Saturday, April 27, 2024

Toll Hike: ವಾಹನ ಸವಾರರಿಗೆ ಬಿಗ್ ಶಾಕ್!: ಮತ್ತೆ ಜೇಬಿಗೆ ಕತ್ತರಿ

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬೆಂಗಳೂರು-ಮೈಸೂರು ಹೆದ್ದಾರಿಯ ಟೋಲ್‌ ದರವನ್ನು ಹೆಚ್ಚಳ ಮಾಡಿ ವಾಹನ ಸವಾರರಿಗೆ ಟೋಲ್‌ ಬರೆ ಎಳೆದಿದೆ.

ಹೌದು,ಏಪ್ರಿಲ್‌ 1ರಿಂದ ಪರಿಷ್ಕೃತ ದರವು ಜಾರಿಯಾಗಲಿದೆ. ಹೆದ್ದಾರಿ ಟೋಲ್‌ ಎರಡು ಬಾರಿ ಪರಿಷ್ಕರಣೆಯಾಗಿದೆ.

ನಿಡಘಟ್ಟ, ಕಣಮಿಣಿಕ ಹಾಗೂ ಶೇಷಗಿರಿಹಳ್ಳಿ ಟೋಲ್‌ ಪ್ಲಾಜಾವರೆಗಿನ 56 ಕಿ.ಮೀ ಉದ್ದದ ಹೆದ್ದಾರಿಗೆ ಈ ಪರಿಷ್ಕೃತ ದರ ಅನ್ವಯವಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕರವು ಮಾಹಿತಿ ನೀಡಿದೆ.

ಪ್ರತಿ ಹಣಕಾಸು ವರ್ಷದಂದು ಎಲ್ಲ ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ ಶುಲ್ಕ ಪರಿಷ್ಕರಣೆ ಮಾಡಲಾಗುತ್ತದೆ. ಅದರಂತೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಶುಲ್ಕದಲ್ಲೂ ಪರಿಷ್ಕರಣೆ ಮಾಡಲಾಗಿದೆ.

ಯಾವ ವಾಹನಕ್ಕೆ ಎಷ್ಟು ಶುಲ್ಕ?

ವಾಹನ ಒನ್‌ ಸೈಡ್‌ ರಿಟರ್ನ್‌ ಜರ್ನಿ ತಿಂಗಳ ಪಾಸ್‌(ಒನ್‌ಸೈಡ್‌)
ಕಾರು, ಜೀಪು, ವ್ಯಾನ್‌ ₹ 170 ₹ 255 ₹ 5,715
ಲಘು ವಾಹನ, ಮಿನಿ ಬಸ್‌ 275 415 9,230
2 ಆಕ್ಸೆಲ್‌ ಟ್ರಕ್‌/ಬಸ್‌ 580 570 19,345
3 ಆಕ್ಸೆಲ್‌ ವಾಣಿಜ್ಯ ವಾಹನ 635 950 21,100
ಭಾರಿ ವಾಹನ (4-6 ಆಕ್ಸೆಲ್‌) ‌910 1,365 30,335
ದೊಡ್ಡ ವಾಹನ (7ಕ್ಕಿಂತ ಹೆಚ್ಚು ಆಕ್ಸೆಲ್‌) 1,110 1,660 36,930
ವಾಹನ ಹಳೆ ದರ ಹೊಸ ದರ ಹೆಚ್ಚಳ
ಕಾರು, ಜೀಪು, ವ್ಯಾನ್‌ 135 170 35
ಲಘು ವಾಹನ, ಮಿನಿ ಬಸ್‌ 220 275 55
2 ಆಕ್ಸೆಲ್‌ ಟ್ರಕ್‌/ಬಸ್‌ 460 580 120
3 ಆಕ್ಸೆಲ್‌ ವಾಣಿಜ್ಯ ವಾಹನ 500 635 135
ಭಾರಿ ವಾಹನ (4-6 ಆಕ್ಸೆಲ್‌) 720 910 190
ದೊಡ್ಡ ವಾಹನ (7ಕ್ಕಿಂತ ಹೆಚ್ಚು ಆಕ್ಸೆಲ್‌) 880 1,110 880

 

RELATED ARTICLES

Related Articles

TRENDING ARTICLES