Thursday, May 9, 2024

ತಾಯಿಯ ಅನೈತಿಕ ಸಂಬಂಧಕ್ಕೆ ಮಗನಿಂದ ಜೋಡಿ ಕೊಲೆ; ಮೂವರ ಬಂಧನ

ವಿಜಯಪುರ: ಜಿಲ್ಲೆಯ ನಿಡಗುಂದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾ.19 ರಂದು ನಡೆದಿದ್ದ ಜೋಡಿ ಕೊಲೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದು, ಬಂಧಿತರಲ್ಲಿ ಮಹಿಳೆಯ ಮಗನೂ ಸೇರಿದ್ದಾನೆ.

ಬಂಧಿತರನ್ನು ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಲಕ್ಷ್ಮಣ ಭೀಮಪ್ಪ ತಳವಾರ, ಆತನ ಸ್ನೇಹಿತರಾದ ಶಶಿಕುಮಾರ ರಂಗಪ್ಪ ಮಣಗೂರು ಹಾಗೂ ಬಸವರಾಜ ಪರಪ್ಪ ಹಡಪದ ಎಂದು ಗುರುತಿಸಲಾಗಿದೆ.

ಲಕ್ಷ್ಮಣ ತಳವಾರ ಹತ್ಯೆಯಾಗಿರುವ ಪಾರ್ವತಿಯ ಮಗ. ಪಾರ್ವತಿ ಗಣಿ ಗ್ರಾಮದ ಸೋಮನಿಂಗಪ್ಪ ಕುಂಬಾರ ಎಂಬಾತನೊಂದಿಗೆ ಅನೈತಿಕ ಸಬಂಧ ಹೊಂದಿದ್ದಳು. ತಾಯಿಯ ಅನೈತಿಕ ಸಂಬಂಧದಿಂದ ರೋಸಿ ಹೋಗಿದ್ದ ಮಗ ಲಕ್ಷ್ಮಣ ತನ್ನ ಇನ್ನಿಬ್ಬರು ಸ್ನೇಹಿತರೊಂದಿಗೆ ಸೇರಿಕೊಂಡು ಹತ್ಯೆಯ ಸಂಚು ರೂಪಿಸಿದ್ದ.

ಇದನ್ನೂ ಓದಿ: ಕಾಂಗ್ರೆಸ್ ಮಾಜಿ ಸಂಸದ ಮೂಡಲಗಿರಿಯಪ್ಪ ನಿಧನ

ಮಾ.18 ರಂದು ರಾತ್ರಿ ಆಕಳವಾಡಿ-ಮಾರಡಗಿ ಬಳಿ ಲಕ್ಷ್ಮಣನ ತಾಯಿ ಹಾಗೂ ಆಕೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ ಸೇರಿದಂತೆ ಜೋಡಿ ಕೊಲೆ ಮಾಡಿ, ಬಳಿಕ ಆರೋಪಿಗಳು ಪರಾರಿಯಾಗಿದ್ದರು.

ನಿಡಗುಂದಿ ಸಿಪಿಐ ಶರಣಗೌಡ ಗೌಡರ, ಎಸೈ ಶಿವರಾಜ ಧರಿಗೋಣ ನೇತೃತ್ವದ ತನಿಖಾ ತಂಡ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖಾ ತಂಡಕ್ಕೆ ಬಹುಮಾನ ಘೋಷಿಸಿದ್ದಾಗಿ ಎಸ್ಪಿ ಋಷಿಕೇಶ ಭಗವಾನ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES