Wednesday, May 22, 2024

ಕಮಲ ಕೆರೆಯಲ್ಲಿದ್ದರೆ ಚೆಂದ ತೆನೆ ಹೊಲದಲ್ಲಿದ್ದರೆ ಚೆಂದ ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿರಬೇಕು: ಡಿಕೆಶಿ ಲೇವಡಿ

ಬೆಂಗಳೂರು: ಕಮಲ ಕೆರೆಯಲ್ಲಿದ್ದರೆ ಚೆಂದ ತೆನೆ ಹೊಲದಲ್ಲಿದ್ದರೆ ಚೆಂದ ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿರಬೇಕು ಎಂದು ಡಿಸಿಎಂ ಡಿ.ಕೆ ಶಿವಕುಮಾರ್​ ಬಿಜೆಪಿ,ಜೆಡಿಸ್​ನ್ನು ಲೇವಡಿ ಮಾಡಿದ್ದಾರೆ.

ಗ್ಯಾರಂಟಿ ಯಶಸ್ವಿ ಸಮಾವೇಶದಲ್ಲಿ ಮಾತನಾಡಿದ ಅವರು,ನಾವು ನಿಮಗೆ ಶಕ್ತಿ ಕೊಟ್ಟಿದ್ದೇವೆ ನೀವು ನಮಗೆ ಯಾವ ಶಕ್ತಿ ಕೊಡ್ತೀರಾ..? 15 ಜನ ಮನೆ ಮನೆಗೆ ಹೋಗಬೇಕು ಎಲ್ಲ ಸದಸ್ಯರನ್ನ ಸೇರಿಸಿಕೊಂಡು ಹೋಗಬೇಕು.ಕಮಲ ಕೆರೆಯಲ್ಲಿದ್ದರೆ ಚೆಂದ ತೆನೆ ಹೊಲದಲ್ಲಿದ್ದರೆ ಚೆಂದ ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿರಬೇಕು ಪರೋಕ್ಷವಾಗಿ ಬಿಜೆಪಿ,ಜೆಡಿಎಸ್ ವಿರುದ್ಧ ಲೇವಡಿ ಮಾಡಿ ಅವರನ್ನ ಸೋಲಿಸಿ ಮನೆಗೆ ಕಳಿಸಿ ಎಂದರು.

ನಮ್ಮ ಗ್ಯಾರೆಂಟಿ ಬಗ್ಗೆ ಅವಹೇಳನ ಮಾಡಿದ್ದಾರೆ.ಮಧ್ಯಪ್ರದೇಶದಲ್ಲಿ ಕಾಪಿ ಹೊಡೆದ್ರು ಈಗ ಮೋದಿ ಗ್ಯಾರೆಂಟಿ ಅಂತ ಮಾಡಿಕೊಂಡಿದ್ದಾರೆ ವೋಟಿಗೆ 2೦೦,3೦೦ ಕೊಡ್ತಾರಂತೆ ಅನ್ನೋದು ಬೇಡ ನಾವು 5೦೦೦ ಕೊಡ್ತಿದ್ದೇವೆ,ನಮಗೆ ಅಷ್ಟೇ ಸಾಕು ಧರ್ಮಸ್ಥಳದ ವಿರೇಂದ್ರ ಹೆಗ್ಗಡೆ ಸಿಎಂಗೆ ಪತ್ರ ಬರೆಯುತ್ತಾರೆ ನಮ್ಮ ದೇವಸ್ಥಾನ ತುಂಬೋಯ್ತು ಅಂಗಡಿ ಮುಂಗಟ್ಟು ತುಂಬೋಯ್ತು ಅಂತ ಪತ್ರ ಬರೆದ್ರು ಅದು ಧರ್ಮಸ್ಥಳದ ಮಂಜುನಾಥನ ಸನ್ನಿದಿಯಿಂದ ಬರೆದಿದ್ದರು.ಅದಕ್ಕೆ ನಮ್ಮ ಗ್ಯಾರೆಂಟಿಗಳ ಮಹತ್ವ ಇದೆ ಎಂದು ಹೇಳಿದ್ದರು.

ಜೂನ್​ನಲ್ಲಿ ನಮಗೆ ಬಹುಮತ ಸಿಗಲಿದೆ

ನಮ್ಮದು ಗೃಹ ಲಕ್ಷ್ಮಿ, ಅವರದ್ದು ಮಹಾಲಕ್ಷ್ಮಿ ಶ್ರಮಿಕ ನ್ಯಾಯ ನಮ್ಮದು ಬೆಳೆ ವಿಮೆ,ಸಾಲಮನ್ನಾ ಎಲ್ಲವೂ ನಮ್ಮ ಮುಂದಿದೆ ರಾಮಮಂದಿರ ದೇವಸ್ಥಾನ ಗಾಳಿ ಯಾವುದೂ ಇಲ್ಲ ನಾವು ಅರ್ಚಕರಿಗೆ ನೆರವು ಕೊಟ್ಟೆವು ಅದನ್ನ ಬಿಜೆಪಿ,ಜೆಡಿಎಸ್ ವಿರೋಧ ಮಾಡಿದ್ರು ಅದನ್ನ ಗೌರ್ನರ್ ವಾಪಸ್ ಕಳಿಸಿದ್ರು ಜೂನ್​ನಲ್ಲಿ ನಮಗೆ ಬಹುಮತ ಸಿಗಲಿದೆ ಆಗ ನಾವು ಅದನ್ನ ಜಾರಿಗೆ ತರ್ತೇವೆ ಎಂದರು.

ನಾವು ನಿಮ್ಮ ಕೆಲಸ ವಾಚ್ ಮಾಡ್ತೇವೆ ಸಿಎಂ ನಿವಾಸದಲ್ಲಿ ವಾರ್ ರೂಂ ಇರುತ್ತೆ ನನ್ನ ಕಚೇರಿಯಲ್ಲೂ ವಾರ್ ರೂಂ ಇರುತ್ತೆ ಪಕ್ಷದ ಕಚೇರಿಯಲ್ಲೂ ವಾರ್ ರೂಂ ಇರುತ್ತೆ ಜಿಲ್ಲಾ ತಾಲೂಕು‌ ಮಟ್ಟದಲ್ಲಿ ವಾರ್ ರೂಂ ಮಾಡ್ತೇವೆ ಬೂತ್ ನಲ್ಲಿ ಮತ ಕೊಡಿಸುವುದು ನಿಮ್ಮ ಜವಾಬ್ದಾರಿ ಇಲ್ಲವಾದರೆ ನಿಮ್ಮ ನಾಯಕತ್ವವೇ ಇರುವುದಿಲ್ಲ ಮುಖಂಡರಿಗೆ ಎಚ್ಚರಿಕೆಯನ್ನು ಡಿ.ಕೆ ಶಿವಕುಮಾರ್​ ನೀಡಿದ್ದರು.

RELATED ARTICLES

Related Articles

TRENDING ARTICLES