Tuesday, May 7, 2024

ನಟಿ ಕಂಗನಾ ರಣಾವತ್​ಗೆ ಬಿಜೆಪಿ ಟಿಕೆಟ್ : ಯಾವ ಕ್ಷೇತ್ರದಿಂದ ಕಂಗನಾ ಸ್ಪರ್ಧೆ?

ಬೆಂಗಳೂರು : ಲೋಕಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಬಾಲಿವುಡ್​ನ ಖ್ಯಾತ ನಟಿ ಕಂಗನಾ ರಣಾವತ್​ ಅವರ ಹೆಸರು ಘೋಷಿಸಲಾಗಿದೆ.

ಇಂದು 111 ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಪ್ರಕಟಿಸಿದೆ. ಕಂಗನಾ ರಣಾವತ್ ಅವರಿಗೆ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.​

ಇತ್ತೀಚೆಗಷ್ಟೇ ಕಂಗನಾ ರಣಾವತ್ ರಾಜಕೀಯಕ್ಕೆ ಬರಲು ಇದೇ ಸರಿಯಾದ ಸಮಯ ಎಂದು ಹೇಳಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಬಿಜೆಪಿ ಸೇರಿದರೆ ಸ್ವಾಗತಿಸುವುದಾಗಿ ಹೇಳಿದ್ದರು. 2ನೇ ಪಟ್ಟಿಯಲ್ಲಿ ಕಂಗನಾ ಹೆಸರಿದ್ದು, ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.

ಕಂಗನಾ ರಣಾವತ್ ಫಸ್ಟ್ ರಿಯಾಕ್ಷನ್

ನನ್ನ ಪ್ರೀತಿಯ ಭಾರತ ಮತ್ತು ಭಾರತೀಯ ಜನತಾ ಪಕ್ಷದ ಸ್ವಂತ ಪಕ್ಷವಾದ ಬಿಜೆಪಿಗೆ ಯಾವಾಗಲೂ ನನ್ನ ಬೇಷರತ್ ಬೆಂಬಲವಿದೆ. ಇಂದು ನನ್ನ ಜನ್ಮಸ್ಥಳ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ನನ್ನನ್ನು ಲೋಕಸಭಾ ಅಭ್ಯರ್ಥಿಯಾಗಿ ಘೋಷಿಸಿದೆ. ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳಲು ನನಗೆ ಗೌರವ ಮತ್ತು ಹರ್ಷವಿದೆ. ನಾನು ಯೋಗ್ಯ ಕಾರ್ಯಕರ್ತೆ ಮತ್ತು ವಿಶ್ವಾಸಾರ್ಹ ಜನ ಸೇವಕಿಯಾಗಲು ಎದುರು ನೋಡುತ್ತಿದ್ದೇನೆ. ಧನ್ಯವಾದಗಳು ಎಂದು ಕಂಗನಾ ರಣಾವತ್ ಟ್ವೀಟ್ ಮಾಡಿದ್ದಾರೆ.

ಇವರಿಗೆಲ್ಲಾ ಬಿಜೆಪಿ ಟಿಕೆಟ್

  • ಕೇರಳದ ವಯನಾಡು ಲೋಕಸಭಾ ಕ್ಷೇತ್ರ-ಕೆ. ಸುರೇಂದ್ರನ್​
  • ಕೇರಳದ ಆಲತ್ತೂರ ಲೋಕಸಭಾ ಕ್ಷೇತ್ರ-ಟಿ.ಎನ್. ಸರಾಸು
  • ಕೇರಳದ ಎರ್ನಾಕುಲಂ ಲೋಕಸಭಾ ಕ್ಷೇತ್ರ-ಕೆ.ಎಸ್. ರಾಧಾಕೃಷ್ಣನ್​
  • ಕೇರಳದ ಕೊಲ್ಲಂ ಲೋಕಸಭಾ ಕ್ಷೇತ್ರ-ಜಿ. ಕೃಷ್ಣಕುಮಾರ್​
  • ಉತ್ತರ ಪ್ರದೇಶದ ಸುಲ್ತಾನ್​ಪುರ ಲೋಕಸಭಾ ಕ್ಷೇತ್ರ-ಮನೇಕಾ ಗಾಂಧಿ
  • ಮಹಾರಾಷ್ಟ್ರದ ಭಂಡಾರ-ಗೊಂದಿಯಾ ಲೋಕಸಭಾ ಕ್ಷೇತ್ರ-ಸುನೀಲ್ ಬಾಬುರಾವ್ ಮೇಂಢೆ
  • ಮಹಾರಾಷ್ಟ್ರದ ಗಡ್​ಚಿರೋಲಿ-ಚಿಮೂರ ಲೋಕಸಭಾ ಕ್ಷೇತ್ರ-ಅಶೋಕ್ ಮಹದೇವರಾವ್ ನೆತೆ
  • ಮಹಾರಾಷ್ಟ್ರದ ಸೊಲ್ಲಾಪುರ ಲೋಕಸಭಾ ಕ್ಷೇತ್ರ-ರಾಮ್​ ಸಾತ್​ಪುತೆ
  • ಮಹಾರಾಷ್ಟ್ರದ ಔರಂಗಬಾದ್ ಲೋಕಸಭಾ ಕ್ಷೇತ್ರ-ಸುಶೀಲ್ ಕುಮಾರ್ ಸಿಂಗ್​​
  • ಮಹಾರಾಷ್ಟ್ರದ ನವಾಡ ಲೋಕಸಭಾ ಕ್ಷೇತ್ರ-ವಿವೇಕ್ ಠಾಕೂರ್​
  • ಒಡಿಶಾ ಬಾರ್​ಗಢ ಲೋಕಸಭಾ ಕ್ಷೇತ್ರ-ಪ್ರದೀಪ್ ಪುರೋಹಿತ್​​
  • ಒಡಿಶಾ ಸುಂದರ್​ಗಢ ಲೋಕಸಭಾ ಕ್ಷೇತ್ರ-ಜ್ಯುಯೆಲ್ ಓರಾಮ್​​
  • ಒಡಿಶಾ ಸಂಬಲ್​ಪುರ ಲೋಕಸಭಾ ಕ್ಷೇತ್ರ-ಧರ್ಮೇಂದ್ರ ಪ್ರಧಾನ್​​
  • ಒಡಿಶಾದ ಪುರಿ ಲೋಕಸಭಾ ಕ್ಷೇತ್ರ-ಸಂಬಿತ್ ಪಾತ್ರಾ
  • ಗುಜರಾತ್​ನ ಮೆಹ್​ಸಾನಾ ಲೋಕಸಭಾ ಕ್ಷೇತ್ರ-ಹರಿಭಾಯ್ ಪಟೇಲ್​
  • ಗುಜರಾತ್​ನ ಸಾಬರಕಾಂಠಾ ಲೋಕಸಭಾ ಕ್ಷೇತ್ರ-ಶೋಭನಾಬೆನ್​ ಮಹೇಂದ್ರಸಿಂಗ್ ಬರೈಯಾ
  • ಗುಜರಾತ್​ನ ಸುರೇಂದ್ರನಗರ ಲೋಕಸಭಾ ಕ್ಷೇತ್ರ-ಚಂದುಭಾಯ್ ಛಗನ್​ಭಾಯ್ ಶಿಹೋರಾ
  • ಗುಜರಾತ್​ನ ಜುನಾಗಢ್ ಲೋಕಸಭಾ ಕ್ಷೇತ್ರ-ರಾಜೇಶಭಾಯ್ ಚುಡಾಸಮಾ
  • ಗುಜರಾತ್​ನ ಅಮ್ರೇಲಿ ಲೋಕಸಭಾ ಕ್ಷೇತ್ರ-ಭರತ್​ಭಾಯ್ ಮನುಭಾಯ್ ಸುತಾರಿಯಾ
  • ಗುಜರಾತ್​ನ ವಡೋದರ ಲೋಕಸಭಾ ಕ್ಷೇತ್ರ-ಹೆಮಂಗ್ ಯೋಗೇಶ್ಚಂದ್ರ ಜೋಶಿ
  • ಹರಿಯಾಣ ಕುರುಕ್ಷೇತ್ರ ಲೋಕಸಭಾ ಕ್ಷೇತ್ರ-ನವೀನ್ ಜಿಂದಾಲ್​​​
  • ಬಿಹಾರದ ಪಶ್ಚಿಮ ಚಂಪಾರಣ್ ಲೋಕಸಭಾ ಕ್ಷೇತ್ರ-ಸಂಜಯ್ ಜೈಸ್ವಾಲ್​
  • ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರ-ಕಂಗನಾ ರಣಾವತ್​
  • ದಕ್ಷಿಣ ಗೋವಾ ಲೋಕಸಭಾ ಕ್ಷೇತ್ರ-ಪಲ್ಲವಿ ಶ್ರೀನಿವಾಸ ಡೆಂಪೋ
  • ಮಿಜೋರಾಂ ಲೋಕಸಭಾ ಕ್ಷೇತ್ರ-ವನ್ಲಾಲ್ಹ್​ಮುಕ

RELATED ARTICLES

Related Articles

TRENDING ARTICLES