Tuesday, April 30, 2024

ನಟ ದರ್ಶನ್ ಕೈಗೆ ಪೆಟ್ಟು : ನೆಲಮಂಗಲ ಆಸ್ಪತ್ರೆಗೆ ಭೇಟಿ ನೀಡಿದ್ದ ವಿಡಿಯೋ ವೈರಲ್

ಬೆಂಗಳೂರು : ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕೈಗೆ ಪೆಟ್ಟು ಆಗಿದ್ದು, ನೆಲಮಂಗಲ ಆಸ್ಪತ್ರೆಗೆ ಭೇಟಿ ನೀಡಿದ್ದ ವಿಡಿಯೋ ವೈರಲ್ ಆಗಿದೆ.

ಕಾಟೇರ ಸಿನಿಮಾ ಸಕ್ಸಸ್​ ಬಳಿಕ ನಟ ದರ್ಶನ್ ಡೆವಿಲ್ ದಿ ಹಿರೋ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಕೈಗೆ ಪೆಟ್ಟಾಗಿದೆ ಎಂದು ತಿಳಿದುಬಂದಿದೆ.

ಗುರುವಾರ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಡೆವಿಲ್ ಸಿನಿಮಾದ ಸಾಹಸ ದೃಶ್ಯದ ಶೂಟಿಂಗ್ ಮಾಡಲಾಗಿತ್ತು. ತೆಲುಗಿನ ಸಾಹಸ ನಿರ್ದೇಶಕರಾದ ರಾಮ್ ಹಾಗೂ ಲಕ್ಷ್ಮಣ್ ಅವರ ನೇತೃತ್ವದಲ್ಲಿ ಶೂಟಿಂಗ್ ನಡೆದಿತ್ತು.

ಈ ಸಂದರ್ಭದಲ್ಲಿ ನಟ ದರ್ಶನ್ ಅವರ ಕೈಗೆ ಪೆಟ್ಟಾಗಿದೆ ಎಂದು ಮೂಲಗಳಿಂದ ತಿಳಿದಿದೆ. ಘಟನೆ ಬಳಿಕ ಕೂಡಲೇ ಡಿ ಬಾಸ್ ಹತ್ತಿರದ ನೆಲಮಂಗಲ ಆಸ್ಪತ್ರೆಗೆ ಭೇಟಿ ನೀಡಿ, ಮರಳಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿ ಮರಳಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ನಟ ನೀನಾಸಂ ಸತೀಶ್ ನಟನೆಯ ಮ್ಯಾಟ್ನಿ ಚಿತ್ರದ ಟ್ರೈಲರ್ ಬಿಡಿಗಡೆ ಕಾರ್ಯಕ್ರಮಕ್ಕೆ ದರ್ಶನ್ ಬಂದಿದ್ದರು. ಈ ವೇಳೆ ಅವರ ಕೈಗೆ ಪೆಟ್ಟಾಗಿರುವುದು ಕಂಡುಬಂದಿತ್ತು.

ಡಿ ಬಾಸ್ ದರ್ಶನ್ ನಟನೆಯ ಕಾಟೇರ ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ದಾಖಲೆಯ ಗಳಿಕೆ ಮೂಲಕ ದರ್ಶನ್ ಮೊತ್ತೊಮ್ಮೆ ತಾವು ಬಾಕ್ಸ್​ ಆಫೀಸ್ ಸುಲ್ತಾನ್ ಎಂದು ಸಾಬೀತುಪಡಿಸಿದ್ದಾರೆ. ಇದೀಗ ಪ್ರಕಾಶ್ ವೀರ್ ಅವರ ನಿರ್ದೇಶನದ ಡೆವಿಲ್ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಇತ್ತೀಚೆಗೆ ದರ್ಶನ್ ಬರ್ತ್​ಡೇ ದಿನ ಈ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿತ್ತು.

RELATED ARTICLES

Related Articles

TRENDING ARTICLES