Saturday, April 27, 2024

ಮಂಡ್ಯ ಬಿಟ್ಟು ನಾನು ಎಲ್ಲೂ ಹೋಗಲ್ಲ,ಬೆಂಬಲಿಗರ ಅಭಿಪ್ರಾಯ ಕೇಳಿ ತಿರ್ಮಾನ ಮಾಡ್ತಿನಿ: ಸುಮಲತಾ

ಬೆಂಗಳೂರು: ಮಂಡ್ಯ ಬಿಟ್ಟು ನಾನು ಎಲ್ಲೂ ಹೋಗಲ್ಲ,ಬೆಂಬಲಿಗರ ಅಭಿಪ್ರಾಯ ಕೇಳಿ ತಿರ್ಮಾನ ಮಾಡ್ತಿನಿ ಎಂದು ಸಂಸದೆ ಸುಮಲತಾ ಅಂಬರೀಶ್​ ತಿಳಿಸಿದ್ದಾರೆ.  

ವಿಜಯೇಂದ್ರ ಭೇಟಿ ಬಳಿಕ ಮಾತನಾಡಿದ ಅವರು,ಪಕ್ಷಕ್ಕೆ ನೀವು ಸೇರ್ಪಡೆಯಾಗಬೇಕು ಅಂತ ಹೇಳಿದ್ದಾರೆ.ನಾಳೆ ಬೆಂಬಲಿಗರು ಬರ್ತಿದ್ದಾರೆ.ಅವರ ಅಭಿಪ್ರಾಯಗಳನ್ನು ಕೇಳಬೇಕಾದ ಕರ್ತವ್ಯವಿದೆ.ನಾನು ಕಾರ್ಯಕರ್ತರ ಹಾಗೂ ಮುಖಂಡರನ್ನು ಕೇಳಿ ಮಂಡ್ಯದಲ್ಲಿ ನಿಲುವುನ್ನು ತಿಳಿಸುತ್ತೇನೆ ಎಂದು ಹೇಳಿದ್ದರು.

ಬಿಜೆಪಿಗೆ ಸಪೋರ್ಟ್ ಅನ್ನೊದು ಒಂದು ಕಡೆ ಬೆಂಬಲಿಗರು ಏನು ಹೇಳುತ್ತಾರೆ ಅನ್ನೊದನ್ನು ಕೇಳಬೇಕು.ಮಂಡ್ಯಗೆ ಹೋಗಿ ಅವರ ಮುಂದೆನೇ ನಿಲುವನ್ನು ಸ್ಪಷ್ಟಪಡಿಸುತ್ತೇನೆ.

ಬೇರೆ ಪಕ್ಷದಿಂದಲೂ ಆಫರ್ ಇತ್ತು

ಸುಲಭವಾಗಿ ಗೆಲ್ಲುವ ಕ್ಷೇತ್ರದ ಆಫರ್ ಇತ್ತು.ಬೇರೆ ಪಕ್ಷದಿಂದಲೂ ಆಫರ್ ಇತ್ತು. ಅದಕ್ಕೆ ಮಂಡ್ಯ ಬಿಟ್ಟರೇ ಮತ್ತೆಲ್ಲೂ ಹೋಗುತ್ತಿಲ್ಲ ನನ್ನ ಅಸ್ತಿತ್ವ ಅಂದ್ರೆ ಮಂಡ್ಯ. ಅದನ್ನ ಕಳೆದುಕೊಳ್ಳಲ್ಲ.ಅವರಿಗೆ ಹೋಗಿದೆ ಎಂಬ ಬಗ್ಗೆ ಮಾತಾಡಲ್ಲ ನಾವು ಉಳಿಸಿಕೊಂಡಿದ್ರೆ ಒಳ್ಳೆದಿತ್ತು.

ನನ್ನ ಭೇಟಿಗೆ ಆಕ್ಷೇಪ ಇಲ್ಲ

ಇದು ಅಂಬರೀಶ್ ಮನೆ.ಯಾರೇ ಬಂದ್ರೂ ಸ್ವಾಗತ.ಮೈಸುಗರ್ ವಿಚಾರದಲ್ಲಿ ಕಾರ್ಯ ಆರಂಭ ಮಾಡದಾಗ ನಾರಾಯಣ ಸಚಿವರಾಗಿರಲಿಲ್ಲ.ಅವರ ಬೆಂಬಲ ಇಲ್ಲ ಅಂತಲ್ಲ ಯಡಿಯೂರಪ್ಪ ಅವರು ಸಹಕಾರ ಕೊಟ್ಟರು.ಬೊಮ್ಮಾಯಿ ಕೂಡ ಬೆಂಬಲಿಸಿದ್ರು ಬೇರೆ ಅಫರ್ ಎನು ಕೊಟ್ಟಿಲ್ಲ.ಆ ತರ ಕೇಳಿ ಪಡೆಯುವ ಅಭ್ಯಾಸ ಇಲ್ಲ ಇದ್ರಿದ್ರೆ ನಾವು ಮುಂದೆ ಇರುತ್ತಿರಲಿಲ್ಲ ಎಂದ ಸುಮಲತಾ ಅಂಬರೀಶ್​ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES