Thursday, May 2, 2024

ರಸೆಲ್ ತೂಫಾನ್ ಬ್ಯಾಟಿಂಗ್.. ಹೈದರಾಬಾದ್​ಗೆ 209 ರನ್​ಗಳ ಬೃಹತ್ ಟಾರ್ಗೆಟ್ ನೀಡಿದ ಕೆಕೆಆರ್

ಬೆಂಗಳೂರು : ಆಂಡ್ರೆ ರಸೆಲ್ ಸಿಡಿಲಬ್ಬರದ ಬ್ಯಾಟಿಂಗ್.. ಸಾಲ್ಟ್, ರಮಂದೀಪ್ ಹಾಗೂ ರಿಂಕು ಕ್ಲಾಸಿಕ್ ಆಟ.. ಅಯ್ಯರ್ ಪಡೆ ಆರ್ಭಟಕ್ಕೆ ಹೈದರಾಬಾದ್ ಸ್ಟಾರ್ ಬೌಲರ್​ಗಳು ಕಕ್ಕಾಬಿಕ್ಕಿ!

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಆಲ್​ರೌಂಡರ್ ಆಂಡ್ರೆ ರಸೆಲ್ ತೂಫಾನ್ ಬ್ಯಾಟಿಂಗ್ ನಡೆಸಿದರು. ಪರಿಣಾಮ ಕೆಕೆಆರ್ 208 ರನ್​ಗಳ ಬೃಹತ್ ಮೊತ್ತ ಗಳಿಸಿತು.

ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್, ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 208 ರನ್​ ಕಲೆಹಾಕಿತು.

ಆಂಡ್ರೆ ರಸೆಲ್ 25 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್ ನೆರವಿನಿಂದ ಅಜೇಯ 64 ರನ್​ ಚಚ್ಚಿದರು. ಫಿಲಿಪ್ ಸಾಲ್ಟ್ 54, ರಮಂದೀಪ್ 35, ರಿಂಕು ಸಿಂಗ್ 23 ರನ್​ ಗಳಿಸಿದರು. ನಾಯಕ ಶ್ರೇಯಸ್ ಅಯ್ಯರ್ ಡಕೌಟ್ ಆದರು. ವೆಂಕಟೇಶ್ ಅಯ್ಯರ್ 7, ನಿತೀಶ್ ರಾಣಾ 9 ರನ್​ ಗಳಿಸಲಷ್ಟೇ ಶಕ್ತರಾದರು.

ಕೆಕೆಆರ್ ಪರ ಟಿ ನಟರಾಜನ್ 3, ಮಯಾಂಕ್ ಮಾರ್ಕಾಂಡೆ 2, ಪ್ಯಾಟ್ ಕಮಿನ್ಸ್ ಒಂದು ವಿಕೆಟ್ ಪಡೆದರು. ಸನ್‌ರೈಸರ್ಸ್ ಹೈದರಾಬಾದ್ ಗೆಲ್ಲಲು 209 ರನ್​ ಗಳಿಸಬೇಕಿದೆ.

RELATED ARTICLES

Related Articles

TRENDING ARTICLES