋದನೆ ), 120-ಬಿ (ಕ್ರಿಮಿನಲ್ ಸಂಚು), 452 (ಅತಿಕ್ರಮಣ), 186 (ಸಾರ್ವಜನಿಕ ಕಾರ್ಯಗಳನ್ನು ನಿರ್ವಹಿಸಲು ಸಾರ್ವಜನಿಕ ಉದ್ಯೋಗಿಗೆ ಅಡ್ಡಿಪಡಿಸುವುದು) ಹಾಗೂ ಭಯೋತ್ಪಾದನೆಯ ಕೃತ್ಯಗಳ ವಿರುದ್ಧದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ, ಸಂಸತ್‌ ಭವನ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES