Wednesday, May 8, 2024

ಡಾ.ಕೆ.ಸುಧಾಕರ್‌ 7.7 ಕೋಟಿ ರೂ. ಆಸ್ತಿಗೆ ಒಡೆಯ: 1.31 ಕೋಟಿ ರೂ. ಸಾಲ

ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌  ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಾಮಪತ್ರ ಸಲ್ಲಿಸಿದರು.ಈ ವೇಳೆ ಅವರು ತಮ್ಮ ಆಸ್ತಿ 7.7 ಕೋಟಿ ರೂ ಎಂದು ಘೋಷಣೆ ಮಾಡಿದ್ದರು.

ಇವರ ಚರಾಸ್ತಿ ಹಾಗೂ ಸ್ಥಿರಾಸ್ತಿ ಸೇರಿ ಒಟ್ಟು 7.7 ಕೋಟಿ ರೂ. ಮೌಲ್ಯದ ಆಸ್ತಿಯನ್ನುಇವರು ಹೊಂದಿದ್ದು,ಇವರಿಗಿಂತ ಇವರ ಪತ್ನಿ ಡಾ.ಪ್ರೀತಿ ಜಿ.ಎ. ಅವರೇ ಹೆಚ್ಚು ಶ್ರೀಮಂತರಾಗಿದ್ದಾರೆ.

ಮಾಜಿ ಶಾಸಕ ಡಾ.ಕೆ. ಸುಧಾಕರ್‌ ಅವರು 2.69 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. 2.63 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಸ್ವಯಾರ್ಜಿತವಾಗಿ ಗಳಿಸಿದ್ದಾರೆ.

ಇನ್ನು, 2.38 ಕೋಟಿ ರೂ. ಸ್ಥಿರಾಸ್ತಿಯು ಪಿತ್ರಾರ್ಜಿತವಾಗಿ ಲಭಿಸಿದೆ. ಎಲ್ಲವೂ ಸೇರಿ ಅವರು 7.7 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.

ಪತ್ನಿ ಡಾ.ಪ್ರೀತಿ ಜಿ.ಎ. ಸುಮಾರು 24 ಕೋಟಿ ಆಸ್ತಿ

ಆದರೆ, ಇವರ ಪತ್ನಿ ಡಾ.ಪ್ರೀತಿ ಜಿ.ಎ. ಅವರೇ ಸುಮಾರು 24 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.

ಸುಧಾಕರ್‌ ಅವರು 1.31 ಕೋಟಿ ರೂ. ಸಾಲ ಮಾಡಿದ್ದರೆ, ಅವರ ಪತ್ನಿಯು 19.03 ಕೋಟಿ ರೂ. ಸಾಲ ಹೊಂದಿದ್ದಾರೆ. ಸುಧಾಕರ್‌ ಅವರು ಪತ್ನಿ ಬಳಿಯೇ 40 ಲಕ್ಷ ರೂ. ಸಾಲ ಮಾಡಿದ್ದಾರೆ.

RELATED ARTICLES

Related Articles

TRENDING ARTICLES