Saturday, April 27, 2024

ಕೋಟಿ ಕುಳ ಹಾಸನದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ : ಒಟ್ಟು ಅಸ್ತಿ ವಿವರ ಹೀಗಿದೆ

ಹಾಸನ: ಹಾಸನದ ಮೈತ್ರಿ ಅಭ್ಯರ್ಥಿಯಾಗಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಇಂದು ಲೋಕಸಭೆ ಚುನಾವಣೆಗಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಹಾಸನ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪ್ರಜ್ವಲ್ ರೇವಣ್ಣ. ಅಫಡವಿಟ್​ನಲ್ಲಿ ಆಸ್ತಿಯ ವಿವರಗಳನ್ನು ತಿಳಿಸಿದ್ದಾರೆ.

ಹೌದು, 18 ಕೋಟಿ,52 ಲಕ್ಷದ 21 ಸಾವಿರ ಮೌಲ್ಯದ ಚರ ಸ್ಥಿರಾಸ್ಥಿ ಹೊಂದಿದ್ದಾರೆ. 5,44 ಕೋಟಿ ಚರ, 4.43 ಕೋಟಿ ಸ್ಥಿರ ಆಸ್ತಿ ಸೇರಿ 18.52 ಕೋಟಿ ಮೌಲ್ಯದ ಆಸ್ತಿಯನ್ನು ಪ್ರಜ್ವಲ್ ರೇವಣ್ಣನ ಬಳಿ ಇದೆ.ಸದ್ಯ 9.29 ಲಕ್ಷ ನಗದು ಹೊಂದಿರೊದಾಗಿ ಪ್ರಮಾಣ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ವಿವಿಧ ಬ್ಯಾಂಕ್ ಗಳ ಉಳಿತಾಯ ಖಾತೆಯಲ್ಲಿ 56 ಲಕ್ಷ ನಗದು ಹಾಗೂ ಕಳೆದ ಐದು ವರ್ಷದಲ್ಲಿ ಕೃಷಿಯಿಂದ 2.75 ಕೋಟಿ ಆದಾಯಗಳಿಸಿದ್ದಾರೆ.ಇನ್ನೂ ಕೃಷಿಯೇತರ ಮೂಲದಿಂದ 1.33 ಕೋಟಿ ಆದಾಯ ಗಳಿಕೆ ಮಾಡಿದ್ಧಾರೆ.

31 ಹಸು, ನಾಲ್ಕು ಎತ್ತು, ಒಂದು ಟ್ರ್ಯಾಕ್ಟರ್ 

ಬೆಂಗಳೂರು ಮೈಸೂರು ಸೇರಿ ವಿವಿದೆಡೆ ವಾಣಿಜ್ಯ ಕಟ್ಟಡ ಹೊಳೆನರಸೀಪುರ ಹಾಗೂ ಬೆಂಗಳೂರಿನ ನೆಲಮಂಗಲದಲ್ಲಿ ಆಸ್ತಿ ಹೊಂದಿದ್ದಾರೆ.

ಒಟ್ಟು 4.48 ಕೋಟಿ ಸಾಲ

ಅತ್ತೆ ಅನುಸೂಯರಿಂದ 22 ಲಕ್ಷ, ಅತ್ತೆ ಶೈಲಜಾರಿಂದ 10 ಲಕ್ಷ ಸಾಲ ತಂದೆ ರೇವಣ್ಣರಿಂದ 86 ಲಕ್ಷ ಸಹೋದರ ಡಾ ಸೂರಜ್ ರಿಂದ 1ಕೋಟಿ ಸಾಲ ಹಾಗೂ ಸರ್ಕಾರಕ್ಕೆ 3.04 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಬಗ್ಗೆ ಮಾಹಿತಿ ಮತ್ತು ತೆರಿಗೆ ಸಲ್ಲಿಕೆ ಬಗ್ಗೆ ಕಾನೂನು ಹೋರಾಟ ನಡೆಸುತ್ತಿರೊ ಬಗ್ಗೆ ಯೂ ಪ್ರಮಾಣ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ಕೆಜಿಗಟ್ಟಲೆ ಚಿನ್ನ ಬೆಳ್ಳಿ ಹೊಂದಿರೊ ಪ್ರಜ್ವಲ್

67 ಲಕ್ಷದ 1 kg 100g ಚಿನ್ನ,17.48 ಲಕ್ಷ ಮೌಲ್ಯದ 23 ಕೆಜಿ ಬೆಳ್ಳಿ ಹಾಗು 1.90 ಲಕ್ಷ ಮೌಲ್ಯದ ವಜ್ರದ ಆಭರಣ ಹೊಂದಿದ್ದಾರೆ.

affidavit (1)

RELATED ARTICLES

Related Articles

TRENDING ARTICLES