Saturday, April 27, 2024

ಬಿಜೆಪಿ ಇಂತಹ ಚೀಪ್ ಪಾಲಿಟಿಕ್ಸ್ ಕೈ ಬಿಡಬೇಕು: ಎಂ.ಲಕ್ಷ್ಮಣ್

ಮೈಸೂರು: ನಾನು ಹುಟ್ಟುತ್ತ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ ಎಂದು ಹೇಳತ್ತಾರೆ ಇವರು ಇಂತಹ ಚೀಪ್ ಪಾಲಿಟಿಕ್ಸ್ ಕೈ ಬಿಡಬೇಕು ಎಂದು ಕಾಂಗ್ರೆಸ್​ ಅಭ್ಯರ್ಥಿ ಎಂ.ಲಕ್ಷ್ಮಣ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾನು ಒಕ್ಕಲಿಗ ಮತ ತೆಗೆದುಕೊಳ್ಳುತ್ತೇನೆ ಅಂತ ಈ ರೀತಿ ಗೊಂದಲ ಮಾಡ್ತಿದ್ದಾರೆ. ನಾನು ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ಕುಲುವನಹಳ್ಳಿಯಲ್ಲಿ. ಮೈಸೂರಿಗೆ ಬಂದು ನೆಲೆನಿಂತು 35 ವರ್ಷ ಆಯ್ತು.ನನ್ನ ತಂದೆ ಮುದ್ದಲಿಂಗೇಗೌಡ ತಾಯಿ ಸಾಕಮ್ಮ.ನಾನು ಮೈಸೂರು ಕನ್ನೇಗೌಡನ ಕೊಪ್ಪಲಿನಲ್ಲಿ ಇದ್ದಾನೆ ಮಾವ ನಿವೃತ್ತ ಎನ್‌ಸಿಸಿ ಆಫಿಸರ್ ಕೆಸಿ.ಮರೀಗೌಡ, ಅತ್ತೆ ಲಕ್ಷ್ಮಿ. ಪತ್ನಿ ರೂಪಶ್ರೀಗೌಡ, ಮಗಳು ವರ್ಷಿತಾಗೌಡ, ಮಗ ಆದಿತ್ಯಾ ಲಕ್ಷ್ಮಣ್.
ನಾನು ಹುಟ್ಟುತ್ತ ಒಕ್ಕಲಿಗ ಹೌದು ಆಗಂತ ಲಕ್ಷ್ಮಣ್ ಗೌಡ ಅಂತ ಹೆಸರು ಇಟ್ಟುಕೊಂಡಿಲ್ಲ.

ಎಲ್ಲಾ ಜಾತಿಯನ್ನು ಒಟ್ಟಿಗೆ ತೆಗೆದುಕೊಂಡು ಹೋಗುವವನು ನಾನು ಎಂದು  ಜಾತಿ ಸಾಬೀತು ಮಾಡಲು ಮಾಧ್ಯಮದ ಮುಂದೆ ವಂಶವೃಕ್ಷವನ್ನೇ ಕೈ ಅಭ್ಯರ್ಥಿ ಎಂ‌. ಲಕ್ಷ್ಮಣ್ ಬಿಚ್ಚಿಟ್ಟರು.

ಪ್ರತಾಪಸಿಂಹ ಮೊದಲ ಬಾರಿ ಬಂದಾಗ ಗೌಡ ಅಂತಾ ಬದಲಿಸಿಕೊಂಡ್ರು. ಅದೇ ರೀತಿ ನಾನು ಲಕ್ಷ್ಮಣ್ ಗೌಡ ಅಂತಾ ಬದಲಾಯಿಸಿಕೊಳ್ಳಬೇಕಾ? ಹಣೆಯ ಮೇಲೆ ಒಕ್ಕಲಿಗ ಅಂತಾ ಬರೆದುಕೊಂಡು ಓಡಾಡಲು ಆಗುತ್ತಾ? ಸಂಸದ ಪ್ರತಾಪ್​ಸಿಂಹಗೆ ಒಕ್ಕಲಿಗರು 10 ವರ್ಷ ಅವಕಾಶ ಕೊಟ್ಟಿದ್ದಾರೆ. ನನಗೂ ಒಂದು ಅವಕಾಶ ಕೊಡಿ ಎಂದು ಕೇಳುವುದು ತಪ್ಪಾ ಎಂದು ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES