Saturday, April 27, 2024

ಅಕ್ರಮ ಗಾಂಜಾ ಮಾರಾಟ ಜಾಲ ಪತ್ತೆ: ಆರೋಪಿಗಳ ಬಂಧನ!

ಬಳ್ಳಾರಿ : ಅಕ್ರಮವಾಗಿ ಗಾಂಜಾ ಸೇವನೆ ಮಾಡಿ ಮಾರಾಟ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿರುವ ಘಟನೆ ಬಳ್ಳಾರಿ ನಗರದಲ್ಲಿ ನಡೆದಿದೆ.

ಇದನ್ನೂ ಓದಿ: ಬೆಳ್ಳಂ ಬೆಳಗ್ಗೆ ಹೈಟೆಕ್​ ಜಿಂಕೆ ಬೇಟೆಗಾರರ ಬಂಧನ!

ಸೈಯದ್​ ಗುಲಾಬ್​ ಮತ್ತು ಆಲಂ ಬಾಷಾ ಬಂಧಿತ ಆರೋಪಿಗಳು, ಬಳ್ಳಾರಿ ನಗರದ ಮೋತಿ ಸರ್ಕಲ್​ ಬಳಿಯ ವೆಟರ್ನರಿ ಆಸ್ಪತ್ರೆ ಕಾಂಪೌಂಡ್​ ಬಳಿ ಗಾಂಜಾ ಸೇವನೆ ಮಾಡಿ, ಮಾರಾಟ ಮಾಡುತ್ತಿದ್ದರು, ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನ ಬ್ರೂಸ್​ಪೇಟೆ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿ ಆರೋಪಿಗಳಿಂದ 750 ಗ್ರಾಂ ತೂಕದ 75 ಸಾವಿರಕ್ಕು ಅಧಿಕ ಬೆಲೆ ಬಾಳುವ  ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.

ಘಟನೆ ಸಂಬಂಧ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

RELATED ARTICLES

Related Articles

TRENDING ARTICLES