Saturday, April 27, 2024

ಪಾಕಿಸ್ತಾನದಲ್ಲಿ 5.4 ತೀವ್ರತೆಯ ಪ್ರಭಲ ಭೂಕಂಪನ

ಪಾಕಿಸ್ತಾನ್ ​: ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಮಾ.18 ಮಂಗಳವಾರ ಪ್ರಭಲ ಭೂಕಂಪನವು ಸಂಭವಿಸಿದೆ ಎಂದು ವರದಿಗಳು ತಿಳಿಸಿದೆ.

ಕ್ವೆಟ್ಟಾದಿಂದ ವಾಯವ್ಯಕ್ಕೆ 150 ಕಿಲೋಮೀಟರ್ ದೂರದಲ್ಲಿ 35 ಕಿ.ಮೀ ಆಳದಲ್ಲಿ ಭೂಕಂಪನ ಕೇಂದ್ರಬಿಂದುವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಧಿಕೃತ ಮೂಲಗಳ ಪ್ರಕಾರ, ಕ್ವೆಟ್ಟಾ, ನೋಶ್ಮಿ, ಚಾಗಿ, ಚಮನ್, ಕಿಲ್ಲಾ ಅಬ್ದುಲ್ಲಾ, ದಲ್ವಾದಿನ್, ಪಿಶಿನ್ ಪ್ರಾಂತ್ಯದ ಇತರ ಕೆಲವು ಪ್ರದೇಶಗಳಲ್ಲಿ ಭೂಕಂಪದ ಅನುಭವವಾಗಿದೆ.

ಅಲ್ಲದೇ ಪಾಕಿಸ್ತಾನ-ಇರಾನ್ ಗಡಿ ಪ್ರದೇಶಗಳಲ್ಲಿಯೂ ಭೂಕಂಪದ ಅನುಭವವಾಗಿದೆ ಎಂದು ಪಾಕಿಸ್ತಾನ ಹವಾಮಾನ ಇಲಾಖೆ ತಿಳಿಸಿದೆ. ಭೂಕಂಪದಿಂದ ಯಾವುದೇ ಸಾವು ನೋವು ಹಾಗೂ ಅಸ್ತಿಹಾನಿ ಬಗ್ಗೆ ವರದಿಯಾಗಿಲ್ಲ.

ಇದನ್ನೂ ಓದಿ: ಈಶ್ವರಪ್ಪ ಮನವೊಲಿಕೆ ಆಗುವ ವಿಶ್ವಾಸವಿದೆ: ಬಸವರಾಜ ಬೊಮ್ಮಾಯಿ

ಬಲೂಚಿಸ್ತಾನ್‌ ಪ್ರಾಂತ್ಯದಲ್ಲಿ ಈ ಹಿಂದೆ ಹಲವಾರು ಪ್ರಬಲ ಭೂಕಂಪಗಳು ಸಂಭವಿಸಿವೆ. ಇಲ್ಲಿನ ಹರ್ನೈ ಪ್ರದೇಶದಲ್ಲಿ 2021ರ ಅಕ್ಟೋಬರ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ ಸುಮಾರು 40 ಜನರು ಮೃತಪಟ್ಟು, 300 ಜನರು ಗಾಯಗೊಂಡಿದ್ದರು.

RELATED ARTICLES

Related Articles

TRENDING ARTICLES